ಬಿಜೆಪಿಗೆ ದುಬಾರಿಯಾದ ನಟ ಪ್ರಕಾಶ್ ರೈ ವಿರೋಧ !! ಕೈ ಜೊತೆ ನಿಲ್ಲಲಿದ್ದಾರೆ ಸ್ಟಾರ್ ನಟರು !!

ಗೌರಿ ಹತ್ಯೆ ವಿಚಾರಕ್ಕೆ ಸಂಬಂಧಿಸಿ ಪ್ರಧಾನಿ ಮೋದಿಯನ್ನು ಪ್ರಶ್ನಿಸಿದರೆಂದು ಬಿಜೆಪಿಗರು ಪ್ರಕಾಶ್ ರೈ ಮೇಲೆ ಮುಗಿಬಿದ್ದಿದ್ದು ಈಗ ದುಬಾರಿಯಾಗಿ ಪರಿಣಮಿಸಿದೆ. ಮತ್ತೊದೆಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್ ರಾಜಕೀಯ ನಡೆ ಕೂಡಾ ಬಿಜೆಪಿಯನ್ನು ಆತಂಕಕ್ಕೆ ದೂಡಿದೆ.

ad

 ಹೌದು. ಬಹುಭಾಷಾ ನಟ ಪ್ರಕಾಶ್ ರೈ, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದು, ಮೂವರೂ ಕೂಡಾ ಬಿಜೆಪಿ ಸೋಲಿಸುವ ನಿಟ್ಟಿನಲ್ಲಿ ಚುನಾವಣೆಯಲ್ಲಿ ಸಕ್ರೀಯರಾಗಲಿದ್ದಾರೆ. ಪ್ರಕಾಶ್ ರೈ ಜೊತೆಗಿನ ಮಾತುಕತೆ ಸಂಧರ್ಭದಲ್ಲಿ ಇಷ್ಟಪಡೋ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಹ್ವಾನ ನೀಡಿದ್ದಾರೆ. ಆದರೆ ಚುನಾವಣೆ ಸ್ಪರ್ಧೆಗೆ ನಿರಾಕರಿಸಿರೋ ರೈ, ಚುನಾವಣಾ ಪ್ರಚಾರದಲ್ಲಿ ಸಕ್ರೀಯವಾಗಿ ಭಾಗಿಯಾಗೋ ಭರವಸೆ ನೀಡಿದ್ದಾರೆ. ತೆಲುಗು, ತಮಿಳು ಚಿತ್ರೋಧ್ಯಮದಲ್ಲಿ ಭಾರೀ ಪ್ರಭಾವವನ್ನು ಹೊಂದಿರುವ ಪ್ರಕಾಶ್ ರೈ ಮೂಲಕ ತೆಲುಗು ತಮಿಳು ಸ್ಟಾರ್ಸ್ ಅನ್ನು ಕರ್ನಾಟಕದ ಗಡಿ ಭಾಗಗಳಲ್ಲಿ ಪ್ರಚಾರಕ್ಕೆ ಬಳಸಲು ನಿರ್ಧರಿಸಲಾಗಿದೆ.

ಮತ್ತೊಂದೆಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕಿಚ್ಚ ಸುದೀಪ್ ಜೊತೆಗೂ ಸಿದ್ದರಾಮಯ್ಯ ನಡೆಸಿದ ಮಾತುಕತೆ ಯಶಸ್ವಿಯಾಗಿದೆ. ಸಿನೇಮಾ ಕ್ರೇಜ್ ಇರುವ ವಿಧಾನಸಭಾ ಕ್ಷೇತ್ರಗಳನ್ನು ಗುರುತಿಸಿ ಇಬ್ಬರೂ ಕೂಡಾ ಕ್ಯಾಂಪೇನ್ ಮಾಡಲಿದ್ದಾರೆ. ಇದು ಬಿಜೆಪಿಗೆ ಸವಾಲಾಗಿ ಪರಿಣಮಿಸಲಿದೆ. ಈಗಾಗಲೇ ರಾಜಕುಮಾರ್ ಫ್ಯಾಮಿಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಜೊತೆಗೆ ಆತ್ಮೀಯತೆಯಿಂದ ಇದ್ದು, ಮತ್ತೆ ಇಬ್ಬರು ಸ್ಟಾರ್ ನಟರು ಕಾಂಗ್ರೆಸ್ ತೆಕ್ಕೆಗೆ ಬಿದ್ದಿರೋದು ಬಿಜೆಪಿ ಚಿಂತೆಗೆ ಕಾರಣವಾಗಿದೆ.