ಸಿಎಂ ಸಿದ್ದು ಸರ್ಕಾರಕ್ಕೆ ಎಲೆಕ್ಷನ್​ ಆಯೋಗದ ಸಖತ್ ಶಾಕ್​- ಸಂಜೆ ಅಧಿಕಾರಿಗಳಿಗೆ ಕಾದಿದೆ ಎತ್ತಂಗಡಿ ಭಾಗ್ಯ!!

ರಾಜ್ಯದಲ್ಲಿ ಚುನಾವಣೆಗೆ ಮುಹೂರ್ತ ಫಿಕ್ಸ್​ ಆಗಿದೆ. ರಾಜಕಾರಣಿಗಳು- ಟಿಕೇಟ್ ಆಕಾಂಕ್ಷಿಗಳು ಅದಾಗಲೇ ತಮ್ಮ ತಮ್ಮ ಕ್ಷೇತ್ರಗಳತ್ತ ಮುಖ ಮಾಡಿದ್ದಾರೆ.

ad

ಆದರೇ ಎಲೆಕ್ಷನ್​​ ಗೆ ಈಗಾಗಲೇ ಸಿದ್ಧವಾಗಿದ್ದ ಕಾಂಗ್ರೆಸ್​​​ಗೆ ಎಲೆಕ್ಷನ್​ ಕಮಿಷನ್​ ಸಖತ್ ಶಾಕ್ ನೀಡಿದೆ. ಹೌದು ಆಯಕಟ್ಟಿನ ಜಾಗಗಳಿಗೆ ಅಗತ್ಯ ಅಧಿಕಾರಿಗಳನ್ನು ವರ್ಗಾಯಿಸಿಕೊಂಡಿದ್ದ ಸರ್ಕಾರಕ್ಕೆ ಎಲೆಕ್ಷನ್ ಕಮೀಷನ್​ ಎತ್ತಂಗಡಿ ಭಾಗ್ಯ ಕಲ್ಪಿಸಿದೆ. ಹೌದು ರಾಜ್ಯದಲ್ಲಿ ಸಂಜೆ ವೇಳೆಗೆ 136 ಅಧಿಕಾರಿಗಳ ಎತ್ತಂಗಡಿಯಾಗುವ ಮುನ್ಸೂಚನೆ ದೊರೆತಿದೆ. ಹೌದು ಈಗಾಗಲೇ ಎಲೆಕ್ಷನ್​​ ಸಿದ್ಧತೆಯಲ್ಲಿ ತೊಡಗಿರುವ ರಾಜ್ಯ ಚುನಾವಣಾ ಆಯೋಗ 136 ಅಧಿಕಾರಿಗಳ ಎತ್ತಂಗಡಿಗೆ ಮುಹೂರ್ತ ಫಿಕ್ಸ್​ ಮಾಡಿದೆ. ಇಂದು ಸಂಜೆ 4 ಗಂಟೆಗೆ ರಾಜ್ಯ ಮುಖ್ಯಚುನಾವಣಾಧಿಕಾರಿ ಸಂಜೀವ್ ಕುಮಾರ್​ ಸರ್ಕಾರಕ್ಕೆ ಸೂಚನೆ ರವಾನಿಸಿದ್ದಾರೆ. 27 ಐಎಎಸ್​​ 13 ಐಪಿಎಸ್​​ ಸೇರಿದಂತೆ 136 ಅಧಿಕಾರಿಗಳ ಎತ್ತಂಗಡಿ ಪಟ್ಟಿ ಸಿದ್ಧವಾಗಿದೆ. ಸಿದ್ರಾಮಯ್ಯ ಹಾಗೂ ಅವರ ಸಚಿವ ಸಂಪುಟದ ಸಚಿವರುಗಳು ಚುನಾವಣೆಯಲ್ಲಿ ಅನುಕೂಲ ಮಾಡಿಕೊಳ್ಳಲು ತಮಗೆ ಆಪ್ತರಾಗಿರುವ ಅಧಿಕಾರಿಗಳನ್ನು ನೇಮಿಸಿಕೊಂಡಿದ್ದರು.

ರಾಜ್ಯದ ಡಿಜಿಪಿ ನೀಲಮಣಿರಾಜು , ಬೆಂಗಳೂರು ಡಿಸಿ ದಯಾನಂದ, ಬೆಂಗಳೂರು ಗ್ರಾಮಾಂತರ ಡಿಸಿ ಮೈಸೂರು ಡಿಸಿ , ಮಂಗಳೂರು ಡಿಸಿ, ಪಶ್ಚಿಮವಲಯ ಐಜಿಪಿ, ಗುಲ್ಬರ್ಗಾ ಐಜಿಪಿ ಮೈಸೂರು ಎಸ್​​ಪಿ , ಧಾರವಾಡ ಡಿಸಿ ಸೇರಿದಂತೆ ಪ್ರಮುಖ ಐಎಎಸ್​​, ಐಪಿಎಸ್​ ಜೊತೆಗೆ ಎಸಿ, ತಹಶೀಲ್ದಾರಗಳ ವರ್ಗಾವಣೆ ಪಟ್ಟಿ ಸಿದ್ದವಾಗಿದೆ. ಇದರ ಜೊತೆ ರಾಜ್ಯದ ವಿವಿಧೆಡೆ ಕರ್ತವ್ಯ ನಿರ್ವಹಿಸುತ್ತಿರುವ 810 ಪೊಲೀಸ್ ಇನ್ಸಪೆಕ್ಟರ್​ಗಳ ಎತ್ತಂಗಡಿ ಪಟ್ಟಿಯೂ ಸಿದ್ಧವಾಗಿದೆ. ಒಟ್ಟಾರೆ ಸತತ 3 ದಿನಗಳ ಕಾಲ ವರ್ಗಾವಣೆ ಪರ್ವ ನಡೆಯಲಿದೆ. ಕಾಂಗ್ರೆಸ್ ತನಗೆ ಅನುಕೂಲ ಮಾಡಿಕೊಳ್ಳಲು ಹಾಕಿಕೊಂಡಿದ್ದ ಎಲ್ಲ ಅಧಿಕಾರಿಗಳಿಗೂ ಚುನಾವಣಾ ಆಯೋಗ ಎತ್ತಂಗಡಿ ಭಾಗ್ಯ ಕಲ್ಪಿಸಲಿದೆ. ಈ ನಡುವೆ ಕಳೆದ 5 ವರ್ಷಗಳಿಂದ ಯಾವುದೇ ಹುದ್ದೆ ನೀಡದೇ ಸೇಡು ತೀರಿಸಿಕೊಂಡಿದ್ದ ಸಿದ್ದರಾಮಯ್ಯನವರ ವಿರೋಧಿ ಅಧಿಕಾರಿಗಳಿಗೆ ಲಭ್ಯವಾಗಲಿದೆ. ಅಲ್ಲದೇ ಕೆಂಪಯ್ಯ ಪೋಸ್ಟಿಂಗ್​ ಕೊಡದೇ ಇದ್ದ ಅಧಿಕಾರಿಗಳಿಗೆ ಒಳ್ಳೆಯ ಪೋಸ್ಟಿಂಗ್​ ಲಭಿಸಲಿದೆ. ಇದು ಸಿದ್ದು ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದ ಅಧಿಕಾರಿಗಳಿಗೆ ಒಳ್ಳೆಯ ಅವಕಾಶ ಸಿಕ್ಕಂತಾಗಲಿದೆ.