ನೀತಿ ಸಂಹಿತೆ ಇದ್ದರೂ ಅವರು ಭರ್ಜರಿ ಬಾಡೂಟ ಹಾಕ್ಸಿದ್ರು!! ಆಮೇಲೇನಾಯ್ತು? ಎಲ್ಲೋಯ್ತು ಬಾಡೂಟ?

ಅತ್ತ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಇತ್ತ ರಾಜ್ಯದ ಹಲವೆಡೆ ನೀತಿ ಸಂಹಿತೆ ಉಲ್ಲಂಘಿಸಿದ ಪ್ರಕರಣಗಳು ವರದಿಯಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಸಿಎಂ ಕಾರ್ಯಕ್ರಮವಿತ್ತು. ಇದೇ ವೇಳೆಯಲ್ಲಿ ಕೆ.ವಿ.ನಾಗರಾಜು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮವಿತ್ತು. ಈ ಹಿನ್ನೆಲೆಯಲ್ಲಿ ಭರ್ಜರಿ ಬಾಡೂಟಕ್ಕೆ ಸಿದ್ಧತೆ ನಡೆದಿತ್ತು. ಆದರೇ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಬಾಡೂಟ ವಶಪಡಿಸಿಕೊಳ್ಳಲಾಗಿದೆ. ಚಿಕ್ಕಬಳ್ಳಾಪುರದ ಕಣಜೇನಹಳ್ಳಿ ನಿವಾಸದ ಬಳಿ ಎರಡು ಸಾವಿರ ಜನರಿಗೆ ಬಾಡೂಟ ಎರ್ಪಡಿಸಲಾಗಿತ್ತು. ಆದರೇ ಧೀಡಿರ ಕೇಂದ್ರ ಚುನಾವಣಾ ಆಯೋಗ ಎಲೆಕ್ಷನ್​ ಘೋಷಣೆ ಮಾಡಿದ್ದರಿಂದ ನೀತಿ ಸಂಹಿತೆ ಜಾರಿಯಾಗಿತ್ತು.

ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಬಾಡೂಟಾ ನೀರಿನ ಬಾಟಲ್​ ಸೇರಿ ಎಲ್ಲವನ್ನು ವಶಪಡಿಸಿಕೊಂಡಿದ್ದಾರೆ. ಇದೀಗ ವಶಪಡಿಸಿಕೊಂಡಿರುವ ಬಾಡೂಟ ಹಾಗೂ ನೀರಿನ ಬಾಡೂಟವನ್ನು ಪೊಲೀಸ್ ಠಾಣೆಯಲ್ಲಿ ಸಂಗ್ರಹಿಸಿ ಇಡಲಾಗಿದ್ದು, ನ್ಯಾಯಾಲಯಕ್ಕೆ ತೆರಳಿ ಬಿಡಿಸಿಕೊಂಡು ಬರಬೇಕಿದೆ. ಇನ್ನೊಂದೆಡೆ ಭೈರತಿ ಬಸವರಾಜು ಕೂಡ ನೀತಿ ಸಂಹಿತೆ ಜಾರಿಯಾಗಿದ್ದರೂ ಉದ್ಘಾಟನೆ ಕಾರ್ಯಕ್ರಮ ನಡೆಸಿದ್ದಾರೆ.