ಮತ್ತೆ ರಾಜ್ಯಕ್ಕೆ ಅಮಿತ್ ಶಾ. ಎಲ್ಲೆಲ್ಲಿ ಹೋಗ್ತಾರೆ? ಯಾವ್ಯಾವ ಸ್ವಾಮೀಜಿಗಳ ಜೊತೆ ಚರ್ಚೆ?

 

  • ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಶಿವಯೋಗಮಂದಿರಕ್ಕೆ ನಾಳೆ ಭೇಟಿ ನೀಡಲಿರುವ ಅಮಿತ್ ಶಾ
  • ತೀವ್ರ ಕುತೂಹಲ ಕೆರಳಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮೀತಶಾ ಭೇಟಿ.
  • ವಟುಗಳ ವಿಶ್ವವಿದ್ಯಾಲಯವೆಂದೇ ಖ್ಯಾತಿ ಪಡೆದರುವ ಶಿವಯೋಗ ಮಂದಿರ ಈ ಭಾಗದ ಬಹಳ ಪ್ರಸಿದ್ಧವಾದ ಮಠ.
  • ಈ ಹಿಂದೆ ನೂರಾರು ಮಠಾಧಿಶರು ರಂಭಾಪುರಿ ಜಗದ್ಗುರುಗಳ ನೇತೃತ್ವದಲ್ಲಿ ಪಂಚಪೀಠಗಳ ಜಗದ್ಗುರುಗಳು ಸಮಾವೇಶ ನಡೆಸಿ ವೀರಶೈವರು ಲಿಂಗಾಯತರು ಒಂದೇ ಎಂದು ಸಾರಿದ್ದ ಶಿವಯೋಗಮಂದಿರ.
  • ಈಗ ಮತ್ತೆ ಅಮೀತಶಾ ಭೇಟಿ ನೀಡುತ್ತಿರುವುದು ತೀವ್ರ ಕುತೂಹಲ ಮಕೆರಳಿಸಿದೆ.
  • ಮೈಸೂರು ದೇಶಿಕೇಂದ್ರ ಶ್ರೀಗಳು,ತುಮಕೂರಿನ ಸಿದ್ಧಗಂಗಾ ಶ್ರೀಗಳನ್ನು ಭೇಟಿ ಮಾಡಿರುವ ಅಮೀತಶಾ ಶಿವಯೋಗಮಂದಿರಕ್ಕೆ ಭೇಟಿ ನೀಡುತ್ತಿರುವುದರ ಹಿಂದೆ ವೀರಶೈವ ಲಿಂಗಾಯತ ಹೋರಾಟದ ಕುರಿತು ರಣತತಂತ್ರ ಹೆಣೆಯುವ ಸಾಧ್ಯತೆ.
  • ಅಮೀತಾ ಜೊತೆ ಚರ್ಚೆಯಲ್ಲಿ ಭಾಗಿಯಾಗಲಿರುವ ನೂರಾರು ಮಠಗಳ ಮಠಾಧೀಶರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮೀತಶಾ ಅವರು, ವಟುಗಳ ವಿಶ್ವವಿದ್ಯಾಲಯವೆಂದೇ ಖ್ಯಾತಿ ಪಡೆದಿರುವ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಶಿವಯೋಗಮಂದಿರಕ್ಕೆ ನಾಳೆ ಭೇಟಿ ನೀಡುತ್ತಿರುವುದು ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದೆ.

 

ಈ ಭಾಗದ ಪವಿತ್ರ ಕ್ಷೇತ್ರ ಆರಾಧ್ಯ ದೈವವೆಂದೇ ಪ್ರಸಿದ್ಧಿ ಹೊಂದಿದೆ ಈ ಈ ಶಿವಯೋಗಮಂದಿರ. ಕಳೆದ ಕೆಲವು ತಿಂಗಳುಗಳ ಹಿಂದೆ ರಂಭಾಪುರಿ ಜಗದ್ಗುರುಗಳ ನೇತೃತ್ವದಲ್ಲಿ ಪಂಚಪೀಠಾಧಿಶ್ವರರು ಹಾಗೂ ವಿವಿಧ ಮಠಗಳ ಮಠಾಧೀಶರು ಸಮಾವೇಶ ನಡೆಸಿ ವೀರಶೈವರು ಲಿಂಗಾಯತರು ಒಂದೇ ಎಂದು ಸಾರಿದ್ದರು.

ಕಳೆದ ಮಾರ್ಚ 13ರಂದು ಕೂಡ ಮುಖ್ಯಮಂತ್ರಿಗಳು ಲಿಂಗಾಯತ ಧರ್ಮಕ್ಕೆ ಸ್ವತಂತ್ರ್ಯ ಧರ್ಮದ ಮಾನ್ಯತೆಗೆ ಕೇಂದ್ರೆಕ್ಕೆ ಶಿಫಾರಸ್ಸು ಮಾಡಬಾರದೆಂದು ಇದೇ ಶಿವಯೋಗಮಂದಿರದಲ್ಲಿ ನೂರಾರು ಮಠಗಳ ಮಠಾಧೀಶರು ಸಭೆ ನಡೆಸಿ ಸಿಎಂ ಅವರಿಗೆ ಚ್ಚರಿಕೆ ನೀಡಿದ್ದರು.

 

ಈಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮೀತಶಾ ಮೈಸೂರಿನ ದೇಶೀಕೇಂದ್ರ ಶ್ರೀಗಳು,ತುಮಕೂರಿನ ಸಿದ್ಧಗಂಗಾ ಶ್ರೀಗಳನ್ನ ಈಗಾಗಲೇ ಭೇಟಿ ಯಾಗಿದ್ದು,ಈಗ ಮತ್ತೆ ಶಿಯೋಗಮಂದಿರಕ್ಕೆ ಭೇಟಿ ನೀಡುತ್ತಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಎಪ್ರೀಲ್ 2 ಹಾಗೂ 3ರಂದು ಅಮೀತಶಾ ಅವರ ಕರ್ನಾಟಕ ಪ್ರವಾಸ ತುರ್ತು ಕಾರ್ಯಕ್ರಮದ ನಿಮಿತ್ಯ ರದ್ದಾಗಿತ್ತು,ಆದ್ರೆ ಈಗ ಮತ್ತೆ ಅಮೀತಶ ಎಪ್ರೀಲ್ 3ರಂದು(ನಾಳೆ)ಶಿವಯೋಗ ಮಂದಿರಕ್ಕೆ ಭೇಟಿ ನೀಡುತ್ತಿದ್ದಾರೆ.ಶಿವಯೋಗಮಂದಿರದ ಟ್ರಸ್ಟನ ಅಧ್ಯಕ್ಷ ಸಂಗನಬಸವ ಶ್ರೀಗಳು ಸೇರಿದಂತೆ ನೂರಾರು ಮಠಗಳ ಮಠಾಧೀಶರ ಜೊತೆ ಅಮೀತಶಾ ಚರ್ಚಿಸಲಿದ್ದಾರೆ.

ನಾಳೆ ದೆಹಲಿಯಿಂದ ವಿಮಾನದ ಮೂಲಕ ಬೆಂಗಳೂರಿಗೆ ಆಗಮಿಸುವ ಅಮೀತಶಾ ,ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಸಂಜೆ ಐದಕ್ಕೆ ಶಿವಯೋಗಮಂದಿರಕ್ಕೆ ಆಗಮಿಸಿ ಸುಂಆರು ಒಂದು ಗಂಟೆಗಳ ಕಾಲ ಸ್ವಾಮೀಜಿಗಳ ಜೊತೆ ಚರ್ಚೆ ನಡೆಸಲಿದ್ದಾರೆ.ನಂತರ ಕಾರ್ ಮೂಲಕ ಸಂಜೆ ಹುಬ್ಬಳ್ಳಿ ತಲುಪಿ ವಿಮಾನದ ಮೂಲಕ ದೆಹಲಿಯತ್ತ ಪ್ರಯಾಣ ಬೆಳೆಸಲಿದ್ದಾರೆ.

ಚುನಾವಣೆ ಸಂದರ್ಭದಲ್ಲಿ ವೀರಶೈವ -ಲಿಂಗಾಯತ ಹೋರಾಟದ ಕಾವು ಬೂದಿಮುಚ್ಚಿದ ಕೆಂಡದಂತಿದ್ದು ,ನಾಡಿನ ಎಲ್ಲ ಪ್ರಮುಖ ಶ್ರೀಗಳನ್ನ ಭೇಟಿಯಾಗುತ್ತಿರುವ ಅಮೀತಶಾ ಸ್ಟ್ರಾಟರ್ಜಿ ಏನು ಎಂಬುದು ಸಧ್ಯಕ್ಕಿರುವ ಕುತೂಹಲ.