ಕೋಟೆಕಾರು ಬ್ಯಾಂಕ್ ನಲ್ಲಿ ಮೂವರ ಅಸಹಜ ಸಾವಿಗೂ, ಅವ್ಯವಹಾರಕ್ಕೂ ಸಂಬಂಧವಿದೆಯೇ ?

ಬ್ಯಾಂಕ್​​ನ ಭದ್ರತೆಗಾಗಿ ಬ್ಯಾಂಕ್​​ ಕಟ್ಟಡದಲ್ಲಿ ಮಲಗಿದ್ದ ಮೂವರು ಸಿಬ್ಬಂದಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಮಂಗಳೂರಿನ ಕೋಟೆಕಾರು ವ್ಯವಸಾಯ ಸಂಘದ ಬ್ಯಾಂಕ್​​ನಲ್ಲಿ ನಡೆದಿದೆ.

ad


ಮಂಗಳೂರಿನ ಹೊರವಲಯದ ತಲಪಾಡಿ ಬಳಿಯ ಕೆ.ಸಿ.ರೋಡ್​ನಲ್ಲಿರುವ ವ್ಯವಸಾಯ ಸಂಘದ ಬ್ಯಾಂಕ್​ನಲ್ಲಿ ನಿನ್ನೆ ರಾತ್ರಿ ಭದ್ರತೆಗಾಗಿ ಉಮೇಶ್, ಸಂತೋಷ,ಸೋಮನಾಥ ಸಾವನ್ನಪ್ಪಿದ್ದಾರೆ. ಬೆಳಗ್ಗೆ ಬ್ಯಾಂಕ್​ ಸಿಬ್ಬಂದಿ ಕೆಲಸಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಆದರೇ ಈ ಸಿಬ್ಬಂದಿ ಸಾವಿಗೆ ಕಾರಣ ತಿಳಿದು ಬಂದಿಲ್ಲ. ಮೂವರು ಸಿಬ್ಬಂದಿ ಮಲಗಿದ್ದ ಸ್ಥಿತಿಯಲ್ಲೇ ಸಾವನ್ನಪ್ಪಿದ್ದಾರೆ.
ಹೀಗಾಗಿ ತಡರಾತ್ರಿ ಕಟ್ಟಡಕ್ಕೆ ಸಿಡಿಲು ಬಡಿದು, ಅರ್ಥಿಂಗ್​ ಶಾಕ್​ನಿಂದ ಈ ಮೂವರು ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿದೆ. ಅಲ್ಲದೆ ಬ್ಯಾಂಕ್ ಕಟ್ಟಡದಲ್ಲಿ ಜನರೇಟರ್​​ ಕೂಡ ಇದ್ದು, ಅದರಿಂದ ಸೋರಿಕೆಯಾದ ಅನಿಲಕ್ಕೆ ಈ ಮೂವರು ಸಾವನ್ನಪ್ಪಿಸಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ.

ಇನ್ನೊಂದೆಡೆ ಕಳೆದ ಜೂನ್​ 23 ರಲ್ಲಿ ಈ ಬ್ಯಾಂಕ್​​ನಲ್ಲಿ ಕೋಟ್ಯಾಂತರ ರೂಪಾಯಿ ದರೋಡೆ ಯತ್ನ ನಡೆದಿತ್ತು. ಈ ವೇಳೆ ಇದೇ ಸಿಬ್ಬಂದಿ ಕಳ್ಳರನ್ನು ಓಡಿಸಿ ಕೋಟಿಗಟ್ಟಲೆ ಸ್ವತ್ತು ಉಳಿಸಿಕೊಟ್ಟಿದ್ದರು. ಹೀಗಾಗಿ ಅದೇ ದ್ವೇಷಕ್ಕೆ ವಿಶಪ್ರಾಶನ ನಡೆದಿರಬಹುದೆಂದು ಕೂಡಾ ಶಂಕಿಸಲಾಗುತ್ತಿದೆ. ಒಟ್ಟಿನಲ್ಲಿ ಮೂವರು ಸಿಬ್ಬಂದಿಗಳ ಸಾವು ಹಲವು ಅನುಮಾನ ಹುಟ್ಟುಹಾಕಿದೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಆಗಮಿಸಿದ್ದು, ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.