ಧರ್ಮಸ್ಥಳ ಮಂಜುನಾಥನ ಸನ್ನಿಧಿಗೆ ಬಂದು ಪ್ರಮಾಣ ಮಾಡಲಿ – ಮುದ್ದಹನುಮೇಗೌಡರ ಮೇಲೆ ಗಂಭೀರ ಆರೋಪ

ಕರ್ನಾಟಕ ವಿಧಾನಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರ್ತಾನೆ ಇದೆ. ಈ ನಿಟ್ಟಿನಲ್ಲಿ ಟಿಕೆಟ್ವಂಚಿತರ ಆಕ್ರೋಶ ಕೂಡ ಚುನಾವಣಾ ಕಣದಲ್ಲಿ ಕಾವೇರುತ್ತಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕೈಟಿಕೆಟ್ ಆಕಾಂಕ್ಷಿ ಹೊನ್ನಗಿರಿಗೌಡ ಗಂಭೀರ ಆರೋಪವನ್ನ ಮಾಡಿದ್ದಾರೆ. ಗುಬ್ಬಿ ಕ್ಷೇತ್ರದ ಕಾಂಗ್ರೆಸ್ ಟಿಕೆಟನ್ನು ಸಂಸದ ಮುದ್ದಹನುಮೇಗೌಡ ಕೋಟಿ ಕೋಟಿಹಣ ಪಡೆದು ಕೆ.ಕುಮಾರ್ ಗೆ ಟಿಕೆಟ್ ಕೊಡಲಾಗಿದೆ ಅಂತ ಆರೋಪಮಾಡಿದ್ದಾರೆ.

ad


ಇನ್ನೂಹಣ ಪಡೆದಿಲ್ಲ ಎಂದು ಮುದ್ದಹನುಮೇಗೌಡ ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲಿ, ಹಣ ಪಡೆದಿದ್ದಾರೆ ಎಂದು ನಾನೂ ಪ್ರಮಾಣ ಮಾಡ್ತೆನೆ, ಮುದ್ದಹನುಮೇಗೌಡರಿಗೆ ಮಾನ ಮಾರ್ಯಾದೆ ಇಲ್ಲ ಕಾಂಗ್ರೆಸ್ ಮುಗಿಸಲು ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಗೆ ಬಂದಿದ್ದಾರೆ,ಇಂತವರಿಂದ ಜಿಲ್ಲಾ ಕಾಂಗ್ರೆಸ್ ನಲ್ಲಿ ನಿಷ್ಠಾವಂತ ರಿಗೆ ಬೆಲೆ ಸಿಗುತ್ತಿಲ್ಲ.

ನಾನು ಗುಬ್ಬಿಕ್ಷೇತ್ರದಲ್ಲಿ ಕಾಂಗ್ರೆಸ್ ಕಟ್ಟಿ ಬೆಳೆಸಿದ್ದೇನೆ ಆದ್ರೆ ಮೂರು ತಿಂಗಳ ಹಿಂದೆ ಕಾಂಗ್ರೆಸ್ ಗೆ ಸೇರಿದವರಿಗೆ ಟಿಕೆಟ್ ಕೊಡಲಾಗಿದೆ ಎಲ್ಲವೂ ಮುದ್ದಹನುಮೇಗೌಡರ ಹಣದ ಆಟ ಎಂದು ಆಕ್ರೋಶಭರಿತವಾಗಿ ಅಸಮಾಧಾನ ಹೊರಹಾಕಿದ್ರು.