ವಿಶ್ವೇಶ್ವರ ಹೆಗಡೆ ಕಾಗೇರಿ ಅರೆಸ್ಟ್ – ಶಿರಸಿ ಉದ್ವಿಗ್ನ

ಪರೇಶ್ ಮೇಸ್ತಾ ಕೊಲೆಗೆ ನ್ಯಾಯ ದೊರಕಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳು ಹಾಗೂ ಬಿಜೆಪಿ ಶಿರಸಿಯಲ್ಲಿ ಕರೆ ನೀಡಿದ್ದ ಶಿರಸಿ ಬಂದ್​ ಹಿಂಸಾಚಾರಕ್ಕೆ ತಿರುಗಿದೆ. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಕಲ್ಲು ತೂರಾಟ ನಡೆಸುತ್ತಿದ್ದವರ ಮೇಲೆ ಲಾಠಿ ಚಾರ್ಜ್ ನಡೆಸಿದ್ದು, ಸಂಜೆ ವೇಳೆ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗಿದೆ.
ಬಿಜೆಪಿಯವರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಕಲ್ಲುಗಳು ತೂರಿ ಬಂದಿದ್ದು, ಇದ್ದಕ್ಕಿದ್ದಂತೆ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಈ ವೇಳೆಗ ಕೆಲಸ ಮಸೀದಿಗಳು, ಶಿವಾಜಿಚೌಕ್​ನಲ್ಲಿರುವ ಹಿಂದೂ ದೇವಾಲಯಕ್ಕೂ ಕಲ್ಲು ತೂರಾಟ ನಡೆಸಲಾಗಿದೆ. ಪೊಲೀಸರು ಮಾಜಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ 70 ಜನರನ್ನು ವಶಕ್ಕೆ ಪಡೆದಿದ್ದಾರೆ.


ಇನ್ನು ಪೊಲೀಸ್ ಭದ್ರತೆ ಹೆಚ್ಚಿಸಲಾಗಿದ್ದು, ಇದೀಗ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಗಲಾಟೆಯಲ್ಲಿ ಅಂದಾಜು 15 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಶಿರಸಿ ಪಟ್ಟಣದಾದ್ಯಂತ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಲಾಗಿದ್ದು, ಜನಜೀವನ ಅಸ್ತವ್ಯಸ್ಥಗೊಂಡಿದೆ.
ಇನ್ನು ಘಟನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಭೇಟಿ ಬಳಿಕ ಪ್ರತಿಕ್ರಿಯಿದ ಗೃಹ ಸಚಿವ ರಾಮಲಿಂಗಾ ರೆಡ್ಡಿ, ಇದು ಬಿಜೆಪಿಯವರು ಉದ್ದೇಶಪೂರ್ವಕವಾಗಿ ನಡೆಸುತ್ತಿರೊ ಗಲಾಟೆ. ಕಾನೂನು ವ್ಯವಸ್ಥೆ ಹದಗೆಡಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಯಡಿಯೂರಪ್ಪ ಆರೋಪದಲ್ಲಿ ಯಾವುದೇ ಹುರುಳಿಲ್ಲ.ಚುನಾವಣೆ ಹಿನ್ನೆಲೆಯಲ್ಲಿ ಗಲಾಭೆ ಸೃಷ್ಟಿಸುತ್ತಿದ್ದಾರೆ. ಬಿಜೆಪಿ ಚುನಾವಣಾ ದೃಷ್ಟಿಯಿಂದ ಗಲಾಟೆ ನಡೆಯುತ್ತಿರುವುದು ಜನಕ್ಕೆ ಗೊತ್ತಾಗಿದೆ. ಡಿ 1 ರಂದು ಹನುಮ ಜಯಂತಿ ಈ ದ್ ಮೀಲಾದ್ ಹಬ್ಬ ಒಂದೇ ದಿನ ಬಂದಿದೆ. ಐಜಿ ನಿಂಬ್ಕಾಳರ್ ರವರು ಬಂದು ಹೇಳಿದ್ರು ಒಂದೇ ದಿನ ಎರಡು ಹಬ್ಬ ಬಂದ ಕಾರಣ ಗಲಾಟೆ ಮಾಡಬಹುದು ಅಂತ ಹೇಳಿದ್ರು.ಬೇರೆ ಬೇರೆ ಕಡೆ ಮಾಡಿಕೊಳ್ಳಿ ಅಂತ ಹೇಳಿದೆವು. ರಾಜಕೀಯವಾಗಿ ಬಳಸಲು ಬಿಜೆಪಿಯವರು ಒಂದೇ ಕಡೆ ಮಾಡಿದ್ರು ಎಂದರು


ಇನ್ನು ಘಟನೆ ಹಾಗೂ ಗಲಾಟೆ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿಮುಖ್ಯಮಂತ್ರಿ ಕುಮಾರಸ್ವಾಮಿಯವರು, ಯಾವ ಕಾರಣಕ್ಕೆ ಹೊನ್ನಾವರದಲ್ಲಿ ಯುವಕ ಸತ್ತನೋ ಗೊತ್ತಿಲ್ಲ. ಆದರೆ ಸಂಸದರೊಬ್ಬರು ಅಲ್ಲಿ ಹೋಗಿ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರ ವಾಹನಕ್ಕೇ ಬೆಂಕಿ ಹಚ್ಚಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಗೆ ಆಡಳಿತದ ಮೇಲೆ ಹಿಡಿತ ತಪ್ಪಿದೆ ಎಂದು ಆರೋಪಿಸಿದ್ದಾರೆ. ಒಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆ ಪರೇಶ್ ಮೇಸ್ತಾ ಸಾವಿನ ಹೆಸರಿನಲ್ಲಿ ಉದ್ವಿಗ್ನವಾಗಿದ್ದು, ಪೊಲೀಸರು ಶಾಂತಿಕಾಪಾಡುವ ಪ್ರಯತ್ನದಲ್ಲಿದ್ದಾರೆ.