ಬೈಕ್​ ಕಳ್ಳನನ್ನು ಹುಡುಕಲು ಫೇಸ್​ಬುಕ್​ ಮೊರೆ ಹೋದ ವ್ಯಕ್ತಿ- ಪೋಟೋನೋಡಿ ಕಳ್ಳನ ಹುಡುಕಿಕೊಡಿ!

 

ad

ಇತ್ತೀಚಿಗೆ ಸಾಮಾಜಿಕ ಜಾಲತಾಣಗಳು ಸಖತ್​ ಫೇಮಸ್​ ಆಗ್ತಿದ್ದು, ಕೆಲವೊಮ್ಮೆ ಒಳ್ಳೆಯ ಕೆಲಸಕ್ಕೂ ಬಳಕೆಯಾಗ್ತಿವೆ. ಹೌದು ನಿನ್ನೆಯಷ್ಟೇ ಜೋಡಿಯೊಂದು ಪೇಸ್​ಬುಕ್​​ ಲೈವ್​ನಲ್ಲೇ ಮದುವೆಯಾದ ಬೆನ್ನಲ್ಲೇ ಇದೀಗ ಬೈಕ್​ ಕಳೆದುಕೊಂಡು ಕಂಗಾಲಾಗಿರುವ ವ್ಯಕ್ತಿಯೊಬ್ಬ ಬೈಕ್​ ಕಳ್ಳನನ್ನು ಹುಡುಕಲು ಫೇಸ್ಬುಕ್ ಮೊರೆ ಹೋದ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ನಗರದ ಮಾರ್ಕೆಟ್​ನಲ್ಲಿ ಕಳೆದ ಮೂರು ದಿನಗಳ ಹಿಂದೆ ಮಹೇಶ್ ಎಂಬುವವರು ಕೆಎ 42, ಜೆ 8205 ನಂಬರಿನ ಸ್ಪ್ಲೆಂಡರ್ ಬೈಕ್ ನಿಲ್ಲಿಸಿ ಹೋಗಿದ್ರು. ಆದ್ರೆ ಬೈಕ್​ ನಿಲ್ಲಿಸಿ ಹೋದ ಹತ್ತೇ ನಿಮಿಷದಲ್ಲಿ ಕಳ್ಳ ಬೈಕ್ ಕದ್ದು ಪರಾರಿಯಾಗಿದ್ದಾನೆ.

 

ಕಳ್ಳ ಬೈಕ್ನಲ್ಲಿ ಹೋಗುತ್ತಿರುವ ದೃಶ್ಯ ಮಾರ್ಕೆಟ್​​ನ ಅಂಗಡಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದೀಗ ಅಂಗಡಿಕಾರರಿಂದ ಕಳ್ಳ ಬೈಕ್​ ಕದ್ದು ಹೋಗುತ್ತಿರುವ ಸಿಸಿಟಿವಿ ದೃಶ್ಯ ಪಡೆದಿರುವ ಬೈಕ್​ ಮಾಲೀಕ ಮಹೇಶ್ ಈ ದೃಶ್ಯವನ್ನು ಪೇಸ್​ಬುಕ್​ನಲ್ಲಿ ಹಾಕಿ ತಮ್ಮ ಬೈಕ್​ ಕಳ್ಳನನ್ನು ಹುಡುಕಲು ಸಹಾಯ ಮಾಡಿ ಎಂದು ಕೋರುತ್ತಿದ್ದಾರೆ.
ಇನ್ನು ಈ ಬಗ್ಗೆ ಈಗಾಗಲೇ ಮಹೇಶ್ ಮಂಡ್ಯ ಸೆಂಟ್ರಲ್​ ಪೊಲೀಸ್ ಠಾಣೆಯಲ್ಲಿ ಕೂಡ ದೂರು ದಾಖಲಿಸಿದ್ದಾರೆ. ಇನ್ನು ಈ ಬೈಕ್​ ಕಳ್ಳನ ಪೋಟೋ ಹಾಗೂ ಮಾಹಿತಿ ಪೇಸ್​ಬುಕ್​​ನಲ್ಲಿ ಎಲ್ಲೆಡೆ ಶೇರ್ ಆಗುತಿದ್ದು, ಮಹೇಶ್​ ರವರ ಬೈಕ್​ ಕಳ್ಳ ಎಲ್ಲಿ ಸಿಕ್ಕಿ ಬೀಳ್ತಾನೆ ಕಾದು ನೋಡಬೇಕಿದೆ.