ಆರನೇ ಭಾರಿಯೂ ಗೆಲುವು ನನ್ನದೇ- ನಾಮಪತ್ರ ಸಲ್ಲಿಸಿ ವಿಶ್ವಾಸ ವ್ಯಕ್ತಪಡಿಸಿದ ಆರ್​.ಅಶೋಕ್​!

ಸತತ ಆರನೇ ಭಾರಿ ಗೆಲುವಿನ ನೀರಿಕ್ಷೆಯಲ್ಲಿರುವ ಮಾಜಿ ಡಿಸಿಎಂ ಆರ್​.ಅಶೋಕ್​ ಪದ್ಮನಾಭನಗರದಲ್ಲಿ ನಾಮಪತ್ರ ಸಲ್ಲಿಸಿದರು. ಮುಂಜಾನೆ ಕಾರ್ಯಕರ್ತರ ಸಮಾವೇಶ ನಡೆಸಿದ ಆರ್.ಅಶೋಕ್​, ಬೆಂಬಲಿಗರು ಹಾಗೂ ಕಾರ್ಯಕರ್ತರ ಜೊತೆ ಅಟಲ್ ಬಿಹಾರಿ ವಾಜಪೇಯಿ ರಂಗಮಂದಿರದಿಂದ ಪಾದಯಾತ್ರೆ ಮೂಲಕ ತೆರಳಿ ಚೆನ್ನಮ್ಮನಕೆರೆ ಅಚ್ಚುಕಟ್ಟು ಬಿಬಿಎಂಪಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.

 


ಈ ವೇಳೆ ಮಾತನಾಡಿದ ಆರ್.ಅಶೋಕ್​, ಪದ್ಮನಾಭ ನಗರದ ಅಭಿವೃದ್ಧಿಗೆ ನಾನು ಸಾಕಷ್ಟು ಕೆಲಸ ಮಾಡಿದ್ದೇನೆ. ಆಸ್ಪತ್ರೆ, ರಸ್ತೆ,ಪಾರ್ಕ್​ ಎಲ್ಲವನ್ನು ನಿರ್ಮಿಸಲಾಗಿದೆ. ನನ್ನ ಅಭಿವೃದ್ಧಿ ಕಾರ್ಯಗಳು ಹಾಗೂ ಅಮಿತ್ ಶಾ-ಮೋದಿಯವರನ್ನು ಬೆಂಬಲಿಸಿ ಈ ಕ್ಷೇತ್ರದ ಜನರು ನನ್ನನ್ನು ಬೆಂಬಲಿಸುತ್ತಾರೆ ಎಂದು ವಿಶ್ವಾಸವಿದೆ ಎಂದರು. ಪದ್ಮನಾಭನಗರ ವಾರ್ಡ್‌ ನ ಶೋಭಾ ಆಂಜಿನಪ್ಪ. ಕುಮಾರಸ್ವಾಮಿ ಬಡಾವಣೆ ವಾರ್ಡ್ ನ ಮಾಜಿ ಉಪಮಹಾ ಪೌರ ಎಲ್.ಶ್ರೀನಿವಾಸ್.ಚಿಕ್ಕಲ್ಲಸಂದ್ರ ವಾರ್ಡ್ ನ ಸುಪ್ರಿಯಾ ಶೇಖರ್ ಸೇರಿ ಕ್ಷೇತ್ರ 7 ಪಾಲಿಕೆ ಸದಸ್ಯರು ಸಾಥ್​ ನೀಡಿದರು. ಪಾಲಿಕೆ ವಿಪಕ್ಷ ನಾಯಕ ಪದ್ಮನಾಭರೆಡ್ಡಿ,ಮುಖಂಡ ಜಗ್ಗೇಶ್​ ಮತ್ತಿತರರು ಸಾಥ್​​ ನೀಡಿದರು.