ಎಮ್​​ಇಪಿ ಸೇರಿದ ನರ್ಸ್​ ಜಯಲಕ್ಷ್ಮೀ- ವಜ್ರದ ಗುರುತಿಗೆ ಮತ ನೀಡಿ ಅಂದ್ರು ಬಿಗ್​ಬಾಸ್​​ ಜಯಾ!!

ಕರ್ನಾಟಕ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ನೌಹೀರಾ ಶೇಕ್​ ನೇತೃತ್ವದ ಎಂಇಪಿ ಪಕ್ಷ ಮತ್ತಷ್ಟು ಬಲವಾಗತೊಡಗಿದೆ.

 ಹೌದು ಎಂಇಪಿ ಪಕ್ಷಕ್ಕೆ ಇದೀಗ ತಾರಾಮೆರುಗು ಬಂದಿದ್ದು, ಬಿಗ್ ಬಾಸ್ ಖ್ಯಾತಿಯ ಹಾಗೂ ಕಿರುತೆರೆಯ ನಟಿ ನರ್ಸ್ ಜಯಲಕ್ಷ್ಮಿ ಇಂದು ಎಂಇಪಿ ಸೇರ್ಪಡೆಯಾಗಿದ್ದಾರೆ. ನಗರದ ಖಾಸಗಿ ಹೊಟೇಲ್​ನಲ್ಲಿ ನಡೆದ ಸಮಾರಂಭದಲ್ಲಿ ನರ್ಸ್​ ಜಯಲಕ್ಷ್ಮೀ ಎಂಇಪಿಗೆ ಸೇರಿದ್ದಾರೆ.  ಇನ್ನು ಸೇರ್ಪಡೆ ಸಮಾರಂಭದಲ್ಲಿ ಮಾತನಾಡಿದ ಎಂಇಪಿ ಪಕ್ಷದ ಮುಖ್ಯಸ್ಥೆ ಡಾ.ನೌಹೇರಾ ಶೇಖ್​, ಈ ದೇಶದಲ್ಲಿ ಮಹಿಳೆಯರಿಗೆ ಅಧಿಕಾರ ಸಿಗುವಂತೆ ಮಾಡಲು ಮತ್ತು ಮಹಿಳೆಯರಿಗೆ ನ್ಯಾಯ ನೀಡಲು ಈ ಪಕ್ಷ ಸ್ಥಾಪನೆಗೊಂಡಿದೆ.

ನಮ್ಮ ಪಕ್ಷ ಈಭಾರಿ ವಿಧಾನಸಭೆ ಚುನಾವಣೆಯ 224 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿದೆ ಎಂದರು. ಇನ್ನು ಎಂಇಪಿಗೆ ಸೇರಿದ ನರ್ಸ್​ ಜಯಲಕ್ಷ್ಮೀ ಮಾತನಾಡಿ,ನೌಹೀರಾ ಶೇಖ್ ಮಾಡ್ತಿರೋ ಸಾಮಾಜಿಕ ಕೆಲಸ ಪಕ್ಷಕ್ಕೆ ಸೇರ್ಪಡೆ ಮಾಡುವಂತೆ ಮಾಡಿತು. ಇವ್ರು ಪ್ರಚಾರ ಪ್ರಿಯೆ ಅಲ್ಲ. ನನ್ನ ಕಡೆಯಿಂದ ಪಕ್ಷಕ್ಕೆ ಅಳಿಲು ಸೇವೆ ಮಾಡಲೆಂದು ಸೇರಿದ್ದೇನೆ ಎಂದು ಹೇಳಿದ್ರು.