ಮುಖ್ಯಮಂತ್ರಿ ಸಿದ್ದರಾಮಯ್ಯ ಗೆ ಮಾನಮರ್ಯಾದೆ ಇದ್ಯಾ .? ಮಾಜಿ ಪ್ರಧಾನಿ ದೇವೇಗೌಡ ಪ್ರಶ್ನೆ..

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದೇಶದಲ್ಲಿ ಬಿಜೆಪಿ ಸರ್ಕಾರ ಲೂಟಿ ಮಾಡುತ್ತಿದೆ. ಇದೇ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದಾಗ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಏನು ಸಂಬಂಧ ಇಟ್ಟುಕೊಂಡಿದ್ರು ಅನ್ನೋದನ್ನ ಬಹಿರಂಗಪಡಿಸಲಿ.. ಯಾರಿಂದಲೂ ಜೆಡಿಎಸ್ ಪಕ್ಷವನ್ನು ನಿರ್ನಾಮ ಮಾಡಲು ಸಾಧ್ಯವಿಲ್ಲ..

ನಾವು ಬಿಜೆಪಿ-ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲ.. ಆದ್ರೆ ಸಿಪಿಐ, ಸಿಪಿಐಎಂ ಪಕ್ಷಗಳ ಜೊತೆ ಹೊಂದಾಣಿಕೆ ಮುಂದಾಗಿದ್ದೆವು ಆದ್ರೆ ಯಾರೂ ಮುಂದೆ ಬರಲಿಲ್ಲ, ಆದ್ರೆ ಇಂದು ಸಿಂಎ.ಸಿದ್ದರಾಮಯ್ಯ ಏನೇನೋ ಮಾತನಾಡ್ತಾರೆ ಅವ್ರಿಗೆ ಮಾನ ಮರ್ಯಾದೆ ಇದ್ಯೇನ್ರಿ ಅಂತ ಪ್ರಶ್ನಿಸಿದ್ರು.. ಚಿಕ್ಕಬಳ್ಳಾಪುರ ನಗರದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾಗಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಮಾಧ್ಯಮದವರೊಂದಿಗೆಮಾತನಾಡಿದ್ರು.