“ಚುನಾವಣಾ ಕುರುಕ್ಷೇತ್ರ” 2018 – ಅರಬಾವಿ (ಬೆಳಗಾವಿ ಜಿಲ್ಲೆ) !!

ಅರಬಾವಿ ವಿಧಾನಸಭಾ ಕ್ಷೇತ್ರ:

ad


ಇವತ್ತಿನ ಕುರುಕ್ಷೇತ್ರದಲ್ಲಿ ನಾವು ಹೇಳ್ತಿರೋದು ಅರಬಾವಿ ವಿಧಾನಸಭಾ ಕ್ಷೇತ್ರದ ಬಗ್ಗೆ. ಪ್ರಸ್ತುತು ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ ಇಲ್ಲಿನ ಶಾಸಕರಾಗಿದ್ದಾರೆ. ಹಾಗಿದ್ರೆ ಈ ಬಾರಿಯ ಎಲೆಕ್ಷನ್ ಗೆ ಕ್ಷೇತ್ರ ಹೇಗೆ ಸಜ್ಜಾಗಿದೆ. ಇಲ್ಲಿನ ರಣಕಣದ ಗ್ರೌಂಡ್ ರಿಪೋರ್ಟ್ ಇಲ್ಲಿದೆ ನೋಡಿ.

ಅರಬಾವಿ ವಿಧಾನಸಭಾ ಕ್ಷೇತ್ರ. ಬೆಳಗಾವಿ ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದು. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನಲಲ್ಲಿ ಬರೋ ಅರಬಾವಿ ವಿಧಾನಸಭಾ ಕ್ಷೇತ್ರವನ್ನು ಸಕ್ಕರೆ ನಾಡು ಅಂತಾನೂ ಕರಿತಾರೆ. ಯಾಕಂದ್ರೆ ಬೆಳಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು ಕಬ್ಬು ಬೆಳೆಯೋ ಪ್ರದೇಶವೇ ಈ ಅರಬಾವಿ. ಇನ್ನು ಕೃಷಿಕರು ಅತೀ ಹೆಚ್ಚು ಇದ್ದು ರೈತಾಪಿ ವರ್ಗದ ಆರ್ಥಿಕ ಬಲಾಢ್ಯರೇ ಇಲ್ಲಿ ಜಾಸ್ತಿ ಇದ್ದಾರೆ. ಇನ್ನುಳಿದಂತೆ ಇತಿಹಾಸ ಪ್ರಸಿದ್ಧವಾಗಿರೋ  ಅರಬಾವಿ ಮಠ, ದುರುಗುಂಡೇಶ್ವರ ಮಠ ಇದೇ ಕ್ಷೇತ್ರದಲ್ಲಿದೆ. ಇನ್ನು ರಾಜಕೀಯ ವಿಚಾರ ಹೇಳೋದಾದ್ರೆ ಪ್ರಸ್ತುತ ಬಾಲಚಂದ್ರ ಜಾರಕಿಹೊಳಿ ಇಲ್ಲಿನ ಶಾಸಕರು. ಪಕ್ಷಕ್ಕಿಂತ ಹೆಚ್ಚಾಗಿ ವ್ಯಕ್ತಿ ಪ್ರಾಬಲ್ಯ ಇರೋ ಕ್ಷೇತ್ರಗಳಲ್ಲಿ ಇದೂ ಕೂಡಾ ಒಂದು. ಆದ್ರೂ ರಾಜಕೀಯವಾಗಿ ಅತೀ ಹೆಚ್ಚು ಲೀಡ್ ನಿಂದ ಗೆದ್ದು ಬರುವ ಬಿಜೆಪಿ ಶಾಸಕ ಯಾರಾದ್ರೂ ಇದ್ರೆ ಅದು ಪ್ರಸ್ತುತ ಬಾಲಚಂದ್ರ ಜಾರಕಿಹೊಳಿ ಅನ್ನೋ ಮಾತಿದೆ.  ಇಲ್ಲಿನ ಇನ್ನಷ್ಟು ರಾಜಕೀಯ ವಿತಚಾರಗಳನ್ನು ಹೇಳೋ ಮೊದಲು 2013ರ ಮತಬರಹ ನೋಡೋಣ.

 

ಇದು 2013ರ ಮತಬರಹ. ಬಿಜೆಪಿಯ ಬಾಲಚಂದ್ರ ಜಾರಕಿಹೊಳಿ ಅವ್ರು 99283 ಮತಗಳನ್ನು ಪಡೆದು ಗೆದ್ದು ಶಾಸಕರಾದ್ರು. ಇನ್ನು ಕಾಂಗ್ರೆಸ್ ನ ಉಟಗಿ ರಾಮಪ್ಪ ಕರೆಪ್ಪ ಕೇವಲ 24062 ಮತಗಳನ್ನು ಪಡೆದು ಭಾರಿ ಅಂತರದಿಂದ ಸೋತ್ರು.

ಅರಬಾವಿ ವಿಧಾನಸಭಾ ಕ್ಷೇತ್ರ ರಾಜಕೀಯವಾಗಿ ತೀರಾ ಜಿದ್ದಾ ಜಿದ್ದಿನ ಕಣ ಅಲ್ದೇ ಇದ್ರೂ ಇಡೀ ರಾಜ್ಯದಲ್ಲೇ ಅತೀ ಹೆಚ್ಚು ಲೀಡ್ ನಿಂದ ಗೆದ್ದಿರೋ ಶಾಸಕರು ಅಂತಾ ಈ ಕ್ಷೇತ್ರದ ಶಾಸಕರ ಬಗ್ಗೆ ಹೆಮ್ಮೆ ಇದೆ. ಅರಬಾವಿ ಕ್ಷೇತ್ರಕ್ಕೆ ತಾಲೂಕು ಇರ್ಲಿಲ್ಲ ಆದ್ರೆ  ಸ್ಥಳೀಯ ಶಾಸಕ ಬಾಲಚಂದ್ರ ಜಾರಕಿಹೊಳಿ ಸತತ ಪ್ರಯತ್ನದಿಂದ ಮೂಡಲಗಿ ತಾಲೂಕಾಗಿ ಅರಬಾವಿ ಗೆ ಕಳೆ ತಂದುಕೊಟ್ಟಿದೆ. ಹಾಗೇನೇ ಅತೀ ಹೆಚ್ಚು ಮೊರಾರ್ಜಿ ದೇಸಾಯಿ ಶಾಲೆಯನ್ನು ಹೊಂದಿರೋ ಈ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಎದ್ದು ಕಾಣ್ತಿದೆ. ಬಹುಷಃ ಇಡೀ ರಾಜ್ಯದಲ್ಲೇ ಒನ್ ಸೈಡ್ ಎಲೆಕ್ಷನ್ ಅಂತಾ ಕರೆದ್ರೆ ಅದು ಅರಬಾವಿ ಕ್ಷೇತ್ರದಲ್ಲಿ ಮಾತ್ರ. ಹಾಗಾಗಿ ಈ ಬಾರಿಯ ಎಲೆಕ್ಷನ್ ಮತ್ತೊಮ್ಮೆ ಒನ್ ಸೈಡ್ ಆಗೋ ಎಲ್ಲಾ ಚಾನ್ಲ್ ಗಳಿವೆ. ಹಾಗಿದ್ರೆ ಈ ಬಾರಿ ಇಲ್ಲಿಂದ ಯಾರ್ಯಾರು ಕಣದಲ್ಲಿರ್ತಾರೆ ನೋಡೋಣ ಬನ್ನಿ

ಬಿಜೆಪಿ ಅಭ್ಯರ್ಥಿ:

ಜಾರಕಿಹೊಳಿ ಕುಟುಂಬ ಅಂದ್ರೆ ಬೆಳಗಾವಿ ಜಿಲ್ಲೆಯ ರಾಜಕೀಯ ದಿಕ್ಸೂಚಿಗಳು ಅಂತಾನೆ ಕರೆಯುತ್ತಾರೆ. ಪಕ್ಷ ಜಾಥಿ ಧರ್ಮ ಅಲ್ದೇ ಸಾಮಾಜಿಕವಾಗಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. 1992 ರಲ್ಲಿ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಚೇರ್ಮೇನ್ ಆಗಿ ಜನಸೇವೆಗೆ ಇಳಿದ ಬಾಲಚಂದ್ರ ಜಾರಕಿಹೊಳಿ 12 ವರ್ಷಗಳ ಸತತ ಜನಸೇವೆಯ ಪರಿಶ್ರಮವಾಗಿ  2004ರಲ್ಲಿ ಶಾಸಕರಾಗೋ ಮುಖಾಂತರ ವಿಧಾನಸಭೆಗೆ ಆಯ್ಕೆಯಾದ್ರು. ಸ್ವಭಾವತಃ ಸಜ್ಜನರಾಗಿರೋ ಬಾಲಚಂದ್ರ ಜಾರಕಿಹೊಳಿ ನಾಲ್ಕು ಬಾರಿ ಸತತವಾಗಿ ಗೆಲುವಿನ ನಗೆ ಬೀರಿದ್ದಾರೆ. ಮಂತ್ರಿಯೂ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಒಂದು ಮತ ಕ್ಷೇತ್ರದಲ್ಲಿ ಸತತವಾಗಿ 4 ಬಾರಿ ಶಾಸಕರಾಗ ಬೇಕೆಂದ್ರೆ ಅದು ರಾಜಕೀಯದಲ್ಲಿ ತುಂಬಾ ಕಷ್ಟ ಸಾಧ್ಯ. ಆದ್ರೂ  75 ಸಾವಿರಕ್ಕೂ ಹೆಚ್ಚು ಅಂತರದಿಂದ ಗೆಲುವನ್ನು ಸಾಧಿಸುವ ಸಾಮರ್ಥ್ಯ ಒಬ್ಬ ರಾಜಕೀಯ ಮುಖಂಡನಿಗೆ ಇದೆ ಅಂದ್ರೆ ಅವ್ರು ನಿಜವಾಗಿಯೂ ಸಮಾಜ ಸೇವಕನೇ ಸರಿ. ಬಾಲಚಂದ್ರ ಜಾರಕಿಹೊಳಿ ರಾಮಲಿಂಗೇಶ್ವರ ಏತ ನೀರಾವರಿ ಯೋಜನೆ, ಮೊರಾರ್ಜಿ ದೇಸಾಯಿ ಶಾಲೆಗಳ ಸ್ಥಾಪನೆ, ಶಾಲಾ ಕಾಲೇಜುಗಳ ಸ್ಥಾಪನೆ, ಮೂಲಭೂತ ಸೌಕರ್ಯಗಳ ಹರಿಕಾರನಾಗಿ ಹಲವಾರು ಹತ್ತಾರು ಕಾರ್ಯಕ್ರಮಗಳನ್ನು ಕ್ಷೇತ್ರದಲ್ಲಿ ಮಾಡ್ತಿದ್ದಾರೆ.ಶಾಸಕರ ಕನಸಿನ ಕೂಸಾದ 126 ಕೋಟಿ ವೆಚ್ಚದ ಕಲ್ಮಡ್ಡಿ ಏತ ನೀರಾವರಿ ಯೋಜನೆ ಪ್ರಾಜೆಕ್ಟ್ ರಿಪೋರ್ಟ್ ರೆಡಿಯಾಗಿದ್ದು ಕಾಮಗಾರಿ ಹಿಂದೆ ಶಾಸಕರಿದ್ದಾರೆ. ಅರಬಾವಿ ಮತ ಕ್ಷಏತ್ರವನ್ನು ಸಂಪೂರ್ಣ ನೀರಾವರಿ ಪ್ರದೇಶಮಾಜಡೋ ಗುರಿ ಹೊಂದಿರಇವ್ರು ಇಡೀ ರಾಜ್ಯದಲ್ಲಿ 2 ನೇ ಅತೀ ಹೆಚ್ಚು ಮತಗಳ ಅಂತರಿಂದ ಆಯ್ಕೆಗೊಂಡ ಬಿಜೆಪಿ ಶಾಸಕರಾಗಿ ಗಮನ ಸೆಳೆದಿದ್ದಾರೆ.ಇನ್ನು  ಶಿಕ್ಷಣ ಕ್ಷೇತ್ರಕ್ಕೆ ಪ್ರಮುಖ ಪ್ರಾಶಸ್ಯ ಕೊಚ್ಚಿರೋ ಇವ್ರು 19 ಪ್ರೌಢಶಾಲೆಗಳನ್ನು ಪ್ರಾರಂಭಿಸಿದ್ದಾರೆ.ಡಾ. ಅಂಬೇಡ್ಕರ್ ,ವಾಜಪೇಯಿ ವಸತಿ ಶಾಸಲೆ ಸೇರಿದಂತೆ 13 ವಸತಿ ಶಾಲೆಗಳನ್ನು ಮಂಜೂರು ಮಾಡಿಸಿದ ಕೀರ್ತಿ ಇವ್ರಿಗೆ ಸಲ್ಲುತ್ತದೆ. ಬಹುಕೋಟಿ ವೆಚ್ಚದ ಜತ್ತ- ಜಾಂಬೋಟ ರಸ್ತೆ ಅಭಿವೃದ್ಧಿ, ರಸ್ತೆ, ನೀರು, ಸೇರಿದಂತೆ ಮೂಲಭೂತ ಸೌಕರ್ಯಗಳ ಹರಿಕಾರರಂತೆ ಕಾರ್ಯ ನಿರತರಾಗಿದ್ದಾರೆ. ಬಾಲಚಂದ್ರ ಜಾರಕಿಹೊಳಿ  ಸಾಧನೆಗಳಲ್ಲಿ ಮೂಡಲಗಿ ಪಟ್ಟಣವನ್ನು ತಾಲೂಕನ್ನಾಗಿ ಮಾಡಿರೋದ್ರಲ್ಲಿ ಇವ್ರ ಪರಶ್ರಮ ಎದ್ದು ಕಾಣುತ್ತದೆ. ಸ್ಥಳೀಯ ಜನತೆ ಹೊಸ ತಾಲೂಕನ್ನು ಪಡೆದು ಅಭಿವೃದ್ಧಿ ಕಂಡು ಬಿಜೆಪಿ ಗೆ ಹಲವಾರು ಜನ ಬೆಂಬಲದೊದಿಗೆ ಜಯ ಘೋಷ ಹಾಕಿದ್ದಾರೆ. ಅದ್ರ ಫಲವಾಗಿ ಕ್ಷೇತ್ರದ ಸಂಪೂರ್ಣ ಸ್ಥಳೀಯ ಸಂಸ್ಥೆಗಳು ಶಾಸಕರ ನೇತೃತ್ವದಲ್ಲಿ ಗೆದ್ದು ಬೀಗುತ್ತಿವೆ. ಇಡೀ ಕ್ಷೇತ್ರವನ್ನೇ ತನ್ನ ಅಭಿವೃದ್ಧಿಯ ದೃಷ್ಟಿಯಿಂದ  ನೋಡುತ್ತಿರುವ ಶಾಸಕರು ಈ ಬಾರಿ ಕಡಮೆ ಅಂದ್ರೂ 1 ಲಕ್ಷ ಅಂತರದಿಂದ ಗೆಲ್ಲ ಬೇಕೆಂಬ ಮತದಾರರ ಕೂಗನ್ನು ಹುಸಿ ಮಾಡುವುದಿಲ್ಲ ಎಂಬಂತೆ ಈಗಾಗಲೇ ಕ್ಷೇತ್ರದಲ್ಲಿ ಠಿಕಾಣಿ ಹೂಡಿದ್ದಾರೆ.

ಕೈ ಹಿಡಿಯೋರ್ಯಾರು?

ಕಳೆದ ಭಾರಿ ಕಾಂಗ್ರೆಸ್ಸಿನಿಂದ ಕಣದಲ್ಲಿದ್ದ ರಮೇಶ್ ಉಟಗಿ ಮತ್ತೆ ಕಣಕ್ಕಿಳಿಯಲು ಪ್ರಯತ್ನ ನಡೆಸಿದ್ದಾರೆ. ಸ್ಥಳೀಯ ಕಾಂಗ್ರೆಸ್ ಮುಂಖಡರಾಗಿರೋ ಇವ್ರು ಸಿದ್ಧರಾಮಯ್ಯನವರ ಜನಪರ ಕಾರ್ಕ್ರಮಗಳನ್ನು ಪ್ರಚಾರ ಮಾಡೋದ್ರ ಮುಖಾಂತರ ಮತ ಕೇಳಲು ಹೊರಟಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಸಂಪೂರ್ಣ ಹತೋಟಿ ಕಳೆದುಕೊಂಡಿರುವ ಕಾಂಗ್ರೆಸ್  ಈ ಕ್ಷೇತ್ರದಲ್ಲಿ ಬಿಜೆಪಿ ಗೆ ಸೆಡ್ಡು ಹೊಡೆಯೋದು ತಂಬಾನೆ ಕಷ್ಟ ಸಾಧ್ಯ  ಅನ್ನೋ ಮಾತೇ ಕೇಳಿ ಬರ್ತಿದೆ..

ತೆನೆ ಹೊರೋದ್ಯಾರು?

ಈ ಬಾರಿ ಜೆಡಿಎಸ್ ನಿಂದ ಚೆನ್ನಪ್ಪ ವಗ್ಗನವರ್ ಕಣಕ್ಕಿಳಿಯೋದಕ್ಕೆ ಮುಂದಾಗಿದ್ದಾರೆ. ಸ್ಥಳೀಯ ಮುಖಂಡ ಹಾಗೂ ಉಪ್ಪಾರ ಸಮುದಾಯವರಾದ ಇವ್ರು  ಕುಮಾರ ಸ್ವಾಮಿ ಅವ್ರ ಶಿಷ್ಯ. ಉಪ್ಪಾರ ಜನಾಂಗದ ಮತಗಳನ್ನು ನಂಬಿ, ಕ್ಷೇತ್ರದಲ್ಲಿ ಜೆಡಿಎಸ್ ಹವಾ ಇಲ್ಲದೇ ಇದ್ರೂ ಕೂಡಾ ನಾಮಕವಾಸ್ಥೆ ಗಾದ್ರೂ ಜೆಡಿಎಸ್ ಅಭ್ಯರ್ಥಿ ಇರಬೇಕು ಅನ್ನೋ ಕಾರಣಕ್ಕೆ  ಇಲ್ಲಿನ ಅಭ್ಯರ್ಥಿಯಾಗ್ತಿದ್ದಾರೆ.

ಪಕ್ಷೇತರ ಅಭ್ಯರ್ಥಿ:

ಇನ್ನುಳಿದಂತೆ ಪಕ್ಷೇತರರಾಗಿ ಆರ್ ಟಿ ಐ ಕಾರ್ಯಕರ್ತ ಭೀಮಪ್ಪ ಗಡಾದ್ ಅವ್ರು ಕಣಕ್ಕಿಳಿತಾರೆ ಅನ್ನೋ ಮಾತು ಕೂಡಾ ಕೇಳಿ ಬರ್ತಿದೆ. ವಿಎಸ್ ಕೌಜಲಗಿ ಅವ್ರ ಪರಮಾಪ್ತರಾಗಿರೋ ಇವ್ರು ಹೊರಾಟದ ಮುಖಾಂತರ ಗುರುತಿಸಿಕೊಂಡಿದ್ದಾರೆ. ರಾಜಕೀಯ ವಾಗಿ ಈ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಇನ್ನು ಕ್ಷೇತ್ರದಲ್ಲಿ ಒಟ್ಟು 223000 ಮತದಾರರಿದ್ದಾರೆ. 34000 ಉಪ್ಪಾರ, 44000 ಕುರುಬ ಹಾಗೂ  63000 ಲಿಂಗಾಯತರಿದ್ದಾರೆ. ಹಾಗಾಗಿ ಲಿಂಗಾಯತ ಮತದಾರರು ಇಲ್ಲಿ ನಿರ್ಣಾಯಕರು. ಇನ್ನು ರಾಜ್ಯದಲ್ಲಿ 5 ವರ್ಷಗಳ ವರೆಗೆ ಅಧಿಕಾರ ನಡೆಸಿದ ಕಾಂಗ್ರೇಸ್ ಸರಕಾರ ಸಿದ್ದರಾಮಯ್ಯ ನೇತೃತ್ವದಲ್ಲಿ ಅನೇಕ ರಾಜಕೀಯ ದಾಳಗಳನ್ನು ಉರುಳಿಸಿದೆ. ಸಾಕಷ್ಟು  ಕಡೆ ಯಸಸ್ಸು ಕಂಡಿದೆ. ಆದ್ರೆ ಅರಭಾವಿ ಕ್ಷೇತ್ರಲ್ಲಿ ಮಾತ್ರ ಸಿದ್ದರಾಮಯ್ಯ ಅವರಿಗೆ ಬಾಲಚಂದ್ರ ಜಾರಕಿಹೊಳಿಯವರಿಗೆ ಸರಿ ಸಮನಾದ ಕಾಂಗ್ರೇಸ್ ಲೀಡರನನ್ನು ಬೆಳೆಸಲು ಸಾದ್ಯವಾಗಲಿಲ್ಲ. ಹೀಗಾಗಿ ಇದು ಇಲ್ಲಿನ ಕಾಂಗ್ರೇಸ್ ಗೆಲುವಿಗೆ ಹಿನ್ನಡೆಯಾಗಿದೆ. ಹಾಗಾಗಿ ಮತ್ತೊಮ್ಮೆ ಬಿಜೆಪಿ ಇಲ್ಲಿ ಗೆಲ್ಲೋ ಮುನ್ಸೂಚನೆ ಸಿಗ್ತಾ ಇದೆ.

ಕ್ಷೇತ್ರದ 6 ಜಿಲ್ಲಾ ಪಂಚಾಯತ್ ಗಳಲ್ಲಿ 5 ರಲ್ಲಿ ಬಿಜೆಪಿ, 3 ಪಟ್ಟಣ ಪಂಚಾಯಿತಿಲ್ಲಿ 3 ರಲ್ಲೂಬಿಜೆಪಿ. 1 ಪುರಸಭೆಯಲ್ಲಿ ಬಿಜೆಪಿ 34 ಗ್ರಾಮ ಪಂಚಾಯಿತಿ ಹಾಗೂ ತಾ ಪಂ ಗಳಲ್ಲಿ ಬಿಜೆಪಿ ಗೆಲ್ಲೋ ಮೂಲಕ ಸರ್ವಂ ಬಿಜೆಪಿ ಮಯಂ ಆಗಿದೆ. ಬಾಲಚಂದ್ರ ಜಾರಕಿಹೊಳಿ ಬೆಳಗಾವಿ ಜಿಲ್ಲೆಯ ಪ್ರಭಾವಿ ನಾಯಕ. ಯಡಿಯೂರಪ್ಪನವರ ಅಚ್ಚು ಮೆಚ್ಚಿನ ಹಿರಿಯ ರಾಜಕಾರಣಿ. ಕ್ಷೇತ್ರವನ್ನು ಭದ್ರವಾಗಿ ಉಳಿಸಿಕೊಂಡಿರುವ ಅಭಿವೃದ್ಧಿ ಪರ ಶಾಸಕ. ಯಾವುದೇ ಕಾಂಟ್ರೋವರ್ಸಿ ಇಲ್ಲದೆ ಜನರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವ ಬಾಲಚಂದ್ರ ಜಾರಕಿಹೊಳಿ  ಅವ್ರನ್ನು ಜನ ಹೊಗಳ್ತಿದ್ದಾರೆ. ಅಭಿವೃದ್ಧಿಗೆ ಮತ ನೀಡಿದ್ದಾರೆ. ಮತ್ತೆ ಮುಂದಿನ ಬಾರಿ ಬಿಜೆಪಿ ಅದಿಕಾರಕ್ಕೆ ಬಂದ್ರೆ ಜಾರಕಿಹೊಳಿ ಪ್ರಭಾವಿ ಮಂತ್ರಿ ಆಗ್ತಾರೆ. ಕ್ಷೇತ್ರ ಮತ್ತಷ್ಟು ಅಭಿವೃದ್ಧಿಯಾಗತ್ತೆ ಅನ್ನೋ ಕಾರಣಕ್ಕೆ ಈ ಬಾರಿ ಬಿಜೆಪಿಯ ಗೆಲ್ಲೋದ್ರಲ್ಲಿ ಅನುಮಾನ ಇಲ್ಲ. ಇನ್ನು ನೆಪ ಮಾತ್ರಕ್ಕೆ ಅಭ್ಯರ್ಥಿಗಳಾಗುವ ಅನ್ಯ ಪಕ್ಷಗಳು ಸವಾಲಿನ ಕಡೆ ಸುಳಿವೂ ಕೊಟ್ಟಿಲ್ಲ.