ಸಿದ್ದು ಸೋಲಬಹುದು- ಯಡ್ಡಿ ಸಿಎಂ ಆಗದೇ ಇರಬಹುದು- ಅಚ್ಚರಿ ಮೂಡಿಸಿದೆ ಸ್ವಾಮೀಜಿ ಭವಿಷ್ಯ!

ಕೈ ಕಮರಿ,ಕಮಲ ಅರಳಿಲಿದೆ ಎನ್ನುವ ಮೂಲಕ ಪರೋಕ್ಷವಾಗಿ ಈ ಬಾರಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಕೊಪ್ಪಳದ ಸ್ವಾಮೀಜಿಯೋರ್ವರು ಭವಿಷ್ಯ ನುಡಿದಿದ್ದಾರೆ.

 ಕೊಪ್ಪಳ ತಾಲೂಕಿನ ಟಣಕನಕಲ್ ಗ್ರಾಮದ ಕಾಲಜ್ನಾನ ಮಠದ ಶರಣಬಸವ ಸ್ವಾಮೀಜಿ ಹೀಗೆ ಚುನಾವಣೆ ಭವಿಷ್ಯ ನುಡಿದಿದ್ದು, ಸಿಎಂ ಸೋತರು ಅಚ್ಚರಿಯಿಲ್ಲ. ಅಲ್ಲದೇ ಬಿಜೆಪಿ ಗೆದ್ದರೂ ಯಡಿಯೂರಪ್ಪ ಮುಖ್ಯಮಂತ್ರಿ ಅಲ್ಲ ಎನ್ನುವ ಮೂಲಕ ಮತ್ತಷ್ಟು ಅಚ್ಚರಿ ಮೂಡಿಸಿದ್ದಾರೆ.
ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ತಮ್ಮ ತಮ್ಮ ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಳ್ಳಲಿದ್ದಾರೆ.ಆದ್ರೆ ಸಿದ್ದರಾಮಯ್ಯ ಅತಂತ್ರ ಸ್ಥಿತಿ ಎದುರಿಸಲಿದ್ದಾರೆ. ಇನ್ನು ಯಡಿಯೂರಪ್ಪ ಮುನ್ನಡೆ ಕಾಯ್ದುಕೊಂಡರು ಸ್ವಾಮೀಜಿ ಪ್ರಕಾರ ಮುಖ್ಯಮಂತ್ರಿಯಾಗೋದು ಅನುಮಾನವಂತೆ.ಯಡಿಯೂರಪ್ಪನವರ ವಯಸ್ಸು ಹಾಗೂ ಕಾನೂನು ಅದಕ್ಕೆ ತೊಡಕಾಗಲಿದೆ ಎಂದು ಸ್ವಾಮೀಜಿ ಭವಿಷ್ಯ ನುಡದಿದ್ದಾರೆ.ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಹುಬ್ಬಳ್ಳಿ ಹಾಗೂ ಹೈದ್ರಾಬಾದ್ ಕರ್ನಾಟಕ ಪ್ರಮುಖರು ಒಬ್ಬರು ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿಯಾಗಲಿದ್ದಾರೆಂದು ಶರಣಬಸವ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಇನ್ನು ಈ ಬಾರಿ ಚುನಾವಣೆಯಲ್ಲಿ ಪಕ್ಷೇತರರು ಪ್ರಮುಖ ಪಾತ್ರ ವಹಿಸಲಿದ್ದಾರಂತೆ.ಪ್ರತಿ ಬಾರಿ ಚುನಾವಣೆ ಸಮಯದಲ್ಲಿ ಶರಣಬಸವ ಸ್ವಾಮೀಜಿ ಚುನಾವಣಾ ಭವಿಷ್ಯ ನುಡಿಯುತ್ತಿದ್ದಾರೆ.ಕೆಲವು ಸಲ ಸ್ವಾಮೀಜಿ ಭವಿಷ್ಯ ನಿಜವೂ ಆಗಿದೆಯಂತೆ.ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಸ್ವಾಮೀಜಿ ಮೋದಿ ಭವಿಷ್ಯ ಅಧಿಕಾರಕ್ಕೆ ಬರಲಿದೆ ಎಂಬ ಭವಿಷ್ಯ ನುಡಿದಿದ್ರಂತೆ. ಸ್ವಾಮೀಜಿ ಭವಿಷ್ಯ ಎಷ್ಟರ ಮಟ್ಟಿಗೆ ನಿಜ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಇನ್ನೊಂದೆಡೆ ಸ್ವಾಮೀಜಿ ಚುನಾವಣೆ ಸಮಯದಲ್ಲಿ ತಮ್ಮ ಬೇಳೆ ಬೇಯಸಿಕೊಳ್ಳಲು ಭವಿಷ್ಯ ನುಡಿಯುತ್ತಿದ್ದಾರೆ ಅನ್ನೋದು ಆರೋಪವೂ ಇದೆ. ಇನ್ನು ಶರಣಬಸವ ಸ್ವಾಮೀಜಿಯೊಂದಿಗೆ ಹಲವಾರು ರಾಜಕೀಯ ನಾಯಕರ ಒಡನಾಟವೂ ಇದೆ.ಕಳೆದ ಬಾರಿ ಲೋಕಸಭಾ ಚುನಾವಣೆ ಸಮಯದಲ್ಲಿ ಶಿವಕುಮಾರ್ ಉದಾಸಿ ಸ್ವಾಮೀಜಿ ಮಠಕ್ಕೆ ಬೇಟಿ ಕೊಟ್ಟು ಭವಿಷ್ಯ ಕೇಳಿಕೊಂಡು ಹೋಗಿದ್ರಂತೆ.ಒಟ್ಟಿನಲ್ಲಿ ಈ ರಾಜಕೀಯ ಭವಿಷ್ಯ ಸಾಕಷ್ಟು ಕುತೂಹಲ ಮೂಡಿಸಿರೋದಂತು ಸತ್ಯ.