ಚುನಾವಣಾ ಕಣಕ್ಕಿಳಿಯಲಿದ್ದಾರೆ ಹುಚ್ಚ ವೆಂಕಟ್ !! ಶಾಸಕರಾಗಿ ಪ್ರಧಾನಿಯಾಗುವ ಏಕೈಕ ಅಭ್ಯರ್ಥಿ !! ಮುನಿರತ್ನ v/s ಹುಚ್ಚ ವೆಂಕಟ್ !!

ಮೊನ್ನೆ -ಮೊನ್ನೆ ಯಷ್ಟೇ ರಾಜಕಾರಣಿಗಳು ಮತದಾರರಿಗೆ ಒಡ್ಡುತ್ತಿರುವ ಆಮಿಷಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಟುವಾಗಿ ತಮ್ಮದೇ ವಿಭಿನ್ನ ಶೈಲಿಯಲ್ಲಿ ಟೀಕಿಸಿದ್ದ ಬಿಗ್​ಬಾಸ್​ ಖ್ಯಾತಿಯ ನಟ ಹುಚ್ಚ ವೆಂಕಟ್‌ ಇದೀಗ ತಾವೇ ರಾಜಕೀಯದತ್ತ ಮುಖಮಾಡಿದ್ದಾರೆ.

ad

ಹೌದು ಹುಚ್ಚ ವೆಂಕಟ್​​ ಆರ್.ಆರ್.ನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಸ್ವತಃ ಹುಚ್ಚ ವೆಂಕಟ ಈ ಬಗ್ಗೆ ಬೆಂಗಳೂರಿನ ಪ್ರೆಸ್​ಕ್ಲಬ್​ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು, ಶಾಸಕ ಮುನಿರತ್ನ ವಿರುದ್ಧ ಸ್ಪರ್ಧಿಸೋದೆ ನನ್ನ ಏಕೈಕ ಗುರಿಯಾಗಿದ್ದು, ಹೀಗಾಗಿ ಪಕ್ಷೇತರನಾಗಿ ಕಣಕ್ಕಿಳಿಯುತ್ತಿದ್ದೇನೆ ಎಂದಿದ್ದಾರೆ.

ಇತ್ತೀಚಿಗಷ್ಟೇ ಶಾಸಕ ಮುನಿರತ್ನ ಮತದಾರರನ್ನು ಸೆಳೆಯಲು ಕುಕ್ಕರ್ ಹಂಚಿದ್ದಾರೆ ಎಂದು ಸಿಟ್ಟಿಗೆದ್ದಿದ್ದ ಹುಚ್ಚ ವೆಂಕಟ್ ಅವರು ತಮ್ಮ ಮಾಮೂಲಿ ವರಸೆಯಲ್ಲಿ ಟೀಕಿಸಿದ್ದರು. ಇದೀಗ ಈ ಬಗ್ಗೆ ಸುದ್ದಿ ಗೋಷ್ಠಿ ನಡೆಸಿರುವ ಹುಚ್ಚ ವೆಂಕಟ್​ ನಾನು ಚುನಾವಣೆಗೆ ಸ್ಪರ್ಧಿಸಿ ಗೆಲ್ಲುತ್ತೇನೆ. ಬಳಿಕ ಪ್ರಧಾನಿ ಬಳಿ ಕೇಳಿ ಐದು ದಿನಗಳ ಕಾಲ ಪ್ರಧಾನಿಯಾಗಿ ಕೆಲಸ ಮಾಡು ದೇಶದ ಉದ್ಧಾರ ಮಾಡುತ್ತೇನೆ ಎಂದಿದ್ದಾರೆ.