ತಾಕತ್ತಿದ್ದರೇ ತಿಪ್ಪೆಸ್ವಾಮಿ ಪಕ್ಷೇತರರಾಗಿ ಗೆದ್ದು ಬರಲಿ-ಶ್ರೀರಾಮುಲು ಬಹಿರಂಗ ಸವಾಲು!

ಮೊಳಕಾಲ್ಮೂರು ಕ್ಷೇತ್ರದ ಅಭ್ಯರ್ಥಿಗಳ ನಡುವಿನ ಗಲಾಟೆ ಸಧ್ಯಕ್ಕೆ ಮುಗಿಯುವ ಲಕ್ಷಣವೇ ಕಾಣುತ್ತಿಲ್ಲ. ಹೌದು ಮೊಳಕಾಲ್ಮೂರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಬಿ.ಶ್ರೀರಾಮುಲು ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಆಕಾಂಕ್ಷಿಯಾದ ತಿಪ್ಪೆಸ್ವಾಮಿಯವರಿಗೆ ತೀವ್ರ ಆಘಾತವಾಗಿತ್ತು. ಇದು ಶ್ರೀರಾಮುಲು ಮತ್ತು ತಿಪ್ಪೆಸ್ವಾಮಿ ನಡುವಿನ ಫೈಟ್​ಗೆ ಕಾರಣಾಗಿತ್ತು. ಇದೀಗ ತಿಪ್ಪೆಸ್ವಾಮಿಗೆ ಶ್ರೀರಾಮುಲು ಸವಾಲು ಎಸೆದಿದ್ದು, ಶಕ್ತಿ ಇದ್ದರೇ ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಬರಲಿ ಶ್ರೀರಾಮುಲು ಸವಾಲೆಸೆದಿದ್ದಾರೆ.


ಈ ಬಗ್ಗೆ ಮಾತನಾಡಿದ ಶ್ರೀರಾಮುಲು, ನಿನ್ನೆಯ ಘಟನೆಯಲ್ಲಿ ನನ್ನ ಕಾರಿ ಜಖಂ ಆಗಿದೆ, ನನ್ನ ಹುಡುಗರ ಮೇಲೆ ಹಲ್ಲೆಯಾಗಿದೆ. ಪಕ್ಷದ ನಾಯಕರು ಈ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದ ಶ್ರೀರಾಮುಲು, ಮೊಳಕಾಲ್ಮೂರು ಕ್ಷೇತ್ರದ ಶಾಸಕ ತಿಪ್ಪೇಸ್ವಾಮಿಗೆ ೨೦೧೩ರಲ್ಲಿ ನಾನು ಅವರ ಕೈ ಹಿಡಿದು ಗೆಲ್ಲಿಸಿದೆ- ತಿಪ್ಪೇಸ್ವಾಮಿ ನನ್ನಿಂದ ಗೆದ್ದಿಲ್ಲ ಅಂತಿದ್ದಾರೆ, ಆದ್ರೆ ಇದೀಗ ಅವರಿಗೆ ಸವಾಲು ಹಾಕುವೆ- ತಿಪ್ಪೇಸ್ವಾಮಿಗೆ ಶಕ್ತಿ ಇದ್ದರೇ ಪಕ್ಷೇತರ ಅಭ್ಯರ್ಥಿಯಾಗಲಿ, ಇಲ್ಲವೇ ಬೇರೆಯವರಿಗೆ ಬೆಂಬಲ ನೀಡಿ ಗೆದ್ದು ತೋರಿಸಲಿ ಎಂದರು.


ಕಾಂಗ್ರೆಸ್ ನನ್ನ ಕಟ್ಟಿ ಹಾಕುವ ಪ್ರಯತ್ನ ಮಾಡುತ್ತಿದೆ, ಎಸ್ ಸಿ ಎಸ್ ಟಿ ಮತಗಳಿಗೋಸ್ಕರ ನನ್ನ ಕಟ್ಟಿ ಹಾಕುವೆ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್ ನವರೂ ಎನೇ ಷಂಡತ್ಯ್ರ ಮಾಡಿದ್ರೂ ನಾನು ಜಗ್ಗುವುದಿಲ್ಲ. ಮೊಳಕಾಲ್ಮೂರು ಕ್ಷೇತ್ರದಿಂದ ನಾನು ಕೇವಲ ನಾಮಪತ್ರ ಹಾಕಿ ೨-೩ ದಿನ ಮಾತ್ರ ಹಾಕಿ ರಾಜ್ಯ ಪ್ರವಾಸ ಮಾಡಿ, ಕ್ಷೇತ್ರದಲ್ಲಿ ಸ್ವಲ್ಪ ದಿನ ಪ್ರಚಾರ ಮಾಡುವೆ- ಗೆಲ್ಲುವೆ ಇದು ನನ್ನ ಬಹಿರಂಗ ಸವಾಲ್ ಎಂದು ಶ್ರೀರಾಮುಲು ಮಾತಾಡಿದ್ದಾರೆ. ಒಟ್ಟಿನಲ್ಲಿ ತಿಪ್ಪೆಸ್ವಾಮಿ ಮತ್ತು ಶ್ರೀರಾಮುಲು ನಡುವಿನ ಸಂಘರ್ಷ ಮುಗಿಲುಮುಟ್ಟಿದೆ