ಚುನಾವಣಾ ಕುರುಕ್ಷೇತ್ರ 2018 ಕಾರವಾರ(ಉತ್ತರ ಕನ್ನಡ ಜಿಲ್ಲೆ)

ಕಾರವಾರ ವಿಧಾನಸಭಾ ಕ್ಷೇತ್ರ

ಈಗ ನಾವು ಹೇಳ್ತಾ ಇರೋದು ಕಾರವಾರ ವಿಧಾನಸಭಾ ಕ್ಷೇತ್ರದ ಬಗ್ಗೆ. ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದಿರೋ ಸತೀಶ್ ಸೈಲ್ ಇಲ್ಲಿ ಶಾಸಕರಾಗಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಏನೇನು ಬದಲಾವಣೆಗಳಾಗತ್ತೆ ಕ್ಷೇತ್ರ ಈಗ ಹೇಗಿದೆ ? ಮಹಾಸಮರಕ್ಕೆ ಹೇಗೆ ಸಜ್ಜಾಗಿದೆ ಅನ್ನೋದನ್ನು ನೋಡೋಣ.

 

 

ಕಾರವಾರ ವಿಧಾನಸಭಾ ಕ್ಷೇತ್ರ. ಇದು ಕರಾವಳಿ, ಗುಡ್ಡಗಾಡು, ಕೃಷಿ ಭೂಮಿಯನ್ನ ಹೊಂದಿರೋ ಉತ್ತರ ಕನ್ನಡ ಜಿಲ್ಲೆಯಲ್ಲಿ ಬರುವ ಕಾರವಾರ ಹಾಗೂ ಅಂಕೋಲಾ ಎರಡು ತಾಲೂಕು ಸೇರಿರೋ ವಿಧಾನಸಭಾ ಕ್ಷೇತ್ರ.ಠಾಗೋರ್ ಬೀಚ್, ನಾಗರಮಡಿ ಫಾಲ್ಸ್, ವಿಭೂತಿ ಫಾಲ್ಸ್, ಅಣಸಿಫಾಲ್ಸ್ ನಂತಹ ಪ್ರವಾಸಿ ತಾಣಗಳು ಇರೋ ಕ್ಷೇತ್ರ ಇದು. ರಾಜಕೀಯವಾಗಿ ಈ ಕ್ಷೇತ್ರವನ್ನ ಸಾಕಷ್ಟು ನಾಯಕರು ಆಳಿ ಹೋಗಿದ್ದಾರೆ. ರಾಜಕೀಯಕ್ಕಾಗಿ ಅನೇಕರ ನೆತ್ತರು ಹರಿದಿರೋದು ಇದೆ ಕಾರವಾರದ ಕಡಲನಗರಿಯಲ್ಲಿ. ಇಲ್ಲಿ ಚುನಾವಣೆ ಅಖಾಡಕ್ಕೆ ಧುಮುಕಬೇಕೆಂದ್ರೆ ಅಷ್ಟೇ ಎದೆಗಾರಿಕೆ ಹಾಗೂ ಜನ ಬೆಂಬಲ ಇರಬೇಕು. ಇಲ್ಲಿ ಕ್ಷತ್ರೀಯ ಕೋಮಾರಪಂತ, ನಾಮಧಾರಿ (ಈಡಿಗ) ಹಾಲಕ್ಕಿ, ಮೀನುಗಾರ, ಭಂಡಾರಿ, ಅಲ್ಪ ಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪ್ರಸ್ತುತ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಭೇರಿ ಬಾರಿಸಿದ್ದ ಸತೀಶ್ ಸೈಲ್ ಇಲ್ಲಿನ ಶಾಸಕರು. ಹಾಗಿದ್ರೆ ಈ ಬಾರಿ ಇಲ್ಲಿನ ರಣಕಣ ಹೇಗಿದೆ ರಜಾಕೀಯ ವಿಚಾರಗಳನ್ನು ಹೇಳ್ತೀವಿ ಆದ್ರೆ ಅದಕ್ಕೂ ಮೊದಲು 2013ರ ಮತಬರಹ ನೋಡೋಣ

2013ರ ಮತಬರಹ

ಇದು 2013ರ ಮತಬರಹ ಹಾಲಿ ಶಾಸಕ  ಸತೀಶ್ ಸೈಲ್ ಪಕ್ಷೇತರರಾಗಿ ಕಣಕ್ಕಿಳಿದು 80727  ಮತಗಳನ್ನು ಪಡದು ಶಾಸಕರಾದ್ರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಆನಂದ ಅಸ್ನೋಟಿಕರ್ 44496 ಮತ ಪಡೆದ್ರೆ  ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಮಾನಂದ ನಾಯಕ 12493 ಮತ ಪಡೆದ್ರು. ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಸಂಜು ನಾಯಕ ಕೇವಲ 1522 ಪಡೆಯೋ ಮೂಲಕ ನಾಲ್ಕನೇ ಸ್ಥಾನಕ್ಕೆ ಕುಸಿದ್ರು

 

 

v/o2: ಉತ್ತರಕನ್ನಡ ಜಿಲ್ಲೆಯ ಕರ್ನಾಟಕದ ಕಾಶ್ಮೀರ ಅತಂತಾನೇ ಕರೆಯೋ ಕಾರವಾರ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿಯೇನೋ ಪಕ್ಷೇತರರಾಗಿ ಕಣಕ್ಕಿಳಿದಿದ್ದ ಸತೀಶ ಸೈಲ್ ಗೆದ್ದು ಶಾಸಕರಾದ್ರು. ಆದ್ರೆ ಈಗ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸಲಾರಂಭಿಸಿದೆ. ಕ್ಷೇತದಲ್ಲಿ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಜೋರಾಗತ್ತಾ ಇದ್ದು ಈ ಬಾರಿ ಹಾಲಿ ಶಾಸಕ ಮತ್ತು ಮಾಜಿ ಸಚಿವರನ್ನು ಸೋಲಿಸಲು ಬಿಜೆಪಿಯ ಸಂಭವನೀಯ ಮಹಿಳಾ ಅಭ್ಯರ್ಥಿ ಬಿಜೆಪಿ ರಾಜ್ಯ ಮಹಿಳಾ ಮೋರ್ಛಾದ ಸದಸ್ಯೆಯಾಗಿರೋ ರೂಪಾಲಿ ನಾಯ್ಕ್ ರೆಡಿಯಾಗಿದ್ದಾರೆ. ಇನ್ನು ಆನಂದ್ ಅಸ್ನೋಟಿಕರ್ ಬಿಜೆಪಿ ತೊರೆದು ಜೆಡಿಎಸ್ ಸೇರಿದ್ದಾಗಿದೆ. ಪಕ್ಷೇತರ ಶಾಸಕ ಸತೀಶ್ ಸೈಲ್ ಕೂಡಾ ಈ ಬಾರಿ ಕಾಂಗ್ರೆಸ್ ಸೇರಿ ಕಣಕ್ಕಿಳಿಯೋದು ಗ್ಯಾರಂಟಿ ಅಂತಾ ಹೇಳಲಾಗ್ತಿದೆ. ಹಾಗಾಗಿ ಈ ಕ್ಷೇತ್ರದಲ್ಲಿ ಬದಲಾವಣೆ ಹಾಗೂ ಒಂದಷ್ಟು ಬೆಳವಣಿಗೆಗಳಾಗೋದ್ರಲ್ಲಿ ಅನುಮಾನವಿಲ್ಲ. ಹಾಗಿದ್ರೆ ಕಾರವಾರ ಕ್ಷೇತ್ರದಲ್ಲಿ ಯಾವ್ಯಾವ ಪಕ್ಷದಿಂದ ಯಾರ್ಯಾರು ಕಣಕ್ಕಿಳಿತಾರೆ ನೋಡೋಣ

 

ಕಾಂಗ್ರೆಸ್ ಅಭ್ಯರ್ಥಿ

ಪಕ್ಷೇತರ ಶಾಸಕರಾಗಿರೋ ಸತೀಶ್ ಸೈಲ್ ಅವರಿಗೆ ಈ ಬಾರಿ ಕಾಂಗ್ರೆಸ್ ಟಿಕೇಟ್ ಖಚಿತ ಅಂತಾ ಹೇಳಾಗತ್ತಾ ಇದೆ. ಶಾಸಕರಾದ ನಂತ್ರ ಸೈಲ್ ಅವ್ರು ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡಿದ್ದಾರೆ. ಆದ್ರೆ ಕಾಂಗ್ರೆಸ್ ನಲ್ಲಿ ಗುರುತಿಸಿಕೊಂಡ ಬಳಿಕ ಸ್ಥಳೀಯ ಮೂಲ ಕಾಂಗ್ರೆಸ್ಸಿಗರನ್ನ ದೂರವಿಟ್ಟಿದ್ದಾರೆ ಅನ್ನೋ ದೊಡ್ಡಆರೋಪ ಮೂಲ ಕಾಂಗ್ರೆಸಿರದ್ದಾಗಿದೆ. ಹೀಗಾಗಿ ಒಳಗೊಳಗೆ ಕಾಂಗ್ರೆಸ್ ನ ಒಂದಿಷ್ಟು ಮಂದಿ ಸತೀಶ್ ಸೈಲ್ ಅವರಿಗೆ ಈ ಬಾರಿ ಕಾಂಗ್ರೆಸ್ ಟಿಕೇಟ್ ತಪ್ಪಿಸಬೇಕು ಅಂತಾ ತೆರೆಮರೆಯಲ್ಲಿ ಕಸರತ್ತು ಮಾಡ್ತಿದ್ದಾರೆ. ಈ ವಿಚಾರ ಶಾಸಕ ಸೈಲ್ ಕಿವಿಗೂ ತಲುಪಿದೆ. ಆದ್ರೆ ಇತ್ತಿಚೇಗಷ್ಟೆ ಕಾರವಾರಕ್ಕೆ ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸತೀಶ್ ಸೈಲ್ ಅವರಿಗೆ ಕಾಂಗ್ರೆಸ್ ಟಿಕೇಟ್ ಅಂತಾ ಘೋಷಣೆ ಕೂಡ ಮಾಡಿದ್ದಾರೆ. ಹೀಗಾಗಿ ತೆರೆಮರೆಯಲ್ಲಿ ನಡೆಸುತ್ತಿರುವ ಆಟಕ್ಕೆ ಸತೀಸ್ ಸೈಲ್ ತಲೆ ಕೆಡಿಸಿಕೊಂಡಿರುವ ಹಾಗೆ ಕಾಣತ್ತಿಲ್ಲ. ಆದ್ರೆ ಕಾರವಾರ-ಅಂಕೋಲಾ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳು ಇನ್ನೂ ಜೀವಂತವಾಗಿದೆ. ಕುಡಿಯುವ ನೀರಿನ ಸಮಸ್ಯೆ, ರಸ್ತೆ, ಮೂಲಭೂತ ಸೌಕರ್ಯಗಳ ಕೊರತೆ ತಾಂಡವಾಡತ್ತಾ ಇದೆ. ಇದು ಕಾಂಗ್ರೆಸ್ ನಿಂದ ಕಣಕ್ಕಿಳಿಯೋದಕ್ಕೆ ಮುಂದಾಗಿರೋ ಶಾಸಕ ಸತೀಶ್ ಸೈಲ್ ಅವ್ರಿಗೆ ಈ ಬಾರಿ ಹಿನ್ನಡೆಯನ್ನುಂಟು ಮಾಡೋದ್ರಲ್ಲಿ ಎರಡು ಮಾತಿಲ್ಲ.

 

ಕಮಲ ಮುಡಿಯೋರ್ಯಾರು

ರೂಪಾಲಿ ನಾಯ್ಕ್,ರಾಜ್ಯ ಮಹಿಳಾ ಮೋರ್ಚಾ ಸದಸ್ಯೆ

ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿಯೋದಕ್ಕೆ ಪ್ರಬಲ ಅಭ್ಯರ್ಥಿಯೊಬ್ಬರು ರೆಡಿಯಾಗಿದ್ದಾರೆ ಅವ್ರೇ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಸದಸ್ಯೆ ರೂಪಾಲಿ ನಾಯ್ಕ. ರೂಪಾಲಿ ನಾಯ್ಕ ಕಾರವಾರ ಕ್ಷೇತ್ರದಲ್ಲಿ ಬಿಜೆಪಿಯ ಹಿರಿ, ಕಿರಿಯ ಮುಖಂಡರ ಜೊತೆಗೂಡಿ ಸ್ನೇಹಜೀವಿಯಾಗಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಸಂಘಟಿಸ್ತಿದ್ದಾರೆ  ಇವ್ರಿಗೆ ಪಕ್ಷದಲ್ಲಿರುವ ಪ್ರತಿಯೊಬ್ಬರೂ ಕೈ ಜೋಡಿಸಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಬಿಜೆಪಿ ಇದೀಗ ಎತ್ತರಕ್ಕೆ ಬೆಳದು ನಿಂತಿದೆ. ಕಷ್ಟ ಅಂತಾ ಯಾರೇ ಬಂದ್ರೂ ರೂಪಾಲಿ ನಾಯ್ಕ್ ಬಂದವರನ್ನು ಬರಿಗೈಲಿ ಕಳುಹಿಸಿದ್ದೇ ಇಲ್ಲ. ಸೀರ್ಬಡ್ ನೌಕಾನೆಲೆಗಾಗಿ ಭೂಮಿಯನ್ನ ಕಳೆದುಕೊಂಡ ನೂರಾರು ಕುಟುಂಬಕ್ಕೆ ಇದುವರೆಗೂ ಸರಕಾರ ಯೋಗ್ಯ ಪರಿಹಾರ ನೀಡಿರಲ್ಲಿಲ್ಲ. ಈ ಬಗ್ಗೆ ಸಾಕಷ್ಟು ಹೋರಾಟಗಳು ನಡೆದುಹೋಗಿದೆ ಆದ್ರೆ ಫಲಕಾರಿಯಾಗಿಲ್ಲ. ಇತ್ತೀಚೆಗಷ್ಟೆ ರೂಪಾಲಿ ನಾಯ್ಕ ಸೀರ್ಬಡ್ ಹೋರಾಟಗಾರರೊಂದಿ ಕೇಂದ್ರ ಸಚಿವ ಅನಂತಕುಮಾರ ಮುಂದಾಳ್ವತದಲ್ಲಿ ಕೇಂದ್ರ ರಕ್ಷಣಾ ಸಚಿವರನ್ನ ಭೇಟೆ ಮಾಡುವ ಮೂಲಕ ಪರಿಹಾರ ಒದಗಿಸುವ ಮಹತ್ವದ ಕಾರ್ಯಕ್ಕೆ ಮುಂದಾಗಿರೋದು ಸಾವಿರಾರು ನಿರಾಶ್ರಿತ ಕುಟುಂಬಕ್ಕೆ ಖುಷಿತಂದಿದೆ. ಹೀಗಾಗಿ ಎಲ್ಲರೂ ಅವರನ್ನ ಬೆಂಬಲಿಸ್ತಾ ಇದ್ದಾರೆ. ಈ ಗಾಗಲೆ ಬಿಜೆಪಿ ಸಾಕಷ್ಟು ಸಮೀಕ್ಷೆಗಳನ್ನ ಮಾಡಿದ್ದು ಸಮೀಕ್ಷೇಗಳಲ್ಲಿ ರೂಪಾಲಿ ನಾಯ್ಕ ಹೆಸರು ಮುಂಚೂಣಿಯಲ್ಲಿದೆ. ಅವರಿಗೆ ಟಿಕೇಟ್ ನೀಡಿದ್ರೆ ಕಾರವಾರ ಕ್ಷೇತ್ರವನ್ನ ಬಿಜೆಪಿ ಗೆಲ್ಲಬಹುದು ಅನ್ನೊ ವಿಚಾರ ಪಕ್ಷದ ಹೈಕಮಾಂಡಗೂ ಗೊತ್ತಾಗಿದೆ. ಹಾಗಾಗಿ  ರೂಪಾಲಿ ನಾಯ್ಕ ಅವರಿಗೆ ಬಿಜೆಪಿ ಟಿಕೇಟ್ ನೀಡೋ ಮೂಲಕ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳನ್ನು ಸೋಲಿಸಲು ಬಿಜೆಪಿ ಪ್ಲಾನ್ ರೂಪಿಸಿದೆ. ಮೊನ್ನೆ ಮೊನ್ನೆಯಷ್ಟೆ ಬಿಜೆಪಿ ರಾಜ್ಯದ ನಲವತ್ತು ವಿಧಾನಸಭಾ ಕ್ಷೇತ್ರದ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ದಪಡಿಸಿಕೊಂಡಿದ್ದು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದಿಂದ ರೂಪಾಲಿ ನಾಯ್ಕ ಆ ಸಂಭವನೀಯ ಪಟ್ಟಿಯಲ್ಲಿದ್ದಾರೆ. ಉತ್ತರಕನ್ನಡ ಜಿಲ್ಲೆಗೆ ಮೊದಲಿನಿಂದಲೂ ಒಂದು ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿಯೊಬ್ಬರಿಗೆ ಟಿಕೇಟ್ ನೀಡಬೇಕು ಎನ್ನುವುದು ಬಿಜೆಪಿ ಹೇಳಿಕೊಂಡು ಬಂದಿದ್ದು ಅದೀಗ ಸತ್ಯವಾಗ್ತಿದೆ ಅಂತಾರೆ ಇಲ್ಲಿನವರು. ಇನ್ನು ಜಿಲ್ಲೆಯಲ್ಲಿ ಇವ್ರನ್ನು ಬಿಟ್ರೆ ಮತ್ಯಾರು ಮಹಿಳಾ ಟಿಕೆಟ್ ಆಕಾಂಕ್ಷಿಗಳಿಲ್ಲ. ಇನ್ನುಳಿದಂತೆ ಗಣಪತಿ ಉಳ್ವೇಕರ್, ಮಾಜಿ ಶಾಸಕ ಗಂಗಾಧರ ಭಟ್, ಜಗದೀಶ ನಾಯಕ, ನಾಗರಾಜ ನಾವೇಕರ್,ಹೀಗೇ ಹಲವಾರು ಮಂದಿ ಟಿಕೇಟ್ ರೇಸ್ ನಲ್ಲಿದ್ದಾರೆ. ಆದ್ರೆ ಕಮಲ ನಾಯಕರು ರೂಪಾಲಿ ಅವ್ರಿಗೆ ಟಿಕೆಟ್ ಕೊಡೋದು ಪಕ್ಕಾ.

ತೆನೆ ಹೊರೋದ್ಯಾರು

ಆನಂದ್ ಅಸ್ನೋಟಿಕರ್,ಮಾಜಿ ಸಚಿವರು

2008ರ ಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾಗಿ ಸಚಿವರಾದ ಆನಂದ ಅಸ್ನೋಟಿಕರ್ 2013ರ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸತೀಶ್ ಸೈಲ್ ವಿರುದ್ದ ಸೋತ್ರು. ಬಳಿಕ ಕ್ಷೇತ್ರದಿಂದಲ್ಲೆ ನಾಪತ್ತೆಯಾಗಿದ್ದರು. ಇದು ಕ್ಷೇತ್ರದ ಜನರಿಗೆ ಬಾರಿ ನೋವಾಗಿದೆ. ಆನಂದ್ ಕೇವಲ ಅಧಿಕಾರಕ್ಕಾಗಿ ರಾಜಕೀಯಕ್ಕೆ ಬರುತ್ತಾರೆ ಅನ್ನೋದು ಇಲ್ಲಿನ ಜನರ ಮನಸ್ಸಿನಲ್ಲಿದೆ. ಇನ್ನು ಎಲೆಕ್ಷನ್ ಹತ್ತಿರವಾಗ್ತಿದ್ದಂತೆ ಮತ್ತೆ ಕ್ಷೇತ್ರದಲ್ಲಿ ಕಾಣಿಸಿಕೊಂಡ ಅಸ್ನೋಟಿಕರ್ ಈಗಾಗಲೇ ಬಿಜೆಪಿ ಬಿಟ್ಟು ಜೆಡಿಎಸ್ ಸೇರಿದ್ದಾಗಿದೆ. ಅಷ್ಟೇ ಅಲ್ಲ ಕಾರವಾರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಂತಾ ಘೋಷಣೆ ಕೂಡಾ ಆಗಿದೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪಡೆದ ಮತವನ್ನ ಗಮನಿಸಿದ್ರೆ ಕಾರವಾರ ಕ್ಷೇತ್ರದಲ್ಲಿ ಆ ಪಕ್ಷಕ್ಕೆ ನೆಲೆ ಇಲ್ಲ ಅನ್ನೊದು ಸ್ಪಷ್ಟವಾಗಿ ಕಾಣತ್ತೆ. ಆದ್ರೆ ಆನಂದ ಅಸ್ನೋಟಿಕರ್ ಮಾಜಿ ಸಚಿವರಾಗಿರೋದ್ರಿಂದ ಪಕ್ಷದ ಓಟಿಗಿಂತ ಅವರ ವ್ಯಯಕ್ತಿಕ ಮತಗಳು ಹೆಚ್ಚು ಸಿಗಬಹುದು ಅನ್ನೋ ಲೆಕ್ಕಾಚಾರ ಇದ್ರೂ ಕೂಡಾ ಕಳೆದ ಬಾರಿಯೇ ವರ್ಚಸ್ಸು ಬಿಜೆಪಿಯಿಂದ ನಿಂತಾಗಲೇ ವರ್ಕೌಟ್ ಆಗಿಲ್ಲ ಹಾಗಿದ್ರೆ ಈ ಬಾರಿ ಆಗತ್ತಾ ಅನ್ನೋ ಪ್ರಶ್ನೆ ಎಲ್ಲರಲ್ಲೂ ಇದೆ. ಬಹುಷಃ ಪ್ರಬಲ ಫೈಟ್ ಕೊಡಲು ಟ್ರೈ ಮಾಡಬಹುದೇ ಹೊರತು ಜೆಡಿಎಸ್ ನಿಂದ ನಿಂತು ವಯ್ಯಕ್ತಿತ ವರ್ಚ್ಚಸಿನ ಮೇಲೆ ಕ್ಷೇತ್ರ ಗೆಲ್ಲೋದು ತುಂಬಾ ಕಷ್ಚ.

:ಕಾರವಾರ ಕ್ಷೇತ್ರದ ಲೆಕ್ಕಾಚಾರಗಳೇ ಬೇರೆ. ಇಲ್ಲಿನ ಮತದಾರ ಈ ಬಾರಿ ಬದಲಾವಣೆ ಬಯಸಿರೋದಂತೂ ನಿಜ. ಮಾಜಿ ಸಚಿವ ಆನಂದ ಅಸ್ನೋಟಿಕರ್ ಸಚಿವರಾದ ಅವಧಿಯಲ್ಲಿ ಸರಕಾರನ್ನು ಉರುಳಿಸಲು ಪ್ರಯತ್ನ ಮಾಡಿದ್ದು ಬಿಟ್ಟರೆ ಕ್ಷೇತ್ರದ ಅಭಿವೃದ್ಧಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಅಂತಾ ಕ್ಷೇತ್ರದ ಜನ ಹೇಳ್ತಿದ್ದಾರೆ. ಹಾಲಿ ಶಾಸಕ ಸತೀಶ್ ಸೈಲ್ ಭರವಸೆಯನ್ನು ನೀಡಿರೋದು ಬಿಟ್ಟರೆ ಹೇಳುವಂತಾ ಅಭಿವೃದ್ಧಿ ಮಾಡಿಲ್ಲ ಅಂತಾ ಮತದಾರರುಹೇಳ್ತಿದ್ದಾರೆ. ಹೀಗಾಗಿ  ಅಧಿಕಾರಕ್ಕಾಗಿ ರಾಜಕಾರಣ ಮಾಡುವವರನ್ನು ಬೆಂಬಲಿಸುವ ಬದಲಿಗೆ ಬಡವರ ಪಾಲಿಗೆ ಸ್ಪಂಧಿಸುತ್ತಿರುವ ಬಿಜೆಪಿಯ ರೂಪಾಲಿ ನಾಯ್ಕ ಅವರನ್ನ ಆಯ್ಕೆ ಮಾಡಬೇಕು ಎನ್ನುವ ಮಾತು ಕಾರವಾರ ಕ್ಷೇತ್ರದಲ್ಲಿ ಹಳ್ಳಿ ಹಳ್ಳಿಗಳ ಜನರಿಂದ ಕೇಳಿ ಬರ್ತಿದೆ. ಇನ್ನು ರೂಪಾಲಿ ನಾಯ್ಕ ಅವ್ರಿಗೆ ರಾಜಕೀಯ ಕ್ಷೇತ್ರ ಹೊಸತೆನಲ್ಲ. ರಾಜಕೀಯ ಹಿನ್ನಲೆಯಿಂದಲೆ ಬಂದವರು. ಕೇವಲ ರಾಜಕೀಯ ಮಾತ್ರವಲ್ಲದೆ ಕ್ರೀಡೆ, ಸಾಹಿತ್ಯ, ಶಿಕ್ಷಣ, ಮೊದಲಾದವುಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಕಾರವಾರ ತಾಲೂಕಾ ಪಂಚಾಯತ್ ಅಧ್ಯಕ್ಷರಾಗಿ ಕೆಲ್ಸ ಮಾಡಿದ್ದಾರೆ ಅಂದಿನ ಉತ್ತಮ ಆಡಳಿತವನ್ನ ನೋಡಿದ ಜನ ಇವ್ರೇ ಶಾಸಕರಾಗಬೇಕು ಅಂತಿದ್ದಾರೆ.

 

ಕಾರವಾರ ವಿಧಾನಸಭಾ ಕ್ಷೇತ್ರದತ್ತ ಎಲ್ಲರೂ ಕೂತೂಹಲದಿಂದ ನೋಡ್ತಿದ್ದಾರೆ. ಈ ಕ್ಷೇತ್ರದಲ್ಲಿ ಮಹಿಳಾ ಮತದಾರೆ ಹೆಚ್ಚಾಗಿರೋ ಕಾರಣ ಬಿಜೆಪಿಯಿಂದ ರೂಪಾಲಿ ನಾಯ್ಕ ಅವ್ರು ಕಣಕ್ಕಿಳಿದ್ರೆ ಇದು ಅವರಿಗೆ ಪ್ಲಸ್ ಪಾಯಿಂಟ್ ಆಗತ್ತೆ. ಜತೆಗೆ ಈ ಕ್ಷೇತ್ರದ ಜನ ಆನಂದ್ ಅಸ್ನೋಟೀಕರ್ ರನ್ನು ಈ ಹಿಂದೇನೇ ತಿರಸ್ಕಿರಿಸಿದ್ರು. ಶಾಸಕ ಸತೀಶ್ ಸೈಲ್ ಬಗ್ಗೆ ಕೂಡಾ ಜನಾಭಿಪ್ರಾಯ ಇಲ್ಲ. ಆದ್ರೆ ರೂಪಾಲಿ ನಾಯ್ಕ ಕ್ಷೇತ್ರದ ತುಂಬಾ ಸಖತ್ ಹವಾ ಕ್ರಿಯೇಟ್ ಮಾಡಿದ್ದಾರೆ ಅಷ್ಟೇ ಅಲ್ಲದೆ ಇವರ ಜತೆ ಯುವಕರ,ಮಹಿಳೆಯರ ದೊಡ್ಡ ಪಡೆಯೇ ಇದೆ. ಇದೆಲ್ಲದರ ಜತೆಗೆ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಬೆಂಬಲ ಕೂಡಾ ಇವರಿಗಿರೋದ್ರಿಂದ ಈ ಬಾರಿ ಕಾರವಾರ ಕ್ಷೇತ್ರದಲ್ಲಿ ಕಮಲ ಅರಳೋದು ಗ್ಯಾರಂಟಿ ಅನ್ನೋದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ