RTI ಕಾರ್ಯಕರ್ತರಿಗೆ ಆರೋಗ್ಯ ಸಹಾಯಕಿಯಿಂದ ಅವಾಚ್ಯ ಪದಗಳಿಂದ ನಿಂದನೆ, ಹಲ್ಲೆ!!! ವಿಡಿಯೋ ವೈರಲ್

ಆರ್ ಟಿಐ ಕಾರ್ಯಕರ್ತರೊಬ್ಬರಿಗೆ ಕಿರಿಯ ಆರೋಗ್ಯ ಸಹಾಯಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ ಘಟನೆ ರಾಯಚೂರು ಜಿಲ್ಲೆ ಹಟ್ಟಿ ಗ್ರಾಮದಲ್ಲಿ ನಡೆದಿದೆ. ಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ಗುರಮ್ಮ ಆರ್ ಟಿಐ ಕಾರ್ಯಕರ್ತ ಹನುಮಂತ ನಂದಿಹಾಳ್ ಗೆ ಅವಾಚ್ಯ ಪದಗಳಿಂದ ಬೈಯ್ದು ಹಲ್ಲೆ ಮಾಡಿದ್ದಾರೆ.

ad


ಹಲ್ಲೆಯ ದೃಶ್ಯ ಮೊಬೈಲ್ ನಲ್ಲಿ ಸಂಪೂರ್ಣವಾಗಿ ಸೆರೆಯಾಗಿದೆ. ಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಉಪ ಕೇಂದ್ರಗಳ ಮಾಹಿತಿಯನ್ನು ಆರ್ ಟಿಐ ಮೂಲಕ ಹನುಮಂತ ನಂದಿಹಾಳ್ ಕೇಳಿದ್ದರು. ಅನುದಾನ ಬಳಕೆಯಲ್ಲಿ ಅಕ್ರಮದ ಶಂಕೆ ಹಿನ್ನೆಲೆಯಲ್ಲಿ ದೂರು ನೀಡಿದ್ದರು. ಈ ವಿಚಾರವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇದೇ ಡಿಸೆಂಬರ್​​ 6 ರಂದು ತನಿಖಾ ತಂಡ ಹಟ್ಟಿ ಪಿಹೆಚ್ ಸಿಗೆ ಆಗಮಿಸಿತ್ತು. ಈ ವೇಳೆ ವಿಚಾರಣೆಗೆ ಬಂದಿದ್ದ ಆರ್ ಟಿಐ ಕಾರ್ಯಕರ್ತ ಹನುಮಂತ ನಂದಿಹಾಳ್ ಮೇಲೆ ತನಿಖಾ ತಂಡದ ಎದುರೇ ಹಲ್ಲೆ ನಡೆಸಿದ್ದಾರೆ.