ಜನಾಶೀರ್ವಾದ ಯಾತ್ರೆ ಸಮಾರೋಪದಲ್ಲಿ ಅವಘಡ- ನೆಲಕ್ಕುರುಳಿದ ಸಿದ್ದು-ರಾಗಾ ಬೃಹತ್ ಕಟೌಟ್!

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಜನಾರ್ಶೀವಾದ ಯಾತ್ರೆಯ ಸಮಾರೋಪ ಸಮಾರಂಭದ ವೇಳೆ ಭಾರಿ ಅನಾಹುತವೊಂದು ಸಂಭವಿಸಿದ್ದು, ಬೃಹತ ಕಟೌಟ್​ವೊಂದು ಮುರಿದು ಬಿದ್ದ ಪರಿಣಾಮ ಮೂವರು ಗಾಯಗೊಂಡಿದ್ದಾರೆ.

ಗಾಳಿಗೆ ಬೃಹತ್​ ಕಟೌಟ್​ ಬಿದ್ದ ಪರಿಣಾಮ ಕಟೌಟ್​ ಕೆಳಭಾಗದಲ್ಲಿ ಕುರ್ಚಿಯಲ್ಲಿ ಕೂತಿದ್ದ ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.  ಜನಾರ್ಶಿವಾದ ಯಾತ್ರೆ ಹಿನ್ನೆಲೆಯಲ್ಲಿ ಮರದ ಬೊಂಬುಗಳನ್ನು ಬಳಸಿ ಬೃಹತ್ ಕಟೌಟ್ ಹಾಕಲಾಗಿತ್ತು. ಇದಕ್ಕೆ ರಾಹುಲ್ ಗಾಂಧಿ ಹಾಗೂ ಸಿಎಂ ಸಿದ್ದರಾಮಯ್ಯನವರ ಬೃಹತ್ ಪೋಟೋ ಅಳವಡಿಸಲಾಗಿತ್ತು. ಆದರೇ ಸಮಾವೇಶ ಆರಂಭವಾಗುವುದಕ್ಕೆ ಮುನ್ನವೇ ಕಟೌಟ್​ ಉದುರಿ ಬಿದ್ದಿದ್ದು, ಜನರಲ್ಲಿ ಕೆಲಕಾಲ ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಕಟೌಟ್​ ಬೀಳುತ್ತಿದ್ದಂತೆ ಜನರು ಚೆಲ್ಲಾಪಿಲ್ಲಿಯಾಗಿ ಓಡಿ ಹೋಗಿದ್ದಾರೆ.

ಇನ್ನು ಕಟೌಟ್​ ಬಿದ್ದು ಜನರು ಬೆಚ್ಚಿಬೀಳುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಸ್ಥಳಕ್ಕೆ ತೆರಳಿ ವೀಕ್ಷಿಸಿದರು. ಇನ್ನು ಗಾಯಾಳುಗಳನ್ನು ತಕ್ಷಣ ಅಂಬುಲೆನ್ಸ್​ನಲ್ಲಿ ಬೌರಿಂಗ್​​ಗೆ ದಾಖಲಿಸಲಾಗಿದೆ. ಇನ್ನೊಂದೆಡೆ ಸಿಎಂ ಕನಸಿನ ಯಾತ್ರೆಯಾಗಿದ್ದ ಜನಾಶೀರ್ವಾದ ಯಾತ್ರೆಯ ಸಮಾರೋಪದಲ್ಲೇ ಸಿಎಂ ಕಟೌಟ್​ ಉದುರಿ ಬಿದ್ದಿರೋದು ಕಾಂಗ್ರೆಸ್​​ ನಾಯಕರಲ್ಲಿ ಒಂದು ರೀತಿ ಅಳುಕು ಮೂಡಿಸಿದೆ. ಬೆಳಗ್ಗೆ ಮಾರ್ಗರೇಟ್​ ಆಳ್ವಾ ಅಂತಿಮ ದರ್ಶನಕ್ಕೆ ತೆರಳುವ ವೇಳೆ ಕೂಡ ಸಿಎಂ ಕಾಲೆಡವಿ ಬೀಳುವಂತಾಗಿದ್ದರು. ಒಟ್ಟಿನಲ್ಲಿ ಇವೆಲ್ಲವೂ ಸಿಎಂ ಸೋಲಿನ ಸಂಕೇತವಾ ಎಂಬ ಅನುಮಾನವೂ ಜನರಿಂದ ವ್ಯಕ್ತವಾಗುತ್ತಿದೆ.