ಶಿರಸಿಗೂ ವ್ಯಾಪಿಸಿದ ಕುಮಟಾ ಬೆಂಕಿ ! ಬಿಜೆಪಿಯೇ ನೇರ ಹೊಣೆ ಅಂದ್ರು ಗೃಹಸಚಿವರು !!

   ಕುಮಟಾದಲ್ಲಿ ನಡೆದಿದ್ದ ಕೋಮುಗಲಭೆ ಇಂದು ಶಿರಸಿಗೂ ವ್ಯಾಪಿಸಿದೆ. ಇಂದು ಶಿರಸಿಯಲ್ಲಿ ಉದ್ವಿಗ್ನ ಸ್ಥಿತಿ ಏರ್ಪಟ್ಟಿದ್ದು ಸಿ ಪಿ ಬಜಾರನಲ್ಲಿರುವ ಎರಡು ಬಟ್ಟೆ ಅಂಗಡಿಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ.

ad


ಉತ್ತರಕನ್ನಡ ಜಿಲ್ಲೆಯ ಕುಮಟಾ ನಿನ್ನೆಯಿಂದ ಉದ್ವಿಗ್ನ ಸ್ಥಿತಿಗೆ ತಲುಪಿತ್ತು. ಆ ಹಿನ್ನಲೆಯಲ್ಲಿ ನಿಷೇದಾಜ್ಞೆ ಜಾರಿಯಾಗಿದ್ದರೆ, ಹಿಂದುತ್ವವಾದಿ ಸಂಘಟನೆಗಳು ಇಂದು ಶಿರಸಿ ಬಂದ್ ಗೆ ಕರೆ ನೀಡಿದ್ದವು. ಆ ಹಿನ್ನಲೆಯಲ್ಲಿ ಅಂಗಡಿಗಳಿಗೆ ಬೆಂಕಿ ಹಾಕಲಾಗಿದೆ ಎನ್ನಲಾಗ್ತಿದೆ.

ಗಲಭೆಯ ಹಿನ್ನಲೆಯಲ್ಲಿ ಮುಂಜಾಗೃತ ಕ್ರಮವಾಗಿ ಶಾಲಾ, ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ.

ಮತ್ತೊಂದೆಡೆ ಉತ್ತರಕನ್ನಡ ಜಿಲ್ಲೆಯ ಉದ್ವಿಗ್ನತೆಗೆ ಬಿಜೆಪಿಯೇ ನೇರ ಕಾರಣ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಗಂಭೀರ ಆರೋಪ ಮಾಡಿದ್ದಾರೆ.


ಸಿಎಂ ಸಿದ್ದರಾಮಯ್ಯ ರಾಕ್ಷಸ ಮುಖದವರೆಂಬ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿರುವ ರಾಮಲಿಂಗರೆಡ್ಡಿ, ಕೋಮುವಾದಿಗಳನ್ನ ಪ್ರಚೋದಿಸುವ ಮೂಲಕ ಚುನಾವಣಾ ಸಮಯದಲ್ಲಿ ಲಾಭ ಪಡೆಯಲು ಬಿಜೆಪಿ ಸಂಚು ಹೂಡುತ್ತಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ಅಧ್ಯಕ್ಷ ಬಿ ಎಸ್ ಯಡಿಯೂರಪ್ಪ, ಶೋಭ ಕರಂದ್ಲಾಜೆ, ಪ್ರತಾಪ್ ಸಿಂಹ, ಅನಂತಕುಮಾರ ಹೆಗಡೆ, ಈಶ್ವರಪ್ಪ ಸೇರಿ ಕೆಲವು ಬಿಜೆಪಿಯವರಿಗೆ ಕೋಮುಗಲಭೆ ಸೃಷ್ಟಿಸುವುದೇ ಇವರ ಕೆಲಸ. ನಿಜವಾಗಿ ಇವರೇ ರಾಕ್ಷಸ ಮುಖದವರು.

ಪರೇಶ್ ಮೃತದೇಹ ನೋಡಿದ ತಕ್ಷಣ ಸಾವಿನ ಬಗ್ಗೆ ನಿರ್ಧಾರ ಮಾಡೋಕೆ ಶೋಭಾ ಕರಂದ್ಲಾಜೆ ಏನ್ ಡಾಕ್ಟರಾ? ಬಿಜೆಪಿಯವರ ಅವಧಿಯಲ್ಲಿ ಅಭಿವೃದ್ಧಿ ಕೆಲಸ ಮಾಡದೇ ಚುನಾವಣೆಗಾಗಿ ಕೋಮುಗಲಭೆ ಸೃಷ್ಟಿಸುತ್ತಿದ್ದಾರೆ. ಅಮಿತ್ ಶಾ ಅಣತಿಯಂತೆ ರಾಜ್ಯದಲ್ಲಿ ಬಿಜೆಪಿಯವರು ಅಶಾಂತಿ ಸೃಷ್ಟಿಸುತ್ತಿದ್ದಾರೆ ಎಂಬುದನ್ನು ಖುದ್ದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಒಪ್ಪಿಕೊಂಡಿದ್ದಾರೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆ ನೀಡಿದ್ದಾರೆ.