ಪೋಲಿ ಪೋಲಿಸಪ್ಪ ಲೇಡಿಸ್​ ಟಾಯ್ಲೆಟ್​​ಗೆ ನುಗ್ಗಿದ್ದ್ಯಾಕೆ ಗೊತ್ತಾ?!

Viral Video: Poli Police Inspector Swank On Women.
Viral Video: Poli Police Inspector Swank On Women.

ರಾಜ್ಯದ ರಾಜಕಾರಣಿಗಳು ಒಂದಿಲ್ಲೊಂದು ಎಡವಟ್ಟು ಮಾಡಿಕೊಂಡು ಟೀಕೆಗೆ ಗುರಿಯಾಗುತ್ತಲೇ ಇರ್ತಾರೆ. ಆದರೇ ಇದೀಗ ಈ ಸಾಲಿಗೆ ಪೊಲೀಸ್ ಅಧಿಕಾರಿಯೊಬ್ಬರು ಸೇರ್ಪಡೆಯಾಗಿದ್ದಾರೆ.

ad


ಹೌದು ಮೈಸೂರಿನಲ್ಲಿ ಪೊಲೀಸ್ ಅಧಿಕಾರಿಯೊಬ್ಬ ಮಹಿಳಾ ಶೌಚಾಲಯಕ್ಕೆ ತೆರಳಿ ಮೂತ್ರ ವಿಸರ್ಜನೆ ಮಾಡಿದ್ದು, ಇದೀಗ ಚರ್ಚೆಗೆ ಗ್ರಾಸವಾಗಿದ್ದು, ಸಾಕಷ್ಟು ಟೀಕೆಗೆ ಗುರಿಯಾಗಿದೆ.  ಮೈಸೂರಿನ ಕೆಎಸ್​ಆರ್​ಟಿಸಿ ಸಬ್​ ಅರ್ಬನ್​ ಬಸ್ ನಿಲ್ದಾಣದಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ಶೌಚಾಲಯದ ನಿರ್ವಹಣೆ ಮಾಡೋ ಮಹಿಳೆಯ ಮುಂದೆಯೇ ಪೊಲೀಸ್ ಅಧಿಕಾರಿ ಮಹಿಳಾ ಶೌಛಾಲಯಕ್ಕೆ ತೆರಳಿದ್ದಾನೆ.

ಇದನ್ನು ಸ್ಥಳದಲ್ಲಿದ್ದ ಮಹಿಳೆಯರು ಪ್ರಶ್ನಿಸಿದ್ದಕ್ಕೆ ತಾನು ಗಂಡಸೇ ಅಲ್ಲ ಎಂದು ಆತ ಉತ್ತರಿಸಿದ್ದಾನೆ ಎನ್ನಲಾಗಿದೆ.  ಇನ್ನು ಮಹಿಳಾ ಶೌಚಾಲಯಕ್ಕೆ ಪೊಲೀಸ್ ಅಧಿಕಾರಿ ತೆರಳಿ ಮೂತ್ರ ವಿಸರ್ಜನೆ ಮಾಡಿರೋದು ಇದೀಗ ಮಹಿಳೆಯರ ಆಕ್ರೋಶಕ್ಕೆ ಕಾರಣವಾಗಿದ್ದು,ಇದೇನಾ ಸಭ್ಯತೆ ಎಂದು ಮಹಿಳೆಯರು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೇ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಈ ಪೋಲಿ ಪೋಲಿಸಪ್ಪನ ವಿರುದ್ಧ ದೂರು ನೀಡಲು ನಿರ್ಧರಿಸಿದ್ದಾರೆ.