ಸಾಲ ಕೊಡ್ತಿಸ್ತೀನಿ ಅಂತ ಕೈ ಎತ್ತಿದಾಕೆಗೆ ಮಹಿಳೆಯರು ಮಾಡಿದ್ದೇನು ಗೊತ್ತಾ?

Women Beaten Cheated Lady| for Loan issue Tumkur.
Women Beaten Cheated Lady| for Loan issue Tumkur.

ಮೋಸ ಹೋಗೋರು ಇರೋ ತನಕ ಮೋಸ ಮಾಡೋರು ಇರ್ತಾರೆ ಅನ್ನೋದು ಮತ್ತೆ ಸಾಬೀತಾಗಿದೆ.

ಹೌದು ಕಲ್ಪತರ ನಾಡು ತುಮಕೂರಿನಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಮಹಿಳೆಯೊರ್ವಳು ಎಸ್​ಬಿಐ ಬ್ಯಾಂಕ್​​ನಿಂದ ಲಕ್ಷ ಲಕ್ಷ ಲೋನ್​​ ಕೊಡಿಸೋದಾಗಿ ನಂಬಿಸಿ ಪಂಗನಾಮ ಹಾಕಿದ್ದಾಳೆ. ಕಂಗಾಲಾದ ಮಹಿಳೆಯರು ಮೋಸಮಾಡಿದ ಯುವತಿಯನ್ನು ಹಿಡಿದು ಸರಿಯಾಗಿ ಥಳಿಸಿದ್ದಾರೆ.
ತುಮಕೂರಿನ ಶಿರಾಗೇಟ್ ನಿವಾಸಿ ಪುಷ್ಪಾ ಎಂಬಾಕೆ ಸ್ಥಳೀಯ ಕೂಲಿಕಾರ ಮಹಿಳೆಯರಿಗೆ ಬೇರೆ-ಬೇರೆ ಬ್ಯಾಂಕ್​​ನಿಂದ ಕಡಿಮೆ ಬಡ್ಡಿ ದರದಲ್ಲಿ ಲೋನ್ ಕೊಡಿಸುವುದಾಗಿ ನಂಬಿಸಿದ್ದಳು.

 

 

ಅಷ್ಟೇ ಅಲ್ಲ ಲೋನ್ ಪಡೆಯುವ ಪ್ರೊಸಿಜರ್​ಗೆ ಅಗತ್ಯವಿದೆ ಎಂದು ಹಣವನ್ನು ಕಲೆಕ್ಟ್​ ಮಾಡಿದ್ದಳು. ಆದರೆ ಲೋನ್ ಸಿಗದೇ ಮಹಿಳೆಯರೂ ಕಂಗಾಲಾದಾಗ ಪುಷ್ಪಾ ವಂಚಿಸಿರೋದು ಬೆಳಕಿಗೆ ಬಂದಿತ್ತು. ನಿನ್ನೆ ರಾತ್ರಿ ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ಪುಷ್ಪಾಳನ್ನು ಸಾರ್ವಜನಿಕರು ಹಾಗೂ ಮಹಿಳೆಯರು ಸಖತ್ತಾಗೇ ತರಾಟೆಗೆ ತೆಗೆದುಕೊಂಡರು. ಅಷ್ಟೇ ಅಲ್ಲ 5 ಕಿಲೋಮಈಟರ್ ಮೆರವಣಿಗೆಯಲ್ಲಿ ಕರೆತಂದು ತುಮಕೂರು ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವೇಳೆ ಪುಷ್ಪಾ ಸಾವಿರಾರು ಮಹಿಳೆಯರಿಂದ 3-4 ಸಾವಿರ ರೂಪಾಯಿಗಳಂತೆ ಲಕ್ಷಾಂತರ ರೂಪಾಯಿ ಕಲೆಕ್ಟ್​ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ. ತುಮಕೂರು ನಗರ ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.