ಕಾಫಿನಾಡಿನಲ್ಲಿ ಹಿಂದುತ್ವದ ಪರೀಕ್ಷೆಗಿಳಿತಾರಾ ಮುತಾಲಿಕ್?!

2018 ರ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು ಚಿಕ್ಕಮಗಳೂರಿನಲ್ಲಿ ಚುನಾವಣೆ ಕಾವು ಜೋರಾಗಿದೆ.

ಬಿಜೆಪಿ ಭದ್ರಕೋಟೆ ಅಂತಲೇ ಬಿಂಬಿತವಾಗಿರುವ ಶಾರದಾಂಬೆಯ ನೆಲೆಬೀಡು ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಶ್ರೀರಾಮ ಸೇನೆ ಸಂಸ್ಥಾಪಕ‌ ಪ್ರಮೋದ್ ಮುತಾಲಿಕ್ ಚಿಂತನೆ ನಡೆಸಿದ್ದು ಬಿಜೆಪಿ ಗೆ ದೊಡ್ಡ ತಲೆನೋವು ಎದುರಾಗಿದೆ. ಜಿಲ್ಲೆಯಲ್ಲಿ ಬಿಜೆಪಿ ಭದ್ರಕೋಟೆ ಅಂತಾ ಕರೆಸಿಕೊಳ್ಳೋ ಶೃಂಗೇರಿ‌ ವಿಧಾನಸಭಾ ಕ್ಷೇತ್ರದಲ್ಲಿ ಪ್ರಮೋದ್ ಮುತಾಲಿಕ್ ಈ ಭಾರಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಚಿಂತನೆ ನಡೆಸಿದ್ದಾರೆ. ಇದು ಹಾಲಿ ಬಿಜೆಪಿ ಶಾಸಕ ಡಿ.ಎನ್.ಜೀವರಾಜ್ ಮುಳುವಾಗುತ್ತಾ ಅನ್ನೋದು ಈಗ ದೊಡ್ಡ ಪ್ರಶ್ನೆಯಾಗಿದೆ.

ಇನ್ನು ಹಿಂದೂತ್ವದ ಹೆಸರಿನಲ್ಲಿ‌ ಚುನಾವಣೆ ಎದುರಿಸುತ್ತಿರುವ ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ. ಭಜರಂಗದಳ, ಶ್ರೀರಾಮ‌ ಸೇನೆ ಸೇರಿದಂತೆ ಹಿಂದೂ ಸಂಘಟನೆಗಳು ಈ ಕ್ಷೇತ್ರದಲ್ಲಿ ಬಲವಾಗಿದ್ದು ಪ್ರಮೋದ್ ಮುತಾಲಿಕ್ ಈ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ರೆ ಹೆಚ್ಚಾಗಿ ಹಿಂದೂ ಮತ ಕೀಳೋ ಸಾಧ್ಯತೆ ಇದೆ. ಹೀಗಾಗಿ ಹಾಲಿ ಶಾಸಕ ಡಿ.ಎನ್.ಜೀವರಾಜ್ ಇದು ದೊಡ್ಡ ಪೆಟ್ಟು ಬೀಳುವ ಸಾಧ್ಯತೆ ಇದೆ. ಇನ್ನು ಈ ಕ್ಷೇತ್ರದಲ್ಲಿ ಬಿಜೆಪಿಯಿಂದ ಡಿ.ಎನ್.ಜೀವರಾಜ್ ಮೂರು ಭಾರಿ ಗೆದ್ದು ಶಾಸಕರಾಗಿದ್ದಾರೆ.