ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭರ್ಜರಿ‌ ಮತಬೇಟೆ!! ಈ ಸಮಯದಲ್ಲಿ ಏನೇನಾಯ್ತು ಗೊತ್ತಾ?

ಐದು ದಿನಗಳ ತವರು ಜಿಲ್ಲೆಯ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈವತ್ತು ತಾವು ಸ್ಪರ್ಧಿಸುವ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ನಡೆಸಿದ್ರು. ಈ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದೇನೆ. ಮತ್ತೊಮ್ಮೆ ನನಗೆ ಶಕ್ತಿ ಕೊಡಿ ಅಂತಾ ಸಿಎಂ ಮನವಿ ಮಾಡಿದ್ರು. ನಡುವೆ ಅಮಿತ್​ ಶಾ ಆರೋಪಕ್ಕೆ ತಿರುಗೇಟು ನೀಡಿದರು. ಇನ್ನು ಸಿಎಂ ಪ್ರವಾಸ ವೇಳೆ ಅನುಮತಿ ಇಲ್ಲದ ಎರಡು ವಾಹನಗಳನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದರು. ಹಾಗಾದರೆ ಮೂರನೇ ದಿನದ ಸಿಎಂ ಸಿದ್ದರಾಮಯ್ಯನವರ ಪ್ರವಾಸ ಹೇಗಿತ್ತು?

  

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈವತ್ತು ಗುಂಡ್ಲುಪೇಟೆಯಿಂದ‌ ನೇರವಾಗಿ ಮೈಸೂರಿಗೆ ಆಗಮಿಸಿದ್ರು. ಬಲ್ಲಾಳ್ ವೃತ್ತದಲ್ಲಿರುವ ರಮ್ಯಾ ಹೋಟೆಲ್ ಗೆ ಗೆಳೆಯರ ಜೊತೆ ತೆರಳಿ ಇಡ್ಲಿ, ವಡೆ ಹಾಗು ರವೆ ದೋಸೆ ಸವಿದ್ರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ , ಚಾಮುಂಡೇಶ್ವರಿ ಕ್ಷೇತ್ರದ ಹಳ್ಳಿಗಳಿಗೆ ಭೇಟಿ ನೀಡಿದ್ದೇನೆ. ಜನರ ಜೊತೆ ಮಾತನಾಡಿದ್ದೇನೆ. ಉತ್ತಮ ವ್ಯಕ್ತಿಯನ್ನ ಆಯ್ಕೆ ಮಾಡುವಂತೆ ಮನವಿ ಮಾಡಲಿದ್ದೇನೆ. ವರುಣಾದಲ್ಲಿ ಬಿಎಸ್ ವೈ ಪುತ್ರ ವಿಜಯೇಂದ್ರ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ಚುನಾವಣೆಯಲ್ಲಿ ಯಾರಾದರು ಸ್ಪರ್ಧೆ ಮಾಡಬಹುದು. ಯಾರು ಗೆಲ್ಲಬೇಕು ಎಂಬುದನ್ನ ಜನರು ತೀರ್ಮಾನ ಮಾಡುತ್ತಾರೆ.ಯಾರು ಒಳ್ಳೆ ಕೆಲಸ ಮಾಡಿದ್ದಾರೂ ಅವರನ್ನ ವರುಣಾ ಜನತೆ ಆರಿಸುತ್ತಾರೆ ಎಂದ್ರು. ಕೇಂದ್ರ ಸಚಿವ ಅನಂತ್ ಕುಮಾರ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಅನಂತ್ ಕುಮಾರ್ ಹೆಗ್ಡೆ ಒಬ್ಬ ಮತಾಂಧ ಅವರ ಬಗ್ಗೆ ನಾನು ಮಾತನಾಡಲ್ಲ ಅಂತಾ ಗುಡುಗಿದ್ರು.

ಉಪಹಾರ ಸೇವಿಸಿ ಹೊರಟ ಸಿದ್ದರಾಮಯ್ಯ ನೇರವಾಗಿ ಮೈದನಹಳ್ಳಿಗೆ ಆಗಮಿಸಿದ್ರು. ನಂತರ ಮೇಗಳಾಪುರ, ಮಲ್ಲೇಗೌಡನಕೊಪ್ಪಲು,ಉಂಡವಾಡಿ, ಚಿಕ್ಕನಹಳ್ಳಿ, ಆನಂದೂರು , ನಾಗವಾಲ, ಗುಂಗ್ರಾಲ್ ಛತ್ರ, ರಟ್ನಹಳ್ಳಿ, ನಾಗವಾಲ, ಇಲವಾಲ ಸೇರಿದಂತೆ ಹಲವು ಕಡೆ ರೋಡ್ ಶೋ ನಡೆಸಿ ಅಬ್ಬರದ ಪ್ರಚಾರ ನಡೆಸಿದ್ರು. ಇದೇ ಸಂದರ್ಭ ಸಿಎಂ ಹಿಂಬಾಲಿಸಿ ಬಂದ ಎರಡು ವಾಹನಗಳಿಗೆ ಅನುಮತಿ ಪಡೆದಿರಲಿಲ್ಲವೆಂದು ವಶಕ್ಕೆ ಪಡೆದರು.

ನಮ್ಮ ರಾಜ್ಯ ಸರ್ಕಾರದಲ್ಲಿ ಯಾವುದೇ ಭ್ರಷ್ಟಾಚಾರ ಹಾಗೂ ಹಗರಣ ನಡೆದಿಲ್ಲ.ಬಿಜೆಪಿಯವರು ಅಧಿಕಾರದಲ್ಲಿ ಇದ್ದಾಗ ಭ್ರಷ್ಟಾಚಾರ ಮಾಡಿದ ಕಾರಣ ಜೈಲಿಗೆ ಹೋಗಿದ್ರು. ಜೈಲಿಗೆ ಬೀಗತನ ಮಾಡೋಕೋ ಹೋಗಿದ್ರಾ? ಅಂತ ವ್ಯಂಗ್ಯವಾಡಿದ ಸಿಎಂ. ಅಮಿತ್ ಶಾ ಹಾಗೂ ನರೇಂದ್ರ ಮೋದಿಗೆ ನಮ್ಮನ್ನ ಟೀಕೆ ಮಾಡೋ ನೈತಿಕ ಹಕ್ಕಿಲ್ಲ. ಕಾನೂನು ಎಲ್ಲರಿಗೂ ಒಂದೇ ಈ ನೆಲದ ಕಾನೂನನ್ನ ಎಲ್ಲರೂ ಗೌರವಿಸಬೇಕು. ಬಿಜೆಪಿಯವರು ಸತ್ತವರ ಮನೆಯಲ್ಲಿ , ಹೆಣ ಇಟ್ಟಿಕೊಂಡು ರಾಜಕಾರಣ ಮಾಡ್ತಿದ್ದಾರೆ. ನೀತಿ ಸಂಹಿತೆ ಜಾರಿಯಾದ ಬಳಿಕ ಅಮೀತ್ ಶಾ ರಾಜು ಮನೆಗೆ ಹೋಗ್ತಿದ್ದಾರೆ ಎಂದ ಅವರು ಪ್ರತಾಪಸಿಂಹ ತಾಕತ್ತಿದ್ದರೆ ಅಸೆಂಬ್ಲಿ ಎಲೆಕ್ಷನ್ ಪೇಸ್ ಮಾಡ್ಲೀ ಅಂತ ಸವಾಲ್ ಹಾಕಿದ್ರು.

 

ಇನ್ನೂ, ದಿನವಿಡೀ ರೋಡ್ ಶೋ, ಸಭೆ, ಸಮಾರಂಭ, ಭಾಷಣಗಳಲ್ಲಿ ನಿರತರಾದ ಸಿಎಂ ಅಬ್ಬರದ ಪ್ರಚಾರ ನಡೆಸಿ ಕ್ಷೇತ್ರದ ಮತದಾರರ ಮನ‌ಮುಟ್ಟಿದ್ರು.