ಬಿಜೆಪಿ ಎರಡನೇ ಪಟ್ಟಿ ಪ್ರಕಟ !! ಹಾಲಪ್ಪ, ರೇಣುಕಾಚಾರ್ಯ ಸೇರಿದಂತೆ 82 ಅಭ್ಯರ್ಥಿಗಳ ಹೆಸರು !! ಯಾರಿಗೆ ಸಿಹಿ ? ಯಾರಿಗೆ ಕಹಿ ?

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲಿರುವ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಇಂದು ಬಿಡುಗಡೆ ಮಾಡಿದೆ.

ಬಿಜೆಪಿ ಅಳೆದು ತೂಗಿ ಆಯ್ಕೆ ಮಾಡಲಾಗಿರುವ ಎರಡನೇ ಪಟ್ಟಿಯಲ್ಲಿ 82 ಅಭ್ಯರ್ಥಿಗಳ ಹೆಸರಿದೆ.

 

 

ಕಳೆದ ಭಾನುವಾರ 72 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿತ್ತು. ಎರಡೂ ಪಟ್ಟಿ ಸೇರಿ ಒಟ್ಟು 154 ಅಭ್ಯರ್ಥಿಗಳ ಹೆಸರು ಅಂತಿಮಗೊಂಡತಾಗಿದ್ದು, ಮತ್ತೊಂದು ಪಟ್ಟಿ ಬಿಡುಗಡೆಯನ್ನು ಬಿಜೆಪಿ ಬಿಡುಗಡೆ ಮಾಡಬೇಕಿದೆ.

ಶಿವಾಜಿನಗರದಿಂದ ಕಟ್ಟಾ ಸುಬ್ರಮಣ್ಯ ನಾಯ್ಡು, ಸಾಗರ– ಹರತಾಳು ಹಾಲಪ್ಪ, ಸೊರಬ–ಕುಮಾರ್ ಬಂಗಾರಪ್ಪ, ತೀರ್ಥಹಳ್ಳಿ– ಅರಗ ಜ್ಞಾನೇಂದ್ರ, ಹೊನ್ನಾಳಿ– ಎಂ.ಪಿ.ರೇಣುಕಾಚಾರ್ಯ, ಶಾಂತಿ ನಗರ– ವಾಸುದೇವ ಮೂರ್ತಿ, ಬಳ್ಳಾರಿ– ಸಣ್ಣ ಫಕೀರಪ್ಪ, ತುರುವೇಕೆರೆ–ಮಸಾಲೆ ಜಯರಾಂ ಸೇರಿ ಮುಂತಾದವರ ಹೆಸರು ಎರಡನೇ ಪಟ್ಟಿಯಲ್ಲಿದೆ.

ಸಿಎಂ ಸಿದ್ದರಾಮಯ್ಯ ಪುತ್ರ ಸ್ಪರ್ಧಿಸುವ ಬಹುನಿರೀಕ್ಷಿತ ವರುಣಾ ವಿಧಾನಸಭಾ ಕ್ಷೇತ್ರ, ಸಿಎಂ ಸ್ಪರ್ಧಿಸೋ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ಸೇರಿದಂತೆ ಮಂಗಳೂರು, ಮಂಗಳೂರು ಉತ್ತರ, ಮಂಗಳೂರು ದಕ್ಷಿಣ ಮತ್ತಿತರ ಹಲವು ಕ್ಷೇತ್ರಗಳ ಅಭ್ಯರ್ಥಿಯನ್ನು ಇನ್ನಷ್ಟೇ ಪ್ರಕಟ ಮಾಡಬೇಕಿದೆ. ಮೂರನೇ ಪಟ್ಟಿಗೆ ಇದೀಗ ಆಕಾಂಕ್ಷಿಗಳು ಕಾಯುವಂತಾಗಿದೆ.