ವಿವಾಹಿತನಿಂದ ಇನ್ಸಪೆಕ್ಟರ್​ ತಂಗಿ ಜೊತೆ ಲವ್ವಿ-ಡವ್ವಿ- ತಾಯಿ ಜೊತೆಇನ್ಸಪೆಕ್ಟರ್​ ಅಪಾರ್ಟಮೆಂಟ್​ನಲ್ಲಿ ಶವವಾಗಿ ಪತ್ತೆಯಾದ ಪ್ರೇಮಿ- ಸಾವಿನ ಸುತ್ತ ಅನುಮಾನದ ಹುತ್ತ!

Son and Mother Died after fall down from Apartment.

ಇನ್ಸಪೆಕ್ಟರ್​​ ತಂಗಿ ಜೊತೆ ಪ್ರೇಮಸಂಬಂಧ ಹೊಂದಿದ್ದ ವ್ಯಕ್ತಿ ಹಾಗೂ ಆತನ ತಾಯಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಬೆಂಗಳೂರಿನ ಕಾಡುಗೋಡಿ ಬಳಿ ನಡೆದಿದೆ.

ad


ಇನ್ಸಪೆಕ್ಟರ್​ ತಂಗಿ ಜೊತೆ ಪ್ರೇಮಸಂಬಂಧ ಹೊಂದಿದ್ದ ವ್ಯಕ್ತಿ ಅದೇ ಇನ್ಸಪೆಕ್ಟರ್​​ ಅಪಾರ್ಟಮೆಂಟ್​​ ಮಹಡಿಯಿಂದಲೇ ಬಿದ್ದು ಸಾವನ್ನಪ್ಪಿದ್ದು ಹಲವು ಅನುಮಾನ ಮೂಡಿಸಿದೆ. ಮೃತರನ್ನು ಯಾದಗಿರಿ ಮೂಲದ ಯಾದಗಿರಿ ಮೂಲದ ತಾಯಿ ಸುಂದರಮ್ಮ (55) ಹಾಗೂ ಮಗ ಮೌನೇಶ (36) ಎಂದು ಗುರುತಿಸಲಾಗಿದೆ.
ಪ್ರಸ್ತುತ ತುಮಕೂರು ಡಿ.ಸಿ.ಆರ್.ಬಿ ಯಲ್ಲಿ ಇನ್ಸಪೆಕ್ಟರ್​ ಆಗಿರುವ ಚಂದ್ರಪ್ಪ ಈ ಹಿಂದೆ ಕಾಡುಗುಡಿ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದರು. ಈ ವೇಳೆ ಚಂದ್ರಪ್ಪ ಕುಟುಂಬ ಕಾಡುಗೋಡಿಯ ಬಾಡಿಗೆ ಅಪಾರ್ಟಮೆಂಟ್​​ನಲ್ಲಿ ವಾಸವಾಗಿದ್ದರು. ಈ ವೇಳೆ ಪಕ್ಕದಲ್ಲೇ ವಾಸವಾಗಿದ್ದ ಮೌನೇಶ್ ಜೊತೆ ಚಂದ್ರಪ್ಪ ತಂಗಿಗೆ ಪ್ರೇಮಾಂಕುರವಾಗಿತ್ತು ಎನ್ನಲಾಗಿದೆ.

ಅಲ್ಲದೇ ಹಲವಾರು ಭಾರಿ ಚಂದ್ರಪ್ಪ ತಂಗಿ ಮೌನೇಶ್​ ಜೊತೆ ಓಡಿಹೋಗಿದ್ದಳು. ಮೌನೇಶ್​ ಗೆ ಈಗಾಗಲೇ ಮದುವೆಯಾಗಿದ್ದರಿಂದ ಚಂದ್ರಪ್ಪ ಈ ಸಂಬಂಧವನ್ನು ತೀವ್ರವಾಗಿ ಖಂಡಿಸಿ ಹಲವಾರು ಭಾರಿ ಮೌನೇಶ್​ ಗೂ ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ. ಆದರೂ ಮೌನೇಶ್​ ಚಂದ್ರಪ್ಪ ತಂಗಿ ಜೊತೆ ನಂಟು ಮುಂದುವರೆಸಿದ್ದರು. ಕೆಲದಿನಗಳ ಹಿಂದೆ ಚಂದ್ರಪ್ಪ ತಂಗಿ ಮನೆಯಿಂದ ನಾಪತ್ತೆಯಾಗಿದ್ದರು.  ಈ ಬಗ್ಗೆ ಚಂದ್ರಪ್ಪ ಕಾಡುಗೋಡಿ ಪೊಲೀಸ್ ಠಾಣೆಗೂ ದೂರು ನೀಡಿದ್ದರು.

 

ಬಳಿಕ ಕೋಪಗೊಂಡ ಚಂದ್ರಪ್ಪ ಮೌನೇಶ್ ಹಾಗೂ ಆತನ ತಾಯಿಯನ್ನು ತಂದು ತಾನು ವಾಸವಿದ್ದ ಬೆಳತೂರಿನ ಅಪಾರ್ಟ್ಮೆಂಟ್ ಪ್ಲಾಟ್ ನಲ್ಲಿ ಇಬ್ಬರನ್ನು ಅಕ್ರಮ ಬಂಧನದಲ್ಲಿಟ್ಟಿದ್ದರು. ಆದರೇ ಇಂದು ಬೆಳಗಿನ ಜಾವ ೫ ಗಂಟೆ ಸುಮಾರಿನಲ್ಲಿ ತಾಯಿ ಮಗ ಇಬ್ಬರು ಕಟ್ಟಡದ ಮೇಲಿಂದ ಬಿದ್ದು ಮೃತಪಟ್ಟಿದ್ದಾರೆ.
ಈ ಸಾವು ಹಲವು ಅನುಮಾನ ಮೂಡಿಸಿದ್ದು, ಇದು ಆತ್ಮಹತ್ಯೆಯೊ ? ಇಲ್ಲವೆ ಕೊಲೆಯೊ ಎಂಬ ಅನುಮಾನ ಮೂಡಿಸಿದೆ. ಕಾಡುಗೋಡಿ ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕೇಳಿಸಿದ್ದು ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹಾಗೂ ವೈಟ್ ಫೀಲ್ಡ್ ಡಿಸಿಪಿ ಅಬ್ದುಲ್ ಸ್ಥಳಕ್ಕೆ ಅಹದ್ಬೇಟಿ ನೀಡಿ ಚಂದ್ರಪ್ಪನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ. ಇನ್ಸಪೆಕ್ಟರ್​ ಚಂದ್ರಪ್ಪ ಈ ಹಿಂದೆ ಪ್ರತಿಭಟನೆಯ ವೇಳೆ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿ ಸುದ್ದಿಯಾಗಿದ್ದರು.