ಚುನಾವಣೆ ಪ್ರಚಾರದ ವೇಳೆ ಶವಯಾತ್ರೆಗೆ ಹೆಗಲು ಕೊಟ್ಟ ದರ್ಶನ- ಪುಟ್ಟಣ್ಣಯ್ಯ ಹಾದಿಯಲ್ಲೇ ಸಾಗಿ ಭರವಸೆ ಮೂಡಿಸಿದ ಪುತ್ರ!

ಕರ್ನಾಟಕದಲ್ಲಿ ಯಾವುದೇ ರೈತ ಪರ ಹೋರಾಟಗಳಿರಲಿ ಅದರಲ್ಲಿ ರೈತ ಮುಖಂಡ ಪುಟ್ಟಣಯ್ಯ ಅವರ ನಾಯಕತ್ವ ಇದ್ದೇ ಇರುತಿತ್ತು. ಹೀಗೆ ತಮ್ಮ ರೈತಪರ ಹೋರಾಟಗಳಿಂದಲೇ ರಾಜ್ಯದ ರೈತರ ಆಶಾಕಿರಣವಾಗಿದ್ದವರು ಪುಟ್ಟಣ್ಣಯ್ಯ. ಅವರ ಮಾನವೀಯತೆಗೆ ಮಿಡಿಯುವ ಮನಸ್ಸು ಇದೀಗ ಮಗ ದರ್ಶನಗೂ ಬಂದಿದೆ. ಹೌದು ಚುನಾವಣೆ ಪ್ರಚಾರಕ್ಕೆ ತೆರಳಿದ ವೇಳೆ ಶವಯಾತ್ರೆ ಕಂಡ ದರ್ಶನ ಚಟ್ಟಕ್ಕೆ ಹೆಗಲು ಕೊಟ್ಟು ಮಾನವೀಯತೆ ಮೆರೆದು ತಂದೆಯ ಆದರ್ಶವನ್ನು ಉಳಿಸುವ ಭರವಸೆ ನೀಡಿದ್ದಾರೆ.


ಹೌದು ದರ್ಶನ ಪುಟ್ಟಣ್ಣಯ್ಯ ತಂದೆ ರೈತ ಹೋರಾಟಗಾರ ಪುಟ್ಟಣ್ಣಯ್ಯ ಉತ್ತರಾಧಿಕಾರಿಯಾಗಿ ಚುನಾವಣೆ ಕಣದಲ್ಲಿದ್ದಾರೆ. ಹೀಗೆ ಚುನಾವಣೆ ಪ್ರಚಾರದಲ್ಲಿರುವ ದರ್ಶನ ಪುಟ್ಟಣ್ಣಯ್ಯ ಪ್ರಚಾರಕ್ಕೆ ಹೋದಾಗ ನಡೆಯುತ್ತಿದ್ದ ಶವಯಾತ್ರೆಯನ್ನು ಕಂಡು ದುಃಖತಪ್ತನಾಗಿ ಅವರ ಶವಯಾತ್ರೆಯಲ್ಲಿ ಪಾಲ್ಗೊಂಡು ಶವದ ಚಟ್ಟಕ್ಕೆ ಹೆಗಲು ಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ಪಾಂಡವಪುರ ತಾಲೂಕಿನ ಚುನಾವಣೆ ಪ್ರಚಾರದ ವೇಳೆ ಈ ಘಟನೆ ನಡೆದಿದೆ. ಪಾಂಡವಪುರ ತಾಲೂಕಿನ ಹರಳಹಳ್ಳಿಯ ಕೃಷ್ಣೆ ಗೌಡ ಎಂಬುವವರು ನಿಧನರಾಗಿದ್ದರು. ಅವರ ಶವಯಾತ್ರೆ ವೇಳೆ ಸ್ಥಳಕ್ಕೆ ಬಂದಿದ್ದ ದರ್ಶನ ದಲಿತ ಕೃಷ್ಣೇಗೌಡ್​​ರ ಶವಯಾತ್ರೆಗೆ ಹೆಗಲು ಕೊಟ್ಟಿದ್ದು, ಸಾರ್ವಜನಿಕ ವಲಯದಿಂದ ಶ್ಲಾಘನೆಗೆ ಕಾರಣವಾಗಿದೆ. ಪುಟ್ಟಣ್ಣಯ್ಯ ಕೂಡ ಇದೆ ರೀತಿ ಶವಯಾತ್ರೆಯಲ್ಲಿ ಜಾತಿ-ಮತ ಎನ್ನದೇ ಹೆಗಲು ಕೊಡುತ್ತಿದ್ದರು ಎನ್ನಲಾಗಿದೆ. ಇದೀಗ ಈ ಪೋಟೋ ಸಖತ್ ವೈರಲ್​ ಆಗಿದ್ದು, ಸಾರ್ವಜನಿಕರು ದರ್ಶನ ಮಾನವೀಯತೆಯನ್ನು ಶ್ಲಾಘಿಸಿದ್ದಾರೆ.