ದಾನಮ್ಮ ಅತ್ಯಾಚಾರ ಮತ್ತು ಕೊಲೆಯ ವಿರುದ್ಧ ಕಿಚ್ಚ ಅಭಿಮಾನಿಗಳಿಂದ ಪ್ರತಿಭಟನೆ

ವಿಜಯಪುರಲ್ಲಿ ಶಾಲಾ ಬಾಲಕಿ ದಾನಮ್ಮ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆಯನ್ನ ಖಂಡಿಸಿ ಹಾಸನದಲ್ಲಿ ಕಿಚ್ಚನ ಅಭಿಮಾನಿಗಳು ಕ್ಯಾಂಡಲ್ ಲೈಟ್ ಪ್ರತಿಭಟನೆ ಮಾಡಿದರು. ನಗರದ ಎಂ ಜಿ ರಸ್ತೆಯಲ್ಲಿರುವ ಗಾಂಧಿ ಪ್ರತಿಮೆಯ ಬಳಿ 50ಕ್ಕೂ ಹೆಚ್ಚು ಮಂದಿ ಕ್ಯಾಂಡಲ್ ಬೆಳಗಿಸಿ ಆಗಲಿದ ದಾನಮ್ಮ ಆತ್ಮಕ್ಕೆ ಶಾಂತಿ ಕೋರಿದರು.

ad


ಬಳಿಕ ಹೇಮಾವತಿ ಪ್ರತಿಮೆವರೆಗೂ ಕಾಲ್ನಡಿಗೆ ಮೂಲಕ ತೆರಳಿ ಮರೆಯಾದ ದಾನಮ್ಮಳಿಗೆ ಶ್ರದ್ದಾಂಜಲಿ ಸಲ್ಲಿಸಿದ್ರು. ನೀಚ ಕೃತ್ಯ ಎಸಗಿದ ದುಷ್ಕರ್ಮಿಗಳನ್ನು ಬಂಧಿಸಿ ಉಗ್ರ ಶಿಕ್ಷೆ ವಿಧಿಸಬೇಕು ಅಂತಾ ಪ್ರತಿಭಟನಕಾರರು ಆಗ್ರಹಿಸಿದ್ರು. ಪ್ರತಿಭಟನೆಯಲ್ಲಿ ಯುವಕರು, ಯುವತಿಯರು, ಮಹಿಳೆಯರು ಭಾಗವಹಿಸಿದ್ರು. ಇಂತಹ ಅಮಾನವೀಯ ಕೃತ್ಯದ ವಿರುದ್ಧ ಕಿಚ್ಚನ ಅಭಿಮಾನಿಗಳು ಸದಾ ಸಿಡಿದೇಳುತ್ತಾರೆ, ಆರೋಪಿಗಳಿಗೆ ಮರಣ ದಂಡನೆ ಆಗಬೇಕು ಅಂತಾ ಕಿಚ್ಚನ ಹುಡುಗ್ರು ಆಗ್ರಹಿದರು.