ಬ್ರೇಕಿಂಗ್ ! ಹರ್ಷ ಮೊಯಿಲಿಗೆ ಇಲ್ಲ ಟಿಕೆಟ್ ! ಮಗನಿಗೆ “ಕೈ” ಕೊಟ್ಟ ಮೊಯಿಲಿ !!

ರಾಷ್ಟ್ರಮಟ್ಟದಲ್ಲಿ ರಾಜ್ಯದ ಕಾಂಗ್ರೆಸ್ ಸರಕಾರವನ್ನು ಮುಜುಗರಕ್ಕೆ ಈಡು ಮಾಡಿದ ಹರ್ಷ ಮೊಯಿಲಿಗೆ ಈ ಬಾರಿ ಟಿಕೆಟ್ ನಿರಾಕರಣೆ ಮಾಡಲಾಗಿದೆ.

ad

ಈ ಬಾರಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ ವೀರಪ್ಪ ಮೊಯಿಲಿ ಪುತ್ರ ಹರ್ಷ ಮೊಯಿಲಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈ ಸಂಬಂಧ ಕೆಪಿಸಿಸಿಗೆ ಟಿಕೆಟ್ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದರು. ಈ ಮಧ್ಯೆ ಕಾರ್ಕಳದಲ್ಲಿ ಗುತ್ತಿಗೆದಾರರೊಬ್ಬರಿಗೆ ಟಿಕೆಟ್ ನೀಡಲು ಸಚಿವ ಮಹದೇವಪ್ಪ ಪ್ರಯತ್ನಿಸುತ್ತಿದ್ದ ಹಣ ಹೊಂದಿರುವವರಿಗೆ ಮಣೆ ಹಾಕಲಾಗುತ್ತಿದೆ ಎಂಬರ್ಥದ ಟ್ವೀಟ್ ಮಾಡಿದ್ದರು. ತನ್ನ ಟ್ವಿಟ್ಟರ್ ಖಾತೆಯಲ್ಲದೇ, ತನ್ನ ತಂದೆ ವೀರಪ್ಪ ಮೊಯಿಲಿಯವರ ಟ್ವಿಟ್ಟರ್ ಖಾತೆಯಿಂದಲೇ ಇದೇ ಸ್ಟೇಟಸ್ ಹಾಕಿದ್ದರು.

ಇದು ರಾತ್ರಿ ಬೆಳಗಾಗೋದ್ರೊಳಗೆ ವೈರಲ್ ಆಗಿದ್ದು, ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಇಂದು ಚುನಾವಣಾ ಸಮಿತಿ ಸಭೆ ನಡೆಸಿದ ಸಮಿತಿಯು ವೀರಪ್ಪ ಮೊಯಿಲಿ ಪುತ್ರನಿಗೆ ಟಿಕೆಟ್ ನಿರಾಕರಿಸಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಖುದ್ದು ವೀರಪ್ಪ ಮೊಯಿಲಿಯವರೇ ತನ್ನ ಪುತ್ರನಿಗೆ ಟಿಕೆಟ್ ನೀಡಬಾರದು ಎಂದು ಸಮಿತಿಗೆ ಮನವಿ ಮಾಡಿದ್ದರು. ಚುನಾವಣಾ ಸಮಿತಿ ಸಭೆ ಬಳಿಕ ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ್ ಈ ಸುದ್ದಿಯನ್ನು ದೃಡೀಕರಿಸಿದ್ದಾರೆ.