ಬೆಂಗಳೂರಿನಲ್ಲಿ ಮತ್ತೆ ಗುಂಡಿನ ದಾಳಿ !! ಕಾರಿನ ಗಾಜು ಪುಡಿ ಮಾಡಿದ್ರೆ ಕಾಲಿನ ಮೂಳೆ ಪುಡಿಯಾಗುತ್ತೆ !!

ಸಿಲಿಕಾನ್ ಸಿಟಿಯಲ್ಲಿ ಮತ್ತೆ ಪೊಲೀಸ್ರ ಗುಂಡು ಸದ್ದು ಮಾಡಿದೆ. ಇತ್ತಿಚೆಗೆ ಸರಗಳ್ಳರ ಮೇಲೆ ಗುಂಡು ಹಾರಿಸಿದ್ದ ಪೊಲೀಸರು ಇದೀಗ ಮನೆ ಮುಂದೆ ನಿಲ್ಲಿಸುತ್ತಿದ್ದ ವಾಹನ ಪುಡಿಗೈಯುತ್ತಿದ್ದವರ ಕಾಲಿಗೆ ಗುಂಡು ಹಾರಿಸಿದ್ದಾರೆ.ಮಹಾಲಕ್ಷ್ಮಿ ಲೇಔಟ್ ನಲ್ಲಿ ಕಾರಿನ ಕ್ಲಾಸ್ ಒಡೆದಿದ್ದ ರಫಿ ಮತ್ತು ಸುಧಾಕರ್ ಕರೀಂ ಸಾಬ್ ಲೇಔಟ್ ನಲ್ಲಿದ್ದಾರೆ ಎಂಬ ಮಾಹಿತಿ ಪೊಲೀಸ್ರಿಗೆ ಸಿಕ್ಕಿದೆ.

 

ಕಾರಿನಲ್ಲಿದ್ದ ದುಷ್ಕರ್ಮಿಗಳನ್ನು ಬಂಧಿಸಲು ಬಂದ ಮುಖ್ಯಪೇದೆ ಹನುಮಂತರಾಜು ಮತ್ತು ಶ್ರೀನಿವಾಸ್ ಗೆ ಡ್ಯಾಗರ್ವನಿಂದ ಹಲ್ಲೆ ಮಾಡಿ ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾರೆ. ಈ ವೇಳೆ ಇನ್ಸ್ ಪೆಕ್ಟರ್ ಲೋಹಿತ್ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ.. ಆಗಲೂ ರಫಿ ಮತ್ತು ಸುಧಾಕರ್ ಪೊಲೀಸ್ ಮೇಲೆ ಹಲ್ಲೆಗೆ ಮುಂದಾದಾಗ ಆತ್ಮರಕ್ಷಣೆಗಾಗಿ ರಫಿಯ ಬಲಗಾಲಿಗೆ ಸುಧಾಕರ್ ಎಡಗಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.ಸದ್ಯ ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದೂ ಚಿಕಿತ್ಸೆ ನೀಡಲಾಗ್ತಿದೆ. ಕಾರಿನ ಗಾಜನ್ನು ಪುಡಿಗೈದಿದ್ದ ರಫಿ ಮತ್ತು ಸುಧಾಕರ್ ರ ಕೃತ್ಯ ಸಿಸಿಟಿಯಲ್ಲಿ ಕೂಡ ಸೆರೆಯಾಗಿತ್ತು. ಕಾರಿನ ಗಾಜನ್ನು ಸುಲಭವಾಗಿ ಪುಡಿ ಮಾಡುತ್ತಿದ್ದ ಪುಡಾರಿಗಳ ಕಾಲಿನ ಮಂಡಿ ಚಿಪ್ಪನ್ನು ಪುಡಿ ಮಾಡಿ ಪೊಲೀಸ್ರು ಸರಿಯಾಗಿಯೇ ಬುದ್ಧಿ ಕಲಿಸಿದ್ದಾರೆ.