ರಾಕಿಂಗ್​ ಸ್ಟಾರ್​ ಯಶ್​ ವಿರುದ್ಧ ಗುಡುಗಿದ ಕುಮಾರಸ್ವಾಮಿ! ರೈತರು ಆತ್ಮಹತ್ಯೆ ಮಾಡಿಕೊಂಡಾಗ ನಟರೆಲ್ಲ ಎಲ್ಲಿದ್ದರು? ಸಿಎಂ ಪ್ರಶ್ನೆ!

ಮಂಡ್ಯ ಚುನಾವಣಾ ಘೋಷಣೆಯಾದಾಗಿನಿಂದ ರಾಕಿಂಗ್​ ಸ್ಟಾರ್​ ಯಶ್​ ಮತ್ತು ಸಿಎಂ ಕುಮಾರಸ್ವಾಮಿ ನಡುವೆ ನಡೆದಿದ್ದ ವಾಗ್ಯುದ್ಧ ಇಂದು ತಾರಕಕ್ಕೇರಿದೆ.  ಪುತ್ರನ ಪರ ಪ್ರಚಾರ ಕೈಗೊಂಡಿರುವ ಸಿಎಂ ಕುಮಾರಸ್ವಾಮಿ ಇಂದು ಮೈಸೂರಿನ ಕೆ.ಆರ್ ಪೇಟೆಯಲ್ಲಿ  ರಾಕಿಂಗ್ ಸ್ಟಾರ್ ಯಶ್ ವಿರುದ್ದ ಆಕ್ರೋಶವನ್ನು ಹೊರಹಾಕಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿಯವರು ನಟ ಯಶ್ ವಿರುದ್ದ ನೇರವಾಗಿ ಧ್ವನಿ ಏರಿಸಿದ್ದಾರೆ. ಇಲ್ಲಿಯವರೆಗೂ ಬಾಯಿಮುಚ್ಚಿಕೊಂಡು ಸುಮ್ಮನಿದ್ದೆ, ಆದರೆ ಇನ್ನೂ ಸುಮ್ಮನೆ ಇರುವುದಿಲ್ಲ. ಸಿನಿಮಾದ ಮಂದಿ ಬಂದು ಇಂದು ಮಂಡ್ಯದ ಸ್ವಾಭಿಮಾನದ ಬಗೆಗೆ ಮಾತನಾಡುತ್ತಾರೆ. ರೈತರು ಸಾಲ ಮಾಡಿ ಆತ್ಮಹತ್ಯೆ ಮಾಡಿಕೊಂಡು ಅವರ ತಾಯಂದಿರು, ಪತ್ನಿ, ಮಕ್ಕಳು ಕುಟುಂಬದವರು ಕಣ್ಣೀರು ಹಾಕುವಾಗ ಸಿನಿಮಾದವರು ಬಂದಿದ್ರಾ?

ಯಾವನೋ ಅವನು ಯಶ್ ನನ್ನ ಪಕ್ಷ ಕಳ್ಳರ ಪಕ್ಷ ಎಂದು ಹೇಳುವವನು, ನಾನು ಕೂಡ ನಿರ್ಮಾಪಕ ಆಗಿದ್ದವನೇ.. ನಿರ್ಮಾಪಕನು ಇಲ್ಲದಿದ್ದರೆ ಇವರೆಲ್ಲಾ ಹೇಗೆ ಬದುಕಲು ಸಾಧ್ಯ.. ಜನರಿಗೆ ಚಿತ್ರದಲ್ಲಿ ನೋಡುವುದೆಲ್ಲಾವನ್ನು ಸತ್ಯ ಎಂದು ಕೊಳ್ಳಬೇಡಿ. ನಿಜವಾಗಿಯೂ ನಿಮ್ಮ ಜೀವನದಲ್ಲಿ ನಿಮ್ಮ ಮನೆಯಲ್ಲಿ ಏನು ನಡೆಯುತ್ತಿದೇಯೋ ಅದೇ ನಿಜವಾದ ಜೀವನ ಎಂದು ನೇರವಾಗಿ ನಟ ಯಶ್ ಗೆ ಟಾಂಗ್ ನೀಡಿದರು.ಅಲ್ಲದೇ ನನಗೆ ತೊಂದರೆಯಾಗಬಾರದೆಂದು ನನ್ನ ಕಾರ್ಯಕರ್ತರು ಸುಮ್ಮನಿದ್ದಾರೆ. ಇಲ್ಲದಿದ್ದರೇ ಏನೋ ಆಗಿರುತ್ತಿತ್ತು ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಒಟ್ಟಿನಲ್ಲಿ ಲೋಕಸಭಾ ಚುನಾವಣಾದಿಂದಲೇ ರಾಜ್ಯದಲ್ಲಾಷ್ಟೇಯಲ್ಲದೇ ದೇಶದೆಲ್ಲೆಡೆ ಸುದ್ದಿಯಾಗಿರುವ ಮಂಡ್ಯ ರಾಜಕಾರಣದಲ್ಲ ಪರಸ್ಪರ ಆರೋಪ-ಪ್ರತ್ಯಾರೋಪಗಳು ಮತ್ತಷ್ಟು ಜೋರಾಗಿದ್ದು,  ಎಲ್ಲಿಗೆ ಹೋಗಿ ತಲುಪತ್ತೆ ಕಾದು ನೋಡಬೇಕಿದೆ.