ಆರ್​.ಎಸ್​.ಎಸ್​.ಭ್ರಷ್ಟಾಚಾರದ ಬಗ್ಗೆ ಮಾತಾಡದೇ ಇರೋದೆ ವಾಸಿ- ಬಿಜೆಪಿ MLA ವಿವಾದಾತ್ಮಕ ಹೇಳಿಕೆ

ರಾಜ್ಯ ಚುನಾವಣೆ ಬೆನ್ನಲ್ಲೇ ಬಿಜೆಪಿಯ ಆಂತರಿಕ ಭಿನ್ನಮತ ಸ್ಪೋಟಿಸಿದೆ. ಹೌದು ಬಿಜೆಪಿಯ ಶಾಸಕರೊಬ್ಬರು ಬಿಜೆಪಿಯ ಹೈಕಮಾಂಡ್​ ಎಂದೇ ಕರೆಯಿಸಿಕೊಳ್ಳುವ ಆರ್​.ಎಸ್.ಎಸ್​. ಬಗ್ಗೆ ಲಘುವಾಗಿ ಮಾತಾಡಿದ್ದು, ಆರ್​ಎಸ್​ಎಸ್​​ ಭ್ರಷ್ಟ ವ್ಯವಸ್ಥೆ ಎನ್ನುವ ಮೂಲಕ ಹೊಸತೊಂದು ವಿವಾದ ಸೃಷ್ಟಿಸಿದ್ದಾರೆ.

adಹೌದು ಬಿಜೆಪಿ ತುಮಕೂರು ಗ್ರಾಮಾಂತರ ಶಾಸಕ ಸುರೇಶ್​ ಗೌಡ್ ಬಿಜೆಪಿಯ ಆತಂರಿಕ ಭಿನ್ನಮತ,ಆರ್​ಎಸ್​ಎಸ್​ ಸೇರಿದಂತೆ ಹಲವು ಆಂತರಿಕ ವಿಚಾರಗಳ ಬಗ್ಗೆ ಮಾತನಾಡಿದ ವಿಡಿಯೋ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಅಂದಾಜು 6 ನಿಮಿಷಗಳ ಈ ಆಡಿಯೋದಲ್ಲಿ ತುಮಕೂರು ಗ್ರಾಮಾಂತರ ಶಾಸಕ ಸುರೇಶ್ ಗೌಡ್, ಅನಂತಕುಮಾರ್ ಹಾಗೂ ಬಿಎಸ್​ವೈ ನಡುವೆ ಹುಳಿ ಹಿಂಡಲಾಗಿದೆ. ಆರ್​.ಎಸ್​​.ಎಸ್​ನ ಭ್ರಷ್ಟಾಚಾರದ ಬಗ್ಗೆಯಂತೂ ಮಾತಾಡೋದೆ ಬೇಡ. ಅಷ್ಟು ಭ್ರಷ್ಟಾಚಾರ ಆರ್.ಎಸ್​.ಎಸ್​.ನಲ್ಲಿದೆ ಸೇರಿದಂತೆ ಹಲವು ವಿಚಾರಗಳ ಕುರಿತು ಮುಕ್ತವಾಗಿ ಟೀಕಿಸಿದ್ದು, ಈ ವಿಡಿಯೋ ಇದೀಗ ರಾಜ್ಯದಲ್ಲಿ ಸಂಚಲನ ಮೂಡಿಸಿದೆ.

ಅಲ್ಲದೇ ಬಿಎಸ್​ವೈ ಹೊರಬಂದರೇ ಬಿಜೆಪಿಯ ಕತೆಯೇನು ಎಂಬುದರ ಬಗ್ಗೆಯೂ ಸುರೇಶ್​ ಗೌಡ್​ ಉಲ್ಲೇಖಿಸಿದ್ದು, 500 ಕೋಟಿ ಹಣ ಖರ್ಚು ಮಾಡಿದರೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಸುರೇಶ್ ಗೌಡ್ ಹೇಳಿರೋದು ಇದೀಗ ಬಿಜೆಪಿಗರ ಆಕ್ರೋಶಕ್ಕೆ ಕಾರಣವಾಗಿದೆ.


ಇನ್ನು ಸುರೇಶ್​ ಗೌಡ್​ ಮಾತನಾಡಿರುವ ಈ ವಿಡಿಯೋ ಸಖತ್ ವೈರಲ್​ ಆಗಿದ್ದು, ಈ ವಿಡಿಯೋ ಯಾವಾಗ ರೇಕಾರ್ಡ್​ ಆಗಿರೋದು ಎಂಬುದರ ಬಗ್ಗೆ ಚರ್ಚೆ ಆರಂಭವಾಗಿದೆ. ಕೇವಲ ಬಿಜೆಪಿ ಬಗ್ಗೆ ಮಾತ್ರವಲ್ಲದೇ ಮೀಡಿಯಾಗಳ ಬಗ್ಗೆ ಮಾತನಾಡಿರುವ ಸುರೇಶ್ ಗೌಡ್​, ಪ್ರಜಾವಾಣಿ ಪತ್ರಿಕೆ ಬಗ್ಗೆಯೂ ಮಾತನಾಡಿರುವ ಸುರೇಶ್ ಗೌಡ್ ಶಾಂತಕುಮಾರ್ ಗೆ ಡಿನೋಟಿಫೈ ಮಾಡಿಕೊಡಲಾಗಿದೆ ಎಂದಿದ್ದಾರೆ. ಒಟ್ಟಿನಲ್ಲಿ ಇದೀಗ ಸುರೇಶ್ ಗೌಡ್​ ವಿಡಿಯೋ ಸಂಚಲನ ಮೂಡಿಸಿದ್ದು, ಬಿಜೆಪಿ ನಾಯಕರು ಹೇಗೆ ಪ್ರತಿಕ್ರಿಯಿಸುತ್ತಾರೆ ಕಾದು ನೋಡಬೇಕಿದೆ.