ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ಎಫ್.ಐ.ಆರ್??

  • ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ವಿರುದ್ಧ ಎಫ್.ಐ.ಆರ್??

  • ಚುನಾವಣಾ ಅಧಿಕಾರಿಗಳು ವಾಪಸ್ಸು ಪಡೆದ ಪರವಾನಿಗೆ ಪತ್ರ ಬಳಸಿ ಚುನಾವಣೆ ಪ್ರಚಾರ ಮಾಡಿದ ಆರೋಪ.

  • ಇಳಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

ಚುನಾವಣಾ ಅಧಿಕಾರಿಗಳು ವಾಪಸ್ಸು ಪಡೆದ ಪರವಾನಿಗೆ ಪತ್ರ ಬಳಸಿ ಚುನಾವಣೆ ಪ್ರಚಾರ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಹುನಗುಂದ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ್ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ??.

ad


 

ಹೌದು ಚುನಾವಣಾ ಅಧಿಕಾರಿಗಳು ಈ ಹಿಂದೆ ಕಳೆದ ಎಪ್ರೀಲ್ 1ರಂದು ಒಂದು ದಿನದ ಮಟ್ಟಿಗೆ  ಪ್ರಚಾರದ ಪರವಾನಿಗೆ ಪತ್ರವನ್ನು ನೀಡಿದ್ದರಂತೆ.ಆದ್ರೆ ಇನ್ನೂ ಅದೇ ಪರವಾನಿಗೆ ಪತ್ರ ಬಳಕೆ ಮಾಡಿಕೊಂಡು ಶಾಸಕರು ತಮ್ಮ ಮತಕ್ಷೇತ್ರದಲ್ಲಿ ವಿಶೇಷ ವಾಹನದ ಮೂಲಕ ಪ್ರಚಾರ ಮಾಡುತ್ತಿದ್ದಾರೆಂದು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕರು ದೂರು ದಾಖಲಿಸಿದ್ರಂತೆ.

ಇದೇ ಹಿನ್ನೆಲೆಯಲ್ಲಿ  ದೂರು ಆಧರಿಸಿ ತನಿಖೆ ನಡೆಸಿದ ಚುನಾವಣಾ ಅಧಿಕಾರಿಗಳು  ವಾಹನ ಜಪ್ತಿಗೆ ಮುಂದಾಗಿದ್ದಾರೆ,ಈ ವೇಳೆ ಶಾಸಕ ಕಾಶಪ್ಪನವರ್ ಬೆಂಬಲಿಗರು ಹಾಗೂ ಅಧಿಕಾರಿಗಳ ನಡುವೆ ಮಾತಿಕ ಚಕಮಕಿ ಕೂಡ ನಡೆದಿದೆ.ಸಧ್ಯ ಇಳಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಧಿಕಾರಿಗಳು ತನಿಖೆ ಮುಮದುವರೆಸಿದ್ದಾರೆ.ಇನ್ನು ಇದು ಬಿಜೆಪಿಯವರು ಸೋಲಿನ ಭೀತಿಯಿಂದ ಈ ರಿತಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ್ ಸಹೋದರ ದೇವಾನಂದ ಕಾಶಪ್ಪನವರ್ ಬಿಜೆಪಿಗೆ ವಿರುದ್ಧ ಆರೋಪಿಸಿದ್ದಾರೆ.