ಗ್ರಾಮೀಣ ಕಳ್ಳರು ಅಂದರ್…ನಿಟ್ಟುಸಿರು ಬಿಟ್ಟ ಹಳ್ಳಿ ಜನರು…. ಇವರು ಖತರ್ನಾಕ್ ಕಳ್ಳರು!!

 

ಗ್ರಾಮೀಣ ಭಾಗವನ್ನು ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡ್ತಾಯಿದ್ದ ಕಿಲಾಡಿ ಕಳ್ಳರನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಹಳ್ಳಿ ಜನ ನಿಟ್ಟುಸಿರು ಬಿಡುವಂತಾಗಿದೆ…

adಗ್ರಾಮೀಣ ಭಾಗದಲ್ಲಿ ರಾತ್ರೋರಾತ್ರಿ ಕಳ್ಳತನ ಮಾಡ್ತಾಯಿದ್ದ ಕಿಲಾಡಿ ಕಳ್ಳರನ್ನು ಹುಬ್ಬಳ್ಳಿ ಗ್ರಾಮೀಣ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಳೇ ಹುಬ್ಬಳ್ಳಿಯ ನಿವಾಸಿಗಳಾದ ಆಸ್ಲಾಂ ಸವಣೂರು, ಧಾದಾಪೀರ ಸವಣೂರು, ಅರ್ಬಜಖಾನ್ ಬಂಧಿಸಿ ಆರೋಪಿತರಿಂದ ವಿವಿಧ ಕಂಪನಿಯ 14 ಬೈಕ್, 210 ಗ್ರಾಂ ಚಿನ್ನ, 2.6 ಬೆಳ್ಳಿ ಸೇರಿದಂತೆ ಗೃಹ ಉಪಯೋಗಿ ವಸ್ತುಗಳು ವಶಕ್ಕೆ ಪಡೆಯಲಾಗಿದೆ.

 

ಈ ಕಿಲಾಡಿ ಕಳ್ಳರು ಧಾರವಾಡ ಜಿಲ್ಲೆಯ ವಿವಿಧ ಗ್ರಾಮಗಳನ್ನು ಟಾರ್ಗೆಟ್ ಮಾಡಿಕೊಂಡು ಕಳ್ಳತನ ಮಾಡ್ತಾಯಿದ್ರು, ಮನೆಯಲ್ಲಿದ್ದ ಸಿಲಿಂಡರ್, ಗೃಹ ಉಪಯೋಗಿ ವಸ್ತುಗಳು ಸೇರಿದಂತೆ ಮನೆಯಲ್ಲಿದ್ದ ಬಂಗಾರ ಬೆಳ್ಳಿ ಸೇರಿದಂತೆ ಮನೆ ಮುಂದೆ ನಿಲ್ಲಿಸಿದ
ಬೈಕ್ ಸಹ ಕಳ್ಳತನ ಮಾಡ್ತಾಯಿದ್ರು. ಹೀಗಾಗಿ ಈವರ ವಿರುದ್ಧ ಕುಂದಗೋಳ, ಕಲಘಟಗಿ, ಗರಗ ಸೇರಿದಂತೆ ಜಿಲ್ಲೆಯ ನಾನಾ ಪೊಲೀಸ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿದ್ದವು.

 

ಆದ್ರೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಕದಿಮರು ಎಸ್ಕೇಪ್ ಆಗ್ತಾಯಿದ್ರು, ಹಾಗಾಗಿ ಧಾರವಾಡ ಜಿಲ್ಲೆಯ ಗ್ರಾಮೀಣ ಪೊಲೀಸರಿಗೆ ತಲೆನೋವಾಗಿದ್ರು. ಕೊನೆಗೆ ಎಸ್ಪಿ ಸಂಗೀತಾ ಮಾರ್ಗದರ್ಶನದಲ್ಲಿ ಒಂದು ವಿಶೇಷ ತಂಡವನ್ನು ರಚನೆ ಮಾಡಿಕೊಂಡ್ರು ಪೊಲೀಸರು. ಬೆರಳಚ್ಚು ತಜ್ಞರ ಸಹಾಯದಿಂದ ಹಳೇ ಕಳ್ಳರ ಹಾಗೂ ಈವಾಗ ಸಿಕ್ಕಿಬಿದ್ದ ಕಳ್ಳರ ಕುರುಹುಗಳ ಒಂದೇ ಆಗಿದ್ವು. ಆಗ ಪೊಲೀಸರು ತಮ್ಮ ಸೈಲ್ ನಲ್ಲಿ‌ ವಿಚಾರಣೆ ನಡೆಸಿ ಈ ಆಸಾಮಿಗಳನ್ನು ಬಂಧಿಸುವದಲ್ಲಿ‌ ಯಶಸ್ವಿಯಾಗಿಯಾಗಿದ್ದಾರೆ..

ವರದಿ: ಮಂಜು ಪತ್ತಾರ ಬಿಟಿವಿ ಹುಬ್ಬಳ್ಳಿ…