ಕಾಂಗ್ರೆಸ್ ಗೆ ಬಿಗ್ ರಿಲೀಫ್ !! ಸ್ಪೀಕರ್ ತೀರ್ಮಾನಕ್ಕೆ ಮದ್ಯ ಪ್ರವೇಶಿಸಲ್ಲ ಎಂದ ಹೈಕೋರ್ಟ್ ! ವಿಚಾರಣೆ ಮುಂದೂಡಿಕೆ !!

ನಾಳೆ ನಡೆಯುವ ರಾಜ್ಯ ಸಭಾ ಚುನಾವಣೆಯ ಸಂಬಂಧ ಕಾಂಗ್ರೆಸ್ ಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ. ಕಾಂಗ್ರೆಸ್ ನ ಮೂರನೇ ಅಭ್ಯರ್ಥಿ ಜಿ ಸಿ ಚಂದ್ರಶೇಖರ್ ಗೆಲುವಿಗೆ ಪೂರಕವಾಗಿದ್ದ ಜೆಡಿಎಸ್ ನ ಏಳು ಬಂಡಾಯ ಶಾಸಕರು ನಾಳೆ ಮತಚಲಾವಣೆ ಮಾಡಬಹುದಾಗಿದೆ.

ಕಳೆದ ರಾಜ್ಯಸಭಾ ಚುನಾವಣೆಯ ಸಂಧರ್ಭ ವಿಪ್ ಉಲ್ಲಂಘಿಸಿದರು ಎಂದು ಸ್ಪೀಕರ್ ಗೆ ದೂರು ನೀಡಿ ಏಳು ಶಾಸಕರನ್ನು ಅನರ್ಹಗೊಳಿಸುವಂತೆ ಕೋರಿತ್ತು. ಕಳೆದ ಎರಡು ವರ್ಷಗಳಿಂದ ಬಾಕಿ ಉಳಿದುಕೊಂಡಿದ್ದ ಪ್ರಕರಣ ನಾಳೆ ನಡೆಯುವ ರಾಜ್ಯಸಭಾ ಚುನಾವಣೆ ಹಿನ್ನಲೆಯಲ್ಲಿ ಮಹತ್ವ ಪಡೆದುಕೊಂಡಿತ್ತು. ಸ್ಪೀಕರ್ ಏಳೂ ಶಾಸಕರು, ದೂರುದಾರ ಶಾಸಕ ಬಿಬಿ ನಿಂಗಯ್ಯ, ಎನ್ ಸಿ ಬಾಲಕೃಷ್ಣ ರ ಪರ ವಿರೋಧ ವಾದ ವಿವಾದ ಆಲಿಸಿ ತೀರ್ಪು ಕಾಯ್ದಿರಿಸಿದ್ದರು. ಸ್ಪೀಕರ್ ತೀರ್ಪು ಕಾಯ್ದಿರಿಸಿದ್ದರಿಂದ ಈ ಬಾರಿಯ ರಾಜ್ಯಸಭಾ ಚುನಾವಣೆಯಲ್ಲೂ ವಿಪ್ ಉಲ್ಲಂಘಿಸಿ ಜೆಡಿಎಸ್ ಬಂಡಾಯ ಶಾಸಕರು ಕಾಂಗ್ರೆಸ್ ಗೆ ಮತ ಚಲಾಯಿಸುತ್ತಾರೆ ಎಂದು ಅರಿತು ಜೆಡಿಎಸ್ ಹೈಕೋರ್ಟ್ ಮೆಟ್ಟಿಲೇರಿತ್ತು. ಹೈಕೋರ್ಟ್ ನ್ಯಾಯಾಧೀಶ ರಾಘವೇಂದ್ರ ಚೌಹಾನ್ ರ ಏಕ ಸದಸ್ಯ ಪೀಠ ಜೆಡಿಎಸ್ ರಿಟ್ ಪಿಟಿಷನ್ ವಿಚಾರಣೆ ನಡೆಸಿ, ಮೊದಲ ದಿನ ಶೀಘ್ರ ತೀರ್ಪು ನೀಡುವಂತೆ ಸ್ಪೀಕರ್ ಗೆ ಅಡ್ವಕೇಟ್ ಜನರಲ್ ಮೂಲಕ ಸಲಹೆ ನೀಡಿತ್ತು. ನಿನ್ನೆ ಮತ್ತೆ ವಿಚಾರಣೆ ನಡೆಸಿದ ಹೈಕೋರ್ಟ್, ತನಗೆ ಸ್ಪೀಕರ್ ತೀರ್ಪಿಗೆ ಮಧ್ಯ ಪ್ರವೇಶಿಸುವ ಅಧಿಕಾರ ಇಲ್ಲ.

ಆದರೆ ಈ ರಿಟ್ ಪಿಟಿಷನ್ ಬಗ್ಗೆ ಸ್ಪೀಕರ್ ಅಭಿಪ್ರಾಯ ಕೇಳಲು ಹೈಕೋರ್ಟ್ ಬಯಸುತ್ತದೆ. ಅದಕ್ಕಾಗಿ ಸ್ಪೀಕರ್ ಅಭಿಪ್ರಾಯ ಕೇಳಿ ತುರ್ತು ನೋಟಿಸ್ ಜಾರಿ ಮಾಡಿ. ಅದು ಹ್ಯಾಂಡ್ ಸಮನ್ಸ್ ಆಗಿರಲಿ ಎಂದು ಹೇಳಿತ್ತು. ಇಂದು ಬೆಳಿಗ್ಗೆ 11 ಗಂಟೆಗೆ ದೂರುದಾರ ವಕೀಲರು ಹೈಕೋರ್ಟ್ ನೋಟಿಸನ್ನು ಸ್ಪೀಕರ್ ಗೆ ತಲುಪಿಸಿದ್ದು, ಸ್ಪೀಕರ್ ತನ್ನ ತೀರ್ಪು ಪ್ರಕಟಕ್ಕೆ ಕಾಲ ನಿಗಧಿಗೊಳಿಸಲಾಗಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇಂದು ಮದ್ಯಾಹ್ನ ವಿಚಾರಣೆ ನಡೆಸಿದ ಹೈಕೋರ್ಟ್, ಸ್ಪೀಕರ್ ಕಾರ್ಯಕಲಾಪದಲ್ಲಿ ನಾವು ಕೈ ಹಾಕುವಂತಿಲ್ಲ. ಆದ್ದರಿಂದ ವಿಚಾರಣೆಯನ್ನು ಎಪ್ರಿಲ್ 2 ಕ್ಕೆ ಮುಂದೂಡಲಾಗಿದೆ. ನಾಳೆ ನಡೆಯುವ ರಾಜ್ಯಸಭಾ ಚುನಾವಣಾ ಫಲಿತಾಂಶದ ಬಗ್ಗೆ ತಕರಾರರು ಇದ್ದರೆ ಅದು ನಮಗೆ ಸಂಬಂಧಿಸಿದ್ದಲ್ಲ. ಸೂಕ್ತ ವೇದಿಕೆಯಲ್ಲಿ ಪ್ರಶ್ನಿಸಿ ಎಂದಿದ್ದಾರೆ. ಹೈಕೋರ್ಟ್ ನಡೆ ಬಂಡಾಯ ಾಶಾಸಕರ ಮತಚಲಾವಣೆ ಮತ್ತು ಕಾಂಗ್ರೆಸ್ ಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.