ಕೈ ಕಟ್ ಸ್ಟೋರಿಗೆ ಮತ್ತೊಂದು ಟ್ವಿಸ್ಟ್- ಸೀರೆಗಾಗಿ ಅಲ್ಲ ಹುಡುಗಿಗಾಗಿ ನಡೆದಿದ್ದು ವಾರ್!

Twist On Activists Hits Case
Twist On Activists Hits Case

ನಿನ್ನೆ ಚಿಕ್ಕಬಳ್ಳಾಪುರದಲ್ಲಿ ರಾಜ್ಯವೇ ಬೆಚ್ಚಿಬೀಳುವಂತ ಘಟನೆಯೊಂದು ನಡೆದಿತ್ತು.

ad


 

ಕಾಂಗ್ರೆಸ್​ ಶಾಸಕನ ಪರ ಸೀರೆ ಹಂಚುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಜೆಡಿಎಸ್​ ಕಾರ್ಯಕರ್ತ ಆತನ ಕೈಯನ್ನೇ ಕತ್ತರಿಸಿದ್ದ. ರಕ್ತ ಸೋರುವ ಸ್ಥಿತಿಯಲ್ಲಿ ಆಸ್ಪತ್ರೆಗೆ ಬಂದ ವ್ಯಕ್ತಿ ನನ್ನ ಕೈ ತಂದು ಕೊಡಿ ಎಂದು ಕಿರುಚುತ್ತಿದ್ದ ದೃಶ್ಯ ಎಂಥವರ ಮನವನ್ನು ಕರಗಿಸುವಂತಿತ್ತು.
ಆದರೇ ಈ ಕೇಸ್​ಗೆ ಮೇಜರ್ ಟ್ವಿಸ್ಟ್​ ಸಕ್ಕಿದೆ. ಹೌದು ನಿನ್ನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದ್ದ ಘಟನೆ ಬಗ್ಗೆ ಇಡೀ ರಾಜ್ಯವೇ ಬೆಚ್ಚಿಬಿದ್ದಿತ್ತು. ಆದರೆ ಇದೀಗ ಆ ಸುದ್ದಿಗೆ ಸ್ಫೋಟಕ ತಿರುವು ಸಿಕ್ಕಿದೇ ಈ ಘಟನೆ ಆಗಿದ್ದೂ ಸೀರೆ ರಾಜಕೀಯಕ್ಕೆ ಅಲ್ಲ ಆ ಸೀರೆ ಉಟ್ಟುಕೊಳ್ಳುವ ಹುಡುಗಿಗಾಗಿ.  ಹೌದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೆನಹಳ್ಳಿಯಲ್ಲಿ ನಿನ್ನೆ ಸಂಜೆ ಕಾಂಗ್ರೆಸ್ ಕಾರ್ಯಕರ್ತ ರವಿ ಗ್ರಾಮದಲ್ಲಿರುವ ಮಹಿಳೆಯರಿಗೆ ಸೀರೆ ಹಂಚುತ್ತಿದ್ದ.

 

ಆದರೆ ಇದ್ದಕಿದ್ದಂತೆ ಲೋಕೇಶ್ ಎಂಬಾತ ಅಲ್ಲಿ ಪ್ರತ್ಯಕ್ಷನಾಗಿ ಭರ್ಜರಿ ಮಚ್ಚಂದನ್ನು ತಂದು ರವಿ ಕಡೆ ಜೋರಾಗಿ ಬೀಸಿದ. ಈ ವೇಳೆ ಅದನ್ನ ತಪ್ಪಿಸಿಕೊಳ್ಳಲು ಎಡಗೈ ಮುಂದೆ ಮಾಡಿದ್ದ ರವಿ ಕೈ ಕಟ್ಟಾಗಿ ಕೆಳಗೆ ಬಿತ್ತು. ಇದನ್ನ ನೋಡಿದ ಜನ ಫುಲ್ ಭಯಗೊಂಡು ಚೀರಿಕೊಂಡರು ಅಷ್ಟರಲ್ಲಿ ಅಲ್ಲಿದಂದ ಲೋಕೇಶ್ ಎಸ್ಕೇಪ್ ಆಗಿದ್ದ ಕೂಡಲೆ ರವಿಯನ್ನು ಕರೆದುಕೊಂಡು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೇ ಇದೀಗ ಹೆಚ್ಚಿನ ಚಿಕಿತ್ಸೆಗಾಗಿ ರವಿಯನ್ನು ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ನಿನ್ನೆ ಈ ಸುದ್ದಿ ಜೆಡಿಎಸ್ ವರ್ಸ್ ಸ್ ಕಾಂಗ್ರೆಸ್ ವೈಷಮ್ಯಕ್ಕೆ ನಡೆದಿದ್ದು, ಆದರೆ ಇದೀಗ ಇದು ಹುಡುಗಿಗಾಗಿ ನಡೆದ ಕೃತ್ಯ ಎಂಬ ಸಂಗತಿ ಬೆಳಕಿಗೆ ಬಂದಿದೆ. ರವಿ ಸಂಬಂಧಿಕರ ಹುಡುಗಿಯನ್ನ ಮದುವೆಯಾಗುವುದಕ್ಕೆಲೋಕೇಶ್ ಮುಂದಾಗಿದ್ದ. ಈ ವೇಳೆ ಆ ಹುಡುಗಿಗೆ ಇನ್ನೂ ಮದುವೆ ಮಾಡುವ ವಯ್ಯಸಾಗಿಲ್ಲ ಆಗಾಗಿ ಹುಡುಗಿಯನ್ನು ಕೊಡುವುದಿಲ್ಲ ಎಂದಿದ್ದ ರವಿ.ಇದರಿಂದ ಆಕ್ರೋಶಗೊಂಡಿದ್ದ ಲೋಕೇಶ್ ಟೈಂಗಾಗಿ ಕಾದು ಕುಳಿತ್ತಿದ್ದ. ನಿನ್ನೆ ಸಂಜೆ ಗ್ರಾಮದಲ್ಲಿ ರವಿ ಸೀರೆ ಹಂಚುವಾಗ ಸಿಕ್ಕ ಟೈಂ ನಲ್ಲಿ ಮಚ್ಚು ಬೀಸಿ ಕೈಕಡಿದಿದ್ದಾನೆ ಲೋಕೇಶ್. ಇದೀಗಾ ಗೌರಿಬಿದನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದೂ ಆರೋಪಿಗಾಗಿ ಬಲೆಬೀಸಿದ್ದಾರೆ.