ಮತ್ತೆ ಎಡವಿದ ಸಿಎಂ- ಸೋಲಿನ ಮುನ್ಸೂಚನೆ ಸಿಗ್ತಿದ್ಯಾ ಸಿಎಂಗೆ?

ರಾಜ್ಯದಲ್ಲಿ ಚುನಾವಣೆಗೆ ದಿನಗಣನೆ ಆರಂಭವಾದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯನವರಿಗೆ ಎಲ್ಲ ಅಪಶಕುನಗಳೇ ಎದುರಾಗ್ತಿವೆ.

ad

ಹೌದು ಎಲೆಕ್ಷನ್ ಹತ್ರವಾಗ್ತಿದ್ದಂತೆ ಸಿ ಎಂ ಸಿದ್ದರಾಮಯ್ಯ ಯಾಕೋ ಪದೇ ಪದೇ ಎಡವಿ ಬೀಳ್ತಿದ್ದಾರೆ. ಮೊನ್ನೆ ದೇವಸ್ಥಾನವೊಂದರ ಘಂಟೆ ಬಾರಿಸಲು ಹೋಗಿ ಎಡವಿದ್ದ ಸಿಎಂ, ಇವತ್ತು ಮತ್ತೆ ಎಡವಿದ್ದಾರೆ. ಮಾರ್ಗರೇಟ್​ ಆಳ್ವ ಪತಿ ನಿರಂಜನ್ ಆಳ್ವ ಅಂತಿಮ ದರ್ಶನ ಪಡೆಯಲು ಬೆಂಗಳೂರಿನ ಆರ್​​ಎಂವಿ ಎಕ್ಸ್​ಟೆನ್ಷನ್​​​ನಲ್ಲಿರುವ ಮಾರ್ಗರೇಟ್ ನಿವಾಸಕ್ಕೆ ರಾಹುಲ್​​ ಗಾಂಧಿ ಜತೆ ಸಿದ್ದರಾಮಯ್ಯ ತೆರಳಿದ್ದರು. ಈ ವೇಳೆ ಕಾರಿನಿಂದ ಇಳಿದು ಮುಂದೆ ಸಾಗ್ತಿದ್ದಾಗ ಎಡವಿದ್ರು.

ಸಿಎಂ ಎಡವ್ತಾ ಇದ್ದಂತೆ ಅಲ್ಲಿದ್ದ ಕೆಲ ನಾಯಕರು ಕೆಳಕ್ಕೆ ಬೀಳದಂತೆ ಸಿಎಂರನ್ನು ಹಿಡಿದ್ರು.ಮೊನ್ನೆಯಷ್ಟೇ ಮೈಸೂರು ಕಾರ್ಯಕ್ರಮದ ವೇಳೆ ಸಿಎಂ ಸಿದ್ದರಾಮಯ್ಯ ಗಂಟೆ ಬಾರಿಸಲು ಹೋಗಿ ಎಡವಿ ಬೀಳೋದಿಕ್ಕಾಗಿದ್ದರು. ಅಷ್ಟೇ ಇಂದು ಸಂಜೆ ಜನಾಶಿರ್ವಾದ ಯಾತ್ರೆ ವೇಳೆ ಸಿಎಂ ಸಿದ್ದರಾಮಯ್ಯ ಬೃಹತ್ ಕಟೌಟ್​ವೊಂದು ಉರುಳಿಬಿದ್ದಿದ್ದು, ಯಾಕೋ ಸಿಎಂಗೆ ಸೋಲಿನ ಮುನ್ಸೂಚನೆ ಲಭ್ಯವಾಗ್ತಿದ್ಯಾ ಅನ್ನೋ ಶುರುವಾಗಿದೆ.