ಅಂಬರೀಷ್ ನಾಪತ್ತೆ !! ಹುಡುಕಾಟದಲ್ಲಿ ಅಭಿಮಾನಿಗಳು !! ಗೌಡರ ಪಾಳಯ ಸೇರಿದರೇ ರೆಬೆಲ್ ಸ್ಟಾರ್ ?

 

ನಿನ್ನೆಯಿಂದ ರೆಬೆಲ್ ಸ್ಟಾರ್ ಅಂಬರೀಶ್ ನಾಪತ್ತೆಯಾಗಿದ್ದಾರೆ. ಹೌದು.‌ ನಿನ್ನೆಯಿಂದ ನಟ, ಮಾಜಿ ಸಚಿವ, ಹಾಲಿ ಶಾಸಕ ಅಂಬರೀಷ್ ನಾಪತ್ತೆಯಾಗಿದ್ದಾರೆ. ಅಂಬರೀಷ್ ಗೆ ಮಂಡ್ಯ ವಿಧಾನಸಭಾ ಟಿಕೆಟ್ ಘೋಷಣೆಯಾದ್ರೂ ಬಿಫಾರಂ ತೆಗೆದುಕೊಂಡಿಲ್ಲ. ಅಂಬಿ ಚುನಾವಣೆಗೆ ನಿಲ್ತಾರೋ ಇಲ್ವೋ ಎಂಬುದನ್ನೂ ಸ್ಪಷ್ಟಪಡಿಸಿಲ್ಲ. ಇದರಿಂದ ಕಂಗೆಟ್ಟ ಕಾಂಗ್ರೆಸ್ ಮುಖಂಡರು ಅಂಬರೀಶ್ ರನ್ನು ಸಂಪರ್ಕಿಸಲು ಯತ್ನಿಸಿದರೆ ಕೈಗೆ ಸಿಗುತ್ತಿಲ್ಲ.

 

ಸಚಿವ ಸ್ಥಾನವನ್ನು ಕಿತ್ತುಕೊಂಡಿದ್ದರಿಂದ ಮತ್ತು ಚೆಲುವರಾಯಸ್ವಾಮಿಯನ್ನು ಪಕ್ಷಕ್ಕೆ ಸೇರಿಸಿರೋದ್ರಿಂದ ನನಗೆ ಅವಮಾನವಾಗಿದೆ. ನನ್ನನ್ನು ಕೇಳದೇ ತೆಗೆದುಕೊಂಡ ನಿರ್ಧಾರಗಳು ನೋವು ತಂದಿದೆ ಎಂದು ಅಂಬರೀಶ್ ತನ್ನ ಆಪ್ತರ ಬಳಿ ಹೇಳಿಕೊಂಡಿದ್ದರು. ನಿನ್ನೆ ಕೆ ಜೆ ಜಾರ್ಜ್ ಅಂಬರೀಶ್ ನಿವಾಸಕ್ಕೆ ತೆರಳಿದ್ದು, ಅಂಬರೀಶ್ ಮನೆಯಲ್ಲಿ ಇರಲಿಲ್ಲ. ನಂತರ ಮುಖ್ಯಮಂತ್ರಿ ಯೇ ಖುದ್ದು ಅಂಬರೀಶ್ ಮನೆಗೆ ತೆರಳಿ ಮಾತುಕತೆ ನಡೆಸಲು ಸಿದ್ದರಿದ್ದರೂ ಅಂಬರೀಶ್ ಮನೆಗೆ ಬಂದಿರಲಿಲ್ಲ. ನಿನ್ನೆ ರಾತ್ರಿಯಿಂದ ಅಭಿಮಾನಿಗಳಿಗೂ ಅಂಬರೀಶ್ ಸಿಕ್ಕಿಲ್ಲ. ಮೂಲಗಳ ಪ್ರಕಾರ ಅಂಬರೀಶ್ ಜೆಡಿಎಸ್ ವರಿಷ್ಠರ ಜೊತೆ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.

ಅಂಬರೀಷ್ ಜೆಡಿಎಸ್ ಸೇರಲು ಒಪ್ಪಿಕೊಂಡಿದ್ದು, ಈ ಬಾರಿ ಚುನಾವಣೆಗೆ ನಿಲ್ಲುತ್ತಿಲ್ಲ. ಬದಲಾಗಿ ಮೈಸೂರು ಮಂಡ್ಯ ಭಾಗದ ಚುನಾವಣೆ ಗೆಲ್ಲಿಸುವ ಜವಾಬ್ದಾರಿ ಹೊತ್ತುಕೊಂಡಿದ್ದಾರೆ ಎನ್ನಲಾಗಿದೆ.