ದೇವೆಗೌಡರು ಚುನಾವಣಾ ಆಯೋಗಕ್ಕೆ ಪತ್ರ‌ ಬರೆದಿದ್ಯಾಕೆ?

ಮೇ 12 ರಂದು ರಾಜ್ಯ ವಿಧಾನಸಭೆ ಚುನಾವಣೆಗೆ ಮೂಹೂರ್ತ ಫಿಕ್ಸ್ ಆಗಿದ್ದು, ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ನಡೆಸುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡೋದಾಗಿ ದೇವೇಗೌಡರು ತಿಳಿಸಿದ್ರು.

ಕಳೆದ ಮೂರು ತಿಂಗಳಿಂದ ಆಯಾಕಟ್ಟಿನ ಜಾಗದಲ್ಲಿ ತಮಗೆ ಬೇಕಾದವರನ್ನ ನೇಮಿಸಿಕೊಂಡಿದ್ದಾರೆ. ಸ್ವೇಚ್ಛಾಚಾರವಾಗಿ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಪರೋಕ್ಷ, ಪ್ರತ್ಯಕ್ಷವಾಗಿ ಅವರಿಗೆ ಸಹಕರಿಸುವವರನ್ನ ಹೊರಗೆ ಹಾಕ್ಬೇಕು. ಮುಕ್ತ ಚುನಾವಣೆಗೆ ಕೆಲವು ಕೇಂದ್ರ ಅಧಿಕಾರಿಗಳನ್ನೂ ಬಳಸಿಕೊಳ್ಳುವುದು ಉತ್ತಮ ಅಂತಾ ಹೇಳಿದರು. ಜೊತೆಗೆ ರಾಜ್ಯ ಪೊಲೀಸ್ ವ್ಯವಸ್ಥೆ ಈಗಿರುವ ಕೆಂಪಯ್ಯ ವ್ಯವಸ್ಥೆಯಲ್ಲಿ ಇರಬಾರದು.

 

ಈ ಕುರಿತು ಮುಖ್ಯ ಕಾರ್ಯದರ್ಶಿ, ಆಯೋಗಕ್ಕೆ ಪತ್ರ ಬರೆಯುತ್ತೇನೆ ಅಂತಾ ಹೇಳಿದ್ರು. ಒಟ್ಟಿನಲ್ಲಿ ತಮಗೆ ಬೇಕಾದ ಅಧಿಕಾರಿಗಳನ್ನು ಆಯಕಟ್ಟಿನ ಜಾಗಕ್ಕೆ ವರ್ಗಾವಣೆ ಮಾಡಿಕೊಂಡು ಚುನಾವಣೆಯನ್ನು ಹಾಯಾಗಿ ಎದುರಿಸುವ ಸಂಭ್ರಮದಲ್ಲಿದ್ದ ಕಾಂಗ್ರೆಸ್​​ಗೆ ಈಗ ಸಂಕಷ್ಟ ಎದುರಾಗಿದ್ದು ಸರ್ಕಾರದ ಪರವಾಗಿದ್ದ ಅಧಿಕಾರಿಗಳಿಗೆ ಎತ್ತಂಗಡಿ ಭಾಗ್ಯ ಎದುರಾಗಿದೆ.