ಬಿ ಎಸ್ ವೈಗೆ ಸೆಕ್ಸ್ ಸಿಡಿ ತೋರಿಸಿ ಟಿಕೆಟ್ ಪಡೆದುಕೊಂಡ ಹಾಲಪ್ಪ !! ಶೋಭಾ ಮನೆಗೆ ರೈಡ್ ಮಾಡಿದ್ರೆ ಏನೇನು ಸಿಗುತ್ತೆ ? ಬೇಳೂರು ಸ್ಪೋಟಿಸಿದ ಮಾಹಿತಿ !!

 

ad

ಶಿಕಾರಿಪುರ ದಲ್ಲಿ ಒಬ್ಬ ಹೆಣ್ಣುಬಾಕ ಇದ್ದಾನೆ. ಅವನ ಸೀಡಿ ಹಾಲಪ್ಪ ಕೈಯ್ಯಲ್ಲಿದೆ. ಅದೇ ಸಿಡಿ ತೋರಿಸಿ ಟಿಕೆಟ್ ತೆಗೆದುಕೊಂಡಿದ್ದಾನೆ ಎಂದು ಬೇಳೂರು ಗೋಪಾಲ ಕೃಷ್ಣ ಹೇಳಿದ್ದಾರೆ. ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಸಂಬಂಧ ಇಂದು ಸಾಗರ ಬಿಜೆಪಿ ಟಿಕೆಟ್ ಆಕಾಂಕ್ಷಿ ಬೇಳೂರು ಗೋಪಾಲಕೃಷ್ಣ ಸುದ್ದಿ ಗೋಷ್ಠಿ ನಡೆಸಿದರು.

 

“ಬಿಜೆಪಿ ರಾಜ್ಯಾಧ್ಯಕ್ಷ ರು ನಮಗೆ ಟಿಕೆಟ್ ತಪ್ಪಿಸಿದ್ದಾರೆ. ಆದ್ದರಿಂದ ನನಗೆ ನೋವಾಗಿದೆ. ಐದು ವರ್ಷ ಕೆಲಸ ಮಾಡಿ ಸಾಗರದಲ್ಲಿ ಪಕ್ಷ ಕಟ್ಟಿದ್ದೆ‌. ಅಂತಹುದರಲ್ಲಿ ನನ್ನನ್ನು ಬಿಟ್ಟು ಭ್ರಷ್ಟಾಚಾರಿಯನ್ನು ತಂದು ಸಾಗರದಲ್ಲಿ ಹಾಕಿದ್ದಾರೆ. ಅದಕ್ಕೆ ನಾನು ಪಕ್ಷವನ್ನು ಬಿಡಬೇಕು ಬಂಡಾಯ ಏಳಬೇಕು ಎಂದು ತೀರ್ಮಾನಿಸಿದ್ದೇನೆ ಎಂದು ಬೇಳೂರು ಹೇಳಿದ್ದಾರೆ. “ನನಗೆ ಅನ್ಯಾಯ ಮಾಡಿರೋದು ಯಡಿಯೂರಪ್ಪ, ಅವರ ಮಗ ಹಾಗೂ ಶೋಭಾಕರಂದ್ಲಾಜೆ. ಎಲ್ಲ ಸಮೀಕ್ಷೆಗಳೂ ನನ್ನ‌ಪರವಾಗಿಯೇ ಇತ್ತು. ಶಿಕಾರಿಪುರದಲ್ಲಿ ಒಬ್ಬ ಹೆಣ್ಣುಬಾಕ ಇದ್ದಾನೆ. ಅವನ ಸಿಡಿ ಏನಾದರೂ ಹಾಲಪ್ಪನಿಗೆ ಸಿಕ್ಕಿರಬೇಕು. ಅದಕ್ಕೆ ಅವರನ್ನು ಹೆದರಿಸಿ ಸಾಗರದ ಟಿಕೆಟ್ ಪಡೆದಿರಬಹುದು. ಯಡಿಯೂರಪ್ಪ ಜತೆಯಲ್ಲಿ ನಾನು ಕೆಜೆಪಿಗೆ ಹೋಗಲಿಲ್ಲ. ಹಾಗಾಗಿ ನನಗೆ ಟಿಕೆಟ್ ತಪ್ಪಿಸಿದ್ದಾರೆ. ಕೆಜೆಪಿಯಿಂದ ಬಂದವರಿಗೆ ಮಾತ್ರ ಟಿಕೆಟ್ ಕೊಟ್ಟಿದ್ದಾರೆ. ಯಡಿಯೂರಪ್ಪ ಅವರಿಗೆ ನಮ್ಮ ಶಾಪತಟ್ಟುತ್ತದೆ. ಬಿಜೆಪಿಯವರು ಖಂಡಿತ ನಿಮ್ಮನ್ನು ಮುಖ್ಯಮಂತ್ರಿ ಮಾಡೋದಿಲ್ಲ ಎಂದೂ ಗೋಪಾಲಕೃಷ್ಣ ಹೇಳಿದ್ರು.   ಶೋಭಾ ಕರಂದ್ಲಾಜೆ ಮನೆ ಮೇಲೆ ಐಟಿ ದಾಳಿ ನಡೆದ್ರೆ ಕೊಟ್ಯಂತರ ರೂಪಾಯಿ ಸಿಗುತ್ತದೆ. ಹಣದ ಹೊಳೆಯನ್ನೇ ಹರಿಸುತ್ತಿದ್ದಾರೆ. ಬೇಳೂರು ಗೆದ್ದರೆ ಜಿಲ್ಲೆಯಲ್ಲಿ ತಮ್ಮ ಮಕ್ಕಳಿಗೆ ಅನ್ಯಾಯವಾಗುತ್ತದೆ ಎಂದು ಟಿಕೆಟ್ ತಪ್ಪಿಸಿದ್ದಾರೆ ಎಂದರು.