ಅಮಾವಾಸ್ಯೆ ಹೆಸರಿನಲ್ಲಿ ಪಾರಿವಾಳಕ್ಕೆ ವಿಷವಿಟ್ಟರಾ ಕ್ರೂರಿಗಳು?

ಒಂದೆಡೆ ರಾಜ್ಯದ ಎಲ್ಲ ಕಡೆಗಳಲ್ಲಿ ಚುನಾವಣೆ ಕಣ ರಂಗೇರಿ ಸೋಲು-ಗೆಲುವಿನ ಲೆಕ್ಕಾಚಾರ ನಡೆದಿದ್ದರೇ, ಇನ್ನೊಂದೆಡೆ ಮಾಟಾ-ಮಂತ್ರ ವಾಮಾಚಾರದ ಭರಾಟೆಯೂ ಜೋರಾಗಿದೆ. ಬೆಂಗಳೂರಿನ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದ ಬಳಿ ನೂರಕ್ಕೂ ಹೆಚ್ಚು ಪಾರಿವಾಳಗಳು ಸಾವನ್ನಪ್ಪಿದೆ.

ನೂರಾರು ಪಾರಿವಾರಗಳು ಸಾಲು-ಸಾಲಾಗಿ ಸತ್ತು ಬಿದ್ದಿದ್ದು, ಯಾರೋ ಕಿಡಿಗೇಡಿಗಳು ವಿಷ ಹಾಕಿರುವ ಶಂಕೆ ವ್ಯಕ್ತವಾಗಿದೆ. ಇಂದು ಯುಗಾದಿ ಹಿಂದಿನ ಅಮವಾಸ್ಯೆ ಆಗಿದ್ದು, ಇಂತಹ ದಿನದಂದು ಪ್ರಾಣಿ-ಪಕ್ಷಿ ಬಲಿಕೊಟ್ರೆ ತಮ್ಮ ಕೆಲಸ ಆಗುತ್ತದೆ ಎಂಬ ಭಾವನೆ ಜನರಲ್ಲಿದೆ. ಈ ಕಾರಣಕ್ಕಾಗಿಯೇ ಹಕ್ಕಿಯನ್ನು ಬಲಿಕೊಟ್ಟಿರಬಹುದೆಂಬ ಶಂಕೆಯೂ ವ್ಯಕ್ತವಾಗಿದೆ.

ಬಸವನಗುಡಿ ದೇವಾಲಯ ಸೇರಿದಂತೆ ಈ ಭಾಗದಲ್ಲಿ ಸಾಕಷ್ಟು ಸಂಖ್ಯೆಯ ಪಾರಿವಾಳಗಳಿದ್ದು, ಪಾರ್ಕ ಸೇರಿದಂತೆ ಹಲವೆಡೆ ಕಾಣಸಿಗುತ್ತವೆ. ಇದನ್ನೆ ಟಾರ್ಗೆಟ್ ಮಾಡಿದ ಕ್ರೂರಿಗಳು ಕಾಳು ಹಾಗೂ ಧಾನ್ಯಗಳಲ್ಲಿ ಮೆಟಾಸಿಟ್​​ಔಷಧಿ ಮಿಕ್ಸ್ ಮಾಡಿ ಹಾಕಿದ್ದಾರೆ. ಇದರಿಂದ ನೂರಾರು ಪಾರಿವಾರಗಳು ಜೀವತೆತ್ತಿವೆ. ಇನ್ನು ಈಘಟನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ವಿಷ ಬೆರೆಸಿದ ಕಾಳು ಹಂಚಿದ ವ್ಯಕ್ತಿ ಪತ್ತೆ ಹಚ್ಚಿ ಶಿಕ್ಷೆ ಕೊಡಿಸಬೇಕೆಂದು ಆಗ್ರಹಿಸಿದ್ದಾರೆ.