ಸಿಎಂ ಸಿದ್ದರಾಮಯ್ಯರ ವೈರಲ್ ಆಡಿಯೋ ಇದು !! ಏನೇನ್ ಮಾತಾಡಿದ್ದಾರೆ ಗೊತ್ತಾ ?

ಹಾಸನದ ಹೊಳೆ ನರಸೀಪುರದಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿರುವ ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಮಂಜೇಗೌಡ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿರುವ ಆಡಿಯೋ ಈಗ ವೈರಲ್ ಆಗಿದೆ.

ಮಂಜೇಗೌಡರ ಜೊತೆ ಸಿಎಂ ಸಿದ್ದರಾಮಯ್ಯ ಮಾತನಾಡಿರೋ ಆಡಿಯೋದಲ್ಲಿ ಹೆಚ್​ ಡಿ ರೇವಣ್ಣರನ್ನು ಮಣಿಸಲು ಮಂಜೇಗೌಡರಿಗೆ ಸೂಚನೆ ನೀಡಿದ್ದಾರೆ. 1 ನಿಮಿಷ 41‌ಸೆಕೆಂಡ್ ಆಡಿಯೋ ಇದ್ದು, ಏ ಮಂಜೇಗೌಡ, ಮೊದಲು ನೀನು ರಾಜೀನಾಮೆ ಕೊಟ್ಟು ಹೊಳೆ ನರಸೀಪುರಕ್ಕೆ ಹೋಗು. ಹೊಳೆನರಸೀಪುರದಲ್ಲಿ ಇಷ್ಟು ದಿನ ದೇವೇಗೌಡರ ಮಕ್ಕಳು ಗೆದ್ದಿದ್ದು ಸಾಕು ಎನ್ನುತ್ತಾರೆ. ಅಷ್ಟರಲ್ಲಿ ಮಂಜೇಗೌಡರು ಹೊಳೆನರಸೀಪುರದ ಸ್ಥಳೀಯ ನಾಯಕರಿಗೆ ಫೊನನ್ನು ವರ್ಗಾಯಿಸುತ್ತಾರೆ. ಅವರ ಬಳಿಯೂ ಸಿಎಂ ಮಾತು ಮುಂದುವರೆಸುತ್ತಾರೆ ” ನಾವು ಮಂಜೇಗೌಡನನ್ನು ಕ್ಯಾಂಡಿಡೇಟ್ ಮಾಡುತ್ತಿದ್ದೇವೆ. ಅವರನ್ನು ಗೆಲ್ಲಿಸಿ. ದೇವೇಗೌಡರ ಮಕ್ಕಳು ಗೆದ್ದಿದ್ದು ಸಾಕು ಎನ್ನುತ್ತಾರೆ.

ಆದರೆ ಅಷ್ಟಕ್ಕೆ ಓಕೆ ಸರ್ ಅನ್ನದ ಸ್ಥಳೀಯ ಕಾಂಗ್ರೆಸ್ ನಾಯಕರು ಸಿಎಂಗೆ ಮರಳಿ ಪ್ರಶ್ನೆ ಮಾಡುತ್ತಾರೆ. ” ಅಲ್ಲ ಸಾರ್, ಇಲ್ಲಿಯವರೆಗೆ ರೇವಣ್ಣರನ್ನು ಸಪೋರ್ಟ್ ಮಾಡಿದ್ದೇ ನೀವು. ಕೇಳಿ ಕೇಳಿದ್ದಕ್ಕೆಲ್ಲಾ ಹಣ ಕೊಟ್ಟಿದ್ದೀರಿ. ರೋಡೆಲ್ಲಾ ಚೆನ್ನಾಗಿ ಆಗಿದೆ. ಈಗ ಸೋಲಿಸಿ ಅಂದ್ರೆ ಹೇಗೆ ಸಾರ್ ” ಎಂದು ಪ್ರಶ್ನಿಸಿದ್ದಾರೆ. ನಾನು ರೇವಣ್ಣಗೆ ರಾಜಕೀಯವಾಗಿ ಬೆಂಬಲಿಸಿಲ್ಲ. ಕೇವಲ ಅಭಿವೃದ್ದಿ ಸಂಬಂಧಿಸಿ ಅನುದಾನ ನೀಡಿದ್ದೇನೆ ಅಷ್ಟೆ ಎಂದು ದೂರವಾಣಿಯಲ್ಲೇ ಸಿಎಂ ಸ್ಪಷ್ಟಪಡಿಸಿದ್ದಾರೆ. ಮತ್ತೆ ಫೋನ್ ತೆಗೆದುಕೊಂಡ ಮಂಜೇಗೌಡರು, ಸರ್ ನಾಳೆ ಬಂದು ಭೇಟಿ ಆಗ್ತೀನಿ ಅನ್ನೋದರೊಳಗೆ ಸಂಭಾಷಣೆ ಮುಕ್ತಾಯವಾಗುತ್ತದೆ. ಚುನಾವಣೆ ಸಂಧರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಆಡಿಯೋ ಇದೀಗ ಕಾಂಗ್ರೆಸ್ ಜೆಡಿಎಸ್ ಮಧ್ಯೆ ಸಂಚಲನಕ್ಕೆ ಕಾರಣವಾಗಿದೆ.