ಸಚಿವ ಮಹದೇವಪ್ಪ- ಅವರ ಮಗ ಟಿಕೇಟ್ ಕೇಳ್ತಿರೋದು ಎಲ್ಲಿಂದ ಗೊತ್ತಾ?

ಅಕ್ರಮ ಮರಳು ದಂಧೆ ಪ್ರಕರಣ ಎದುರಿಸುತ್ತಿರುವ ಸಚಿವ ಎಚ್​.ಸಿ.ಮಹದೇವಪ್ಪ ಪುತ್ರ ಸುನೀಲ್ ಬೋಸ್​ ಮತ್ತು ಹಾಲಿ ಸಚಿವ ಎಚ್.ಸಿ.ಮಹದೇವ್ ಪ್ರಸಾದ್​ ಇಬ್ಬರು ಕೂಡ ಒಂದೇ ಕ್ಷೇತ್ರದ ಟಿಕೇಟ್ ಆಕಾಂಕ್ಷಿಗಳಾಗಿದ್ದಾರೆ. ಇದಕ್ಕಾಗಿ ಇಬ್ಬರು ಕಾಂಗ್ರೆಸ್​ನಿಂದ ಟಿಕೇಟ್ ಆಕಾಂಕ್ಷಿಗಳಾಗಿ ಅರ್ಜಿ ಸಲ್ಲಿಸಿದ್ದಾರೆ.

ad


ಈ ಹಿಂದೆ ಸಚಿವ ಎಚ್​.ಸಿ.ಮಹದೇವಪ್ಪ ಬೆಂಗಳೂರಿನ ಸಿ.ವಿ.ರಾಮನ್​ ನಗರದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಆದರೇ ಇದಕ್ಕೆ ಸ್ಥಳೀಯ ಮುಖಂಡರ ವಿರೋಧ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಸಿ.ವಿ.ರಾಮನ್ ನಗರದಲ್ಲಿ ಹಾಲಿ ಬಿಬಿಎಂಪಿ ಮೇಯರ್ ಆಗಿರುವ ಸಂಪತ್ ರಾಜ್​ ಸ್ಪರ್ಧಿಸುತ್ತಾರೆ ಎನ್ನಲಾಗಿದೆ. ಹೀಗಾಗಿ ಸಚಿವ ಎಚ್.ಸಿ.ಮಹದೇವಪ್ಪನವರಿಗೆ ಇದ್ದೊಂದು ಕ್ಷೇತ್ರವೂ ಕೈ ತಪ್ಪಿದಂತಾಗಿರೋದರಿಂದ ಅನಿವಾರ್ಯವಾಗಿ ಸಚಿವ ಎಚ್.ಸಿ.ಮಹದೇವಪ್ಪ ಮೈಸೂರಿನತ್ತ ಮುಖಮಾಡಿದ್ದಾರೆ ಎನ್ನಲಾಗುತ್ತಿದೆ. ಅದಕ್ಕಾಗಿ ಅಪ್ಪ-ಮಗ ಇಬ್ಬರು ನರಸೀಪುರ ಕ್ಷೇತ್ರಕ್ಕೆ ಟಿಕೇಟ್ ನೀಡುವಂತೆ ಹೈಕಮಾಂಡ್​ಗೆ ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ. ಮೈಸೂರು ಭಾಗಕ್ಕೂ ನನಗೂ ಅವಿನಾಭಾವ ಸಂಬಂಧವಿದೆ.

ಸೋತಾಗಲೂ ನನಗೆ ಇಲ್ಲಿನ ಜನ ಆರ್ಶಿವಾದ ಮಾಡಿದ್ದಾರೆ. ಹೀಗಾಗಿ ನಾನು ನರಸೀಪುರದ ಪ್ರಭಾವಿ ಟಿಕೇಟ್​ ಆಕಾಂಕ್ಷಿ ಎಂದಿದ್ದಾರೆ.
ಇನ್ನು ಈಗಾಗಲೇ ಹಲವು ಭಾರಿ ತಮ್ಮ ಅವ್ಯೆವ್ಯಹಾರಗಳಿಂದ ಸುದ್ದಿಯಾಗಿರುವ ಸುನೀಲ್ ಬೋಸ್ ಕೂಡ ನರಸೀಪುರದ ಟಿಕೇಟ್ ಆಕಾಂಕ್ಷಿಯಾಗಿದ್ದು, ಆದರೇ ಈ ಕ್ಷೇತ್ರದಲ್ಲಿ ಅಪ್ಪನಿಗೆ ಟಿಕೇಟ್​ ಕೊಟ್ಟರೆ ನನ್ನದೇನೂ ಅಭ್ಯಂತರವಿಲ್ಲ ಎಂಬು ಸುನೀಲ್ ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಮೈಸೂರು ಭಾಗದಲ್ಲೇ ಅಪ್ಪ ಮಕ್ಕಳು ಟಿಕೇಟ್ ಗಾಗಿ ಹೈಕಮಾಂಡ್ ಗೆ ಒತ್ತಡ ಹಾಕಲಾರಂಬಿಸಿದ್ದು, ನಂಜನಗೂಡು-ನರಸೀಪುರ ಕ್ಷೇತ್ರದ ಮೇಲೆ ಅಪ್ಪ-ಮಕ್ಕಳ ಕಣ್ಣು ಬಿದ್ದಿರೋದಂತು ಸತ್ಯ.