ಚುನಾವಣಾ ಆಯುಕ್ತರನ್ನು ಭೇಟಿ ಮಾಡಿದ ಎಚ್ಡಿಡಿ- ಕೆಂಪಯ್ಯ ವಿರುದ್ಧ ಹಣ ಸಾಗಾಟ ಆರೋಪ!

ರಾಜ್ಯ ವಿಧಾನಸಭಾ ಚುನಾವಣೆಯನ್ನು ಪಾರದರ್ಶಕವಾಗಿ ನಡೆಸುವಂತೆ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ.

ad


 ಇಂದು ಚುನಾವಣಾ ಆಯೋಗ ಕಚೇರಿಯಲ್ಲಿ ಕೇಂದ್ರ ಚುನಾವಣಾ ಆಯುಕ್ತ ಓಂ ಪ್ರಕಾಶ್​ ರಾವತ್​ರನ್ನ ಹೆಚ್​ಡಿಡಿ ಭೇಟಿ ಮಾಡಿದ್ರು.
ರಾವತ್ ಜೊತೆ ಕೆಲಕಾಲ ಮಾತುಕತೆ ನಡೆಸಿದ ದೇವೇಗೌಡ್ರು, ಪಾರದರ್ಶಕ ಚುನಾವಣೆಗೆ ಮನವಿ ಮಾಡಿಕೊಂಡ್ರು. ಅಲ್ದೇ ಇದೇ ವೇಳೆ ರಾಜ್ಯ ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ವಿರುದ್ಧವೂ ಹೆಚ್​ಡಿಡಿ ದೂರು ಸಲ್ಲಿಸಿದ್ದಾರೆ. ಪೊಲೀಸ್​ ಜೀಪುಗಳಲ್ಲಿ ಕೆಂಪಯ್ಯ ಹಣ ಸಾಗಾಟ ಮಾಡಿಸುತ್ತಿದ್ದಾರೆ ಎಂದು ದೂರಿದ್ದಾರೆ.

ದೂರು ಸಲ್ಲಿಸಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಎಚ್​ಡಿಡಿ, ನಾನು ಇಲ್ಲಿ ಅಥವಾ ದೆಹಲಿ ಎಲ್ಲಾದರೂ ಚುನಾವಣಾ ಆಯುಕ್ತರನ್ನು ಭೇಟಿ ಮಾಡಲೇ ಬೇಕೆಂದುಕೊಂಡಿದ್ದೆ. ಚುನಾವಣೆಯ ನೋಟಿಫಿಕೇಶನ್ ಘೊಷಣೆಯಾಗುವ ಮುನ್ನವೇ ಸರ್ಕಾರ ಅಧಿಕಾರಿಗಳನ್ನು ತಮಗೆ ಬೇಕಾದಂತೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಈ ಎಲ್ಲ ವಿಚಾರವನ್ನು ಚುನಾವಣಾ ಆಯೋಗದವರ ಗಮನಕ್ಕೆ ತಂದಿದ್ದೇನೆ ಎಂದರು.