“ಚುನಾವಣಾ ಕುರುಕ್ಷೇತ್ರ” 2018 – ಪುತ್ತೂರು!!

ಪುತ್ತೂರು ವಿಧಾನಸಭಾ ಕ್ಷೇತ್ರ:

ad

ಈಗ ನಾವು ಹೇಳೋದಕ್ಕೆ ಹೊರಟಿರೋ ವಿಧಾನಸಭಾ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರ. ಕಳೆದ ಹಲವಾರು ವರ್ಷಗಳಿಂದ ಬಿಜೆಪಿ ಭದ್ರಕೋಟೆಯಾಗಿದ್ದ ಈ ಕ್ಷೇತ್ರದಲ್ಲಿ  ಕಳೆದ ಬಾರಿ ಕಾಂಗ್ರೆಸ್  ವಿಜಯ ಪತಾಕೆ ಹಾರಿಸಿತ್ತು.ಕೆಲ ದಿನಗಳ ಹಿಂದಷ್ಟೇ ಕುರುಕ್ಷೇತ್ರದಲ್ಲಿ ನಾವು ಇಲ್ಲಿನ ರಾಜಕೀಯ ಚಿತ್ರಣದ ಬಗ್ಗೆ ಹೇಳಿದ್ವಿ. ಆದ್ರ ೀಗ ಮತ್ತೊಂದಷ್ಟು ಬೆಳವಣಿಗೆಗಳು ಇಲ್ಲಾಗಿರೋದ್ರಿಂದ ಅದ್ರ ಗ್ರೌಂಡ್ ರಿಪೋರ್ಟ್ ನ್ನು ನಿಮ್ಮ ಮುಂದೆ ಇಡ್ತಿದ್ದೀವಿ.

ಪುತ್ತೂರು ವಿಧಾನಸಭಾ ಕ್ಷೇತ್ರ. ಮಂಗಳೂರು ನಗರ ಕೇಂದ್ರದಿಂದ ಸುಮಾರು 70 ಕಿ.ಮೀ ದೂರದಲ್ಲಿದೆ. ಜಿಲ್ಲಾ ಕೇಂದ್ರದ ಕನಸು ಹೊತ್ತಿರೋ ಪುತ್ತೂರನ್ನು ರಾಜ್ಯದ ಹಿಂದುತ್ವದ ಶಕ್ತಿ ಕೇಂದ್ರ. ಇಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚಿದ್ದು, ಕೇಸರಿ ರಾಜಕೀಯ ಭಾರೀ ಸದ್ದು ಮಾಡುತ್ತೆ. ಪುತ್ತೂರಿಗೆ ಕಲಶಪ್ರಾಯವಾಗಿರೋದು ಇಲ್ಲಿನ ಮಹಾಲಿಂಗೇಶ್ವರ ದೇವಸ್ಥಾನ. ಹತ್ತೂರು ಬಿಟ್ಟರೂ ಪುತ್ತೂರು ಬಿಡ ಅನ್ನೋ ಮಾತಿನಂತೆ ಇಲ್ಲಿನ ಜನ ಧಾರ್ಮಿಕವಾಗಿ ಸಾಕಷ್ಟು ಆಚರಣೆಗಳಿಗೆ ಒಳಪಟ್ಟವ್ರು. ದೈವ ದೇವರುಗಳಿಗೆ ಜಿಲ್ಲೆಯಲ್ಲೇ ಹೆಚ್ಚಿನ ಆರಾಧನೆ ನಡೆಯೋ ಪ್ರದೇಶಗಳಲ್ಲಿ ಪುತ್ತೂರಿಗೆ ಮೊದಲ ಸ್ಥಾನ. ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ, ಸಂಸದೆ ಶೋಭಾ ಕರಂದ್ಲಾಜೆ ಆದಿಯಾಗಿ ದೇಶಕ್ಕೆ ಅನೇಕ ರಾಜಕಾರಣಿಗಳನ್ನ ಕೊಟ್ಟ ಕೀರ್ತಿ ಪುತ್ತೂರಿಗಿದೆ. ಆದ್ರೆ ರಾಜಕೀಯದ ಒಳಜಗಳದಿಂದಾಗಿ ಕಳೆದ ಬಾರಿಯ ಚುನಾವಣೆಯಲ್ಲಿ ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರಿದ್ದ ಶಕುಂತಾಳ ಶೆಟ್ಟಿ ಇಲ್ಲಿ ಗೆದ್ದಿದ್ದಾರೆ. ಜಾತಿ ಲೆಕ್ಕಾಚಾರಕ್ಕೆ ಬಂದ್ರೆ ಬಂಟ, ಬಿಲ್ಲವ ಮತ್ತು ಗೌಡ ಸಮುದಾಯದ ಜನ್ರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಮಧ್ಯೆ ಪರಿವಾರದ ನಂಟೂ ಕೂಡ ದೊಡ್ಡ ಮಟ್ಟದಲ್ಲಿದೆ. ಮೋದಿ ಅಲೆ ಪ್ರಬಲವಾಗಿದೆ. ಅಡಿಕೆ ಬೆಳೆ ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆ. ರೈತಾಪಿ ವರ್ಗ  ಹೆಚ್ಚಿನ ಸಂಖ್ಯೆಯಲ್ಲಿದೆ. ತಿಂಗಳ ಹಿಂದಷ್ಟೇ ಕುರುಕ್ಷೇತ್ರದಲ್ಲಿ ಇಲ್ಲಿನ ರಾಜಕೀಯ ಚಿತ್ರಣವನ್ನು ನಿಮ್ಮ ಮುಂದೆ ಇಟ್ಟದ್ವಿ. ಆದ್ರೆ ಈಗ ಮತ್ತಷ್ಟು ಬದಲಾವಣೆಗಳು ಇಲ್ಲಾಗಿವೆ. ಹಾಗಿದ್ರೆ ಇಲ್ಲಿನ ಪ್ರಸ್ತುತ ಸ್ಥಿತಿಗತಿ ಹೇಗಿದೆ? ಯಾವ್ಯಾವ ಪಕ್ಷದಿಂದ ಯಾರ್ಯಾರು ಆಕಾಂಕ್ಷಿಗಳಿದ್ದಾರೆ. ಎಲ್ಲದರ ಬಗ್ಗೆ ಹೇಳ್ತೀವಿ. ಆದ್ರೆ ಅದಕ್ಕೂ ಮೊದಲು 2013ರ ಮತಬರಹ ನೋಡೋಣ ಬನ್ನಿ.

 

ಇದು 2013ರ ಮತಬರಹ ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಶಕುಂತಳಾ ಶೆಟ್ಟಿ 66345 ಮತಗಳನ್ನು ಗಳಿಸಿ ಗೆದ್ದು ಶಾಸಕರಾದ್ರು. ಅವ್ರ ಎದುರು ಸ್ಪರ್ಧಿಸಿದ್ದ ಬಿಜೆಪಿ ಯ ಸಂಜೀವ ಮಠಂದೂರು 62056 ಮತಗಳನ್ನು ಪಡೆಯೋ ಮೂಲಕ 4289 ಮತಗಳ ಅಂತರದಿಂದ ಸೋತ್ರು.

ಪುತ್ತೂರು ವಿಧಾನಸಬಾ ಕ್ಷೇತ್ರ, ರಾಜ್ಯಕ್ಕೆ ಮುಖ್ಯ ಮಂತ್ರಿಯನ್ನು ಕೊಟ್ಟ ಕ್ಷೇತ್ರ. ಈಗ ಕೇಂದ್ರ ಸಚಿವರಾಗಿರೋ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವ್ರ ಕಾರ್ಯಕ್ಷೇತ್ರ ಪುತ್ತೂರು. ಬಿಜೆಪಿಯ ಭದ್ರ ಕೋಟೆ ಕೂಡಾ ಹೌದು. ಆದ್ರೆ ಕಳೆದ ಬಾರಿ ಮಾತ್ರ  ಇಲ್ಲಿ ಬಿಜೆಪಿ ಲೆಕ್ಕಾಚಾರ ತಲೆಕೆಳಗಾಗಿತ್ತು. ಸಾಕಷ್ಚು ರಾಜಕೀಯ ಕಾರಣಗಳಿಗೆ ಬಿಜೆಪಿ ಶಕುಂತಳಾ ಶೆಟ್ಟಿಯವರನ್ನು ಹೊರಗಿಟ್ಟಿತ್ತು. ಹಾಗಾಗಿ ಶಕುಂತಳಾ ಶೆಟ್ಟಿಯವರು ಕಳೆದ ಬಾರಿ ಅಂದ್ರೆ 2013ರಲ್ಲಿ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ಗೆ ಸೇರಿ ಟಿಕೆಟ್ ಪಡೆದು ಕಣಕ್ಕಿಳಿದ್ರು. ಬಿಜೆಪಿ ಕೋಟೆಯನ್ನು ಭೇದಿಸಿ  ಕಾಂಗ್ರೆಸ್ ಧ್ವಜ ಹಾರಿಸಿದ್ರು. ಹಾಗಿದ್ರೆ ಈ ಬಾರಿ ಕೈ ಮತ್ತು ಕಮಲ ಪಾಳಯದಲ್ಲಿ ಯಾರ್ಯಾರು ಆಕಾಂಕ್ಷಿಗಳಿದ್ದಾರೆ. ನೋಡೋಣ ಬನ್ನಿ.

ಕೈ ಆಕಾಂಕ್ಷಿಗಳು:

ಇಲ್ಲಿನ ಜನ ಪ್ರೀತಿಯಿಂದ ಶಕುಂತಳಾ ಶೆಟ್ಟಿಯವರನ್ನು ಶಕು ಅಕ್ಕ ಅಂತಾನೇ ಕರೀತಾರೆ. ಕಳೆದ ಬಾರಿ ಕುಂತಳಾ ಶೆಟ್ಟಿ ಅವ್ರು ಬಿಜೆಪಿಯನ್ನು ಸುಲಭವಾಗಿ ಸೋಲಿಸಿದ್ರು. ಅದಕ್ಕೆ ಕಾರಣ ಇಲ್ಲಿ ಬಂಟ ಸಮುದಾಯದ ಮತಗಳು ಇವ್ರ ಕೈ ಹಿಡಿದವು. ಹಾಗಾಗಿ ಬಿಜೆಪಿ ಸೋಲ್ತು. ಆದ್ರೆ ಈಗ ಪರಿಸ್ಥಿತಿ ಹಾಗಿಲ್ಲ. ಶಾಸಕಿ ಶಕುಂತಳಾ ಶೆಟ್ಟಿ ಕ್ಷೇತ್ರದಲ್ಲಿ ಸ್ವಲ್ಪ ಅಭಿವೃದ್ದಿ ಕಾರ್ಯಗಳಿಗೆ ಒತ್ತು ಕೊಟ್ಟು ಜನಾನುರಾಗಿಯಾಗಿ ಗುರುತಿಸಿಕೊಂಡಿದ್ದಾರೆ. ಮಹಿಳೆಯಾಗಿದ್ದುಕೊಂಡು ನಿತ್ಯ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ನಿಜ. ಆದ್ರೆ ಸ್ಪಪಕ್ಷೀಯರಿಂದಲೇ ಶಕುಂತಳಾ ಶೆಟ್ಟಿ ಅವ್ರಿಗೆ ವಿರೋಧ ವ್ಯಕ್ತವಾಗ್ತಿದೆ. ಬಿಜೆಪಿ ಹಾಗೂ ಸಂಘ ಪರಿವಾರದ ಹಿನ್ನೆಲೆಯಿಂದ ಬಂದ ಕಾರಣ ಕಾಂಗ್ರೆಸ್​ನಲ್ಲಿ ಸೂಕ್ತ ಮನ್ನಣೆ ಸಿಕ್ತಿಲ್ಲ. ಕ್ಷೇತ್ರದ ಕಾಂಗ್ರೆಸ್ ಮುಖಂಡರ ಆದಿಯಾಗಿ ಕೆಲವರ ಜೊತೆ ವೈಮನಸ್ಸು,  ಅಧಿಕಾರಿ ವರ್ಗ ಮತ್ತು ಪೊಲೀಸ್ ಇಲಾಖೆಯ ಮೇಲೆ ಹಿಡಿತ ಇಲ್ಲದೇ ಇರುವುದು ಇವೆಲ್ಲಾ ಅವರದೇ ಪಕ್ಷದವರ ಮುನಿಸಿಗೆ ಕಾರಣವಾಗಿದೆ. ಅಷ್ಟೇ ಅಲ್ಲ ಕಳೆದ ಬಾರಿ ಕಾಂಗ್ರೆಸ್ ಗೆ ಸೇರಬೇಕಾದ್ರೆ ಒಂದುಬಾರಿ ಚಾನ್ಸ್ ಕೊಡಿ ಅಂತ ಕೇಳಿದ್ರು. ಹಾಗಾಗಿ ಈ ಬಾರಿ ಬೇರೆಯವರಿಗೆ ಚಾನ್ಸ್ ಕೊಡಬೇಕು ಅನ್ನೋ ಮಾತು ಕೇಳಿಬರ್ತಿದೆ.

ಇನ್ನು ಶಕುಂತಳಾ ಶೆಟ್ಟಿಯವರನ್ನು ಬಿಟ್ರೆ ಅವರದೇ ಸಮುದಾಯದಿಂದ ಕೇಳಿ ಬರ್ತಿರೋ ಮತ್ತೊಂದು ಹೆಸರೇ ಹೇಮನಾಥ್ ಶೆಟ್ಟಿ.ಕಳೆದ ಬಾರಿ ಕೂಡಾ ಇವ್ರು ಪ್ರಬಲ ಆಕಾಂಕ್ಷಿಯಾಗಿದ್ರು. ಆದ್ರೆ ಇವರಿಗೆ ಟಿಕೆಟ್ ಸಿಕ್ಕಿರ್ಲಿಲ್ಲ. ಹಾಗಾಗಿ ತನಗೆ ಈ ಬಾರಿ ಟಿಕೆಟ್ ಕೊಡಲೇ ಬೇಕು ಅಂತಾ ಇವ್ರು ಪಟ್ಟು ಹಿಡಿದು ಕೂತಿದ್ದಾರೆ. ಒಳ್ಳೆ ಜನ ಬೆಂಬಲವಿರೋದ್ರಿಂದ ಕೈ ನಾಯಕರು ಕೊನೆ ಘಳಿಗೆಯಲ್ಲಿ ಇವ್ರಿಗೆ ಮಣೆ ಹಾಕಿದ್ರೂ ಆಶ್ಚರ್ಯ ಇಲ್ಲ.

ಕಮಲ ಮುಡಿಯೋರು ಯಾರು?

ಹೌದು ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ರಾಗಿರೋ ಈ ಹಿಂದೆ ರಾಜ್ಯ ಬಿಜೆಪಿ ಯುವ ಮೋರ್ಛಾ ಉಪಾಧ್ಯಕ್ಷರಾಗಿದ್ದು, ಜಿಲ್ಲಾ ಬಿಜೆಪಿ ಯುವ ಮೋರ್ಛಾ ಅಧ್ಯಕ್ಷರಾಗಿ ಕೆಲ್ಸ ಮಾಡಿದ ಅನುಭವ ಇರೋ ಯುವ ನಾಯಕ ಕಿಶೋರ್ ಕುಮಾರ್ ಈ ಬಾರಿಯ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ನ ಪ್ರಬಲ ಆಕಾಂಕ್ಷಿ. ಪುತ್ತೂರಿನ ಸರ್ವೇ ಗ್ರಾಮದ ನಿವಾಸಿಯಾಗಿರೋ ಇವ್ರು ವಿದ್ಯಾವಂತರು. ಪೊಲೀಟಿಕಲ್ ಸಯನ್ಸ್ ಅದ್ರಲ್ಲೂ ಪಬ್ಲಿಕ್ ಅಡ್ಮಿನಿಸ್ಟ್ರೇಶನ್ ನಲ್ಲಿ ಎಂಎ ಪದವೀ ಪಡೆದುಕೊಂಡಿರೋ  ಕಿಶೋರ್ ಕುಮಾರ್ ಕಟ್ಟಾ ಆರ್ ಎಸ್ಎಸ್ ಕಾರ್ಯಕರ್ತ. ವಿದ್ಯಾರ್ಥಿ ಜೀವನದಲ್ಲೇ ನಾಯಕತ್ವದ ಗುಣ ಬೆಳೆಸಿಕಂಡಿದ್ದ ಇವ್ರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಲ್ಲಿ ಪ್ರಮುಖರಾಗಿ ಕೆಲ್ಸ ಮಾಡಿದ್ದು ಸಂಘಟನೆಯನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇನ್ನು ಪ್ರಬಲ ಹಿಂದುತ್ವವಾದಿಯಾಗಿರೋ ಕಿಶೋರ್ ಕುಮಾರ್ ಸಂಘ ಪರಿವಾರ ಹಾಗೂ ಬಿಜೆಪಿಯಲ್ಲಿ ಸಕ್ರಿಯರಾಗಿದ್ದುಕೊಂಡು ಕೆಲ್ಸ ಮಾಡ್ತಾ  ಪಕ್ಷ ಸಂಘಟನೆ ಮಾಡ್ತಿದ್ದಾರೆ. ಈ ಹಿಂದೆ 2011ರಲ್ಲಿ ಕಾಶ್ಮೀರ್ ನ ಲಾಲ್ ಚೌಕ್ ನಲ್ಲಿ  ತಾಕತ್ತಿದ್ರೆ ಭಾರತದ ಧ್ವಜ ಹಾರಿಸಿ ಅಂತಾ ಪ್ರತ್ಯೇಕತಾವಾದಿಗಳು ಸವಾಲು ಹಾಕಿದಾಗ ಶಾಸಕ ಸುನೀಲ್ ಕುಮಾರ್ ಜತೆ ಹೋಗಿ ಭಾರತದ ಧ್ವಜ ಹಾರಿಸಿದ್ದ ಕೀರ್ತಿ ಇವ್ರಿಗಿದೆ. ಇನ್ನು ಪುತ್ತೂರಿನಲ್ಲಿ ಮನೆ ಮಾತಾಗಿರೋ ಕಿಶೋರ್ ಕುಮಾರ್ ಗೆ ಎಲ್ಲಾ ಜಾತಿಯವರ ಬೆಂಬಲ ಕೂಡಾ ಇದೆ. ಆರ್ ಎಸ್ ಎಸ್ ನಾಯಕ ಕಲ್ಲಡ್ಕ ಪ್ರಭಾಕರ್ ಭಟ್ ಅವ್ರ ಆಶೀರ್ವಾದ ಇದೆ. ಅಷ್ಟೇ ಅಲ್ಲ ಮೊನ್ನೆ ತಾನೇ ಆರ್ ಎಸ್ಎಸ್ ನ ಪ್ರಮುಖ ಹುದ್ದೆಗೇರಿರುವ ಮುಂಕುಂದ್ ಜಿ ಅವ್ರ ಸಪೋರ್ಟ್ ಇದೆ. ಹಾಗೇನೇ ಸಂಸದ ನಳೀನ್ ಕುಮಾರ್ ಕಟೀಲ್ ಅವ್ರ ಗೆಲುವಿಗೂ ಕೂಡಾ ಕಿಶೋರ್ ಕುಮಾರ್ ಕೆಲ್ಸ ಮಾಡಿದ್ದರಿಂದ ಕಟೀಲ್ ಬೆಂಬಲ ಕೂಡಾ ಇವ್ರಿಗಿದೆ.

ಇದೆಲ್ಲಕ್ಕಿಂತ ಹೆಚ್ಚಾಗಿ ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಅನ್ನೋ ಧ್ಯೇಯವಾಕ್ಯವನ್ನು ಪರಿಪಾಲನೆ ಮಾಡ್ತಿರೋ ಕಿಶೋರ್ ಕುಮಾರ್ ಗ್ರಾಮ ಗ್ರಾಮಕ್ಕೆ ತೆರಳಿ ಜನರಿಗೆ ಹತ್ತಿರವಾಗಿದ್ದಾರೆ, ಜನರ ಕೈ ಗೆಟಕೋ ನಾಯಕ ಅನ್ನೋ ಹೆಸರು ಮಾಡಿದ್ದಾರೆ. ಇನ್ನುಳಿದಂತೆ ಬಿಜೆಪಿ ಟಿಕೆಟ್ ಸಿಕ್ಕು, ಗೆದ್ದು ಬಂದ್ರೆ ಪುತ್ತೂರನ್ನು ಮಾದರಿ ಕ್ಷೇತ್ರವನ್ನಾಗಿ ಮಾಡೋ ಕನಸು ಇವ್ರದ್ದು.  ಇಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರ ಮೇಲೆ  ಸುಖಾ ಸುಮ್ಮನೆ ಕೇಸ್ ಹಾಕಲಾಗಿದೆ  ಅವೆಲ್ಲವನ್ನು ವಾಪಾಸ್ ತೆಗೆದುಕೊಳ್ಳೋದಕ್ಕೆ ಪ್ರಯತ್ನ ಮಾಡ್ತೇನ್ ಅನ್ನೋ ಇವ್ರು ಸಮಾಜದಲ್ಲಿರೋ ದುಷ್ಟ ಶಕ್ತಿಗಳನ್ನು ಮೆಟ್ಟಿ ನಿಲ್ತೇನೆ ಅಂತಿದ್ದಾರೆ. ಎಲ್ಲವೂ ಅಂದ್ಕೊಂಡಂಗೆ ಆಗ್ತಿದ್ರೆ ಕಳೆದ ಬಾರಿಯೇ ಇವ್ರಿಗೆ ಬಿಜೆಪಿ ಟಿಕೆಟ್ ಸಿಗಬೇಕಿತ್ತು. ಆದ್ರೆ ಪಕ್ಷ ಸಂಜೀವ ಮಠಂದೂರು ಅವ್ರಿಗೆ ಕೊಡೋಣ ಅಂದಾಗ ಪಕ್ಷದ ಹಿತದೃಷ್ಟಿಯಿಂದ ಇವ್ರು ಹಿಂದೆ ಸರಿದ್ರು ಅಲ್ಲದೆ ಯಾವುದೇ ಜಿದ್ದು ಸಾಧಿಸದೇ ತಾಯಿಗೆ ಸಮನಾಗಿರೋ ಪಕ್ಷ ಮುಖ್ಯ ಅಂತಾ ದುಡಿದ್ರು. ಆದ್ರೆ ಈ ಬಾರಿ ಇಲ್ಲಿನ ಯುವಕರೇ ಕಿಶೋರ್ ಕುಮಾರ್ ನಿಲ್ಲಬೇಕು ಶಾಸಕರಾಗಬೇಕು ಅಂತಿರೋದ್ರಿಂದ ಮನಸ್ಸು ಮಾಡಿರೋ ಇವ್ರು ತನಗೆ ಟಿಕೆಟ್ ಸಿಕ್ರೆ ಕಾಂಗ್ರೆಸ್ ನ್ನು ಅತೀ ಹೆಚ್ಚು ಮತಗಳಿಂದ ಬಗ್ಗು ಬಡೀತಿನಿ ಅನ್ನೋ ಆತ್ಮ ವಿಶ್ವಾಸವನ್ನು ತೋರಿಸ್ತಿದ್ದಾರೆ. ಅಲ್ಲದೆ ಅವ್ರ ಯುವಕರ ಪಡೆಯನ್ನು ನೋಡಿದ್ರೆ ಅದು ನಿಜ ಅಂತಾ ಕೂಡಾ ಅನ್ಸತ್ತೆ.

ಹೌದು ಕಳೆದ ಬಾರಿಯ ಕುರುಕ್ಷೇತ್ರದಲ್ಲೂ ಹೇಳಿದಂತೆ ಅಶೋಕ್ ಕುಮಾರ್ ರೈ ಕೋಡಿಂಬಾಡಿ…ಪುತ್ತೂರು ಕ್ಷೇತ್ರ ಪ್ರಬಲ ಆಕಾಂಕ್ಷಿಗಳ ರೇಸ್ ನಲ್ಲಿ ಇವ್ರ ಹೆಸರೂ ಇದೆ..ಕೇಂದ್ರ ಸಚಿವ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರಿಗೆ ಪರಮಾಪ್ತರಾಗಿರೋ ರೈ ಗಳ ಹೆಸರು ಚರ್ಚೆಯಲ್ಲಿದೆ ನಿಜ. ಆದ್ರೆ ಇಲ್ಲಿ ಬಿಜೆಪಿ ಹೈ ಕಮಾಂಡ್ ಯೋಚನೆ ಮಾಡ್ತಾ ಇರೋ ಕಾರಣ ಏನಂದ್ರೆ ಜಾತಿ ವಿಚಾರ. ಅಶೋಕ್ ರೈ ಪ್ರಬಲ ಬಂಟ್ ಸಮುದಾಯವನ್ನು ಪ್ರತಿನಿಧಿಸ್ತಿದ್ದಾರೆ. ಹಾಗಾಗಿ  ಬಂಟ ಸಮುದಾಯದವರ ಸಪೋರ್ಟ್ ಸಿಗತ್ತೆ. ಆದ್ರೆ ಇಲ್ಲಿನ ಇನ್ನೊಂದು ಪ್ರಬಲ ಜಾತಿ ಗೌಡ ಸಮುದಾಯದವರು ಇವ್ರನ್ನು ಓಪ್ಪುವ ಚಾನ್ಸ್ ತುಂಬಾ ಕಡಿಮೆ. ಹಾಗಾಗಿ ಅಶೋಕ್ ರೈ ಅವ್ರಿಗೆ ಟಿಕೆಟ್ ಸಿಕ್ಕೇ ಸಿಗತ್ತೆ ಅಂತಾ ಹೇಳಕ್ಕಾಗಲ್ಲ.

ಈ ಕ್ಷೇತ್ರದಲ್ಲಿ ಕೇಳಿ ಬರ್ತಿರೋ ಮತ್ತೊಂದು ಹೆಸರೇ ಸಂಜೀವ ಮಠಂದೂರು. ಈಗಾಗಲೇ ಒಂದು ಬಾರಿ ಇವರಿಗೆ ಚಾನ್ಸ್ ಕೊಟ್ಟದ್ದಾಗಿದೆ. ಆದ್ರೆ ಶಕುಂತಳಾ ಶೆಟ್ಟಿ ಅವ್ರ ಎದುರು ಇವ್ರು ಸೋಲಬೇಕಾಯ್ತು. ಇನ್ನು ಈ ಬಾರಿ ಕೂಡಾ ಇವ್ರು ಆಕಾಂಕ್ಷಿಯೇನೋ ನಿಜ. ಕಳೆದ ಬಾರಿ ಸೋತಿರೋ ಕಾರಣ ಮತ್ತೆ ಪುತ್ತೂರನ್ನು ಗೆಲ್ಲೋದಕ್ಕೆ ಇವ್ರಿಂದ ಕಷ್ಟ. ಒಂದು ಸಲ ಚಾನ್ಸ್ ಕೊಟ್ಟಾಗಿದೆ ಹಾಗಾಗಿ ಹೊಸ ಮುಖ ಆಯ್ಕೆ ಮಾಡೋ ಸಾಧ್ಯತೆನೇ ಇಲ್ಲಿ ಜಾಸ್ತಿ ಇದೆ.

 ಇನ್ನು ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಶಕುಂತಳಾ ಶೆಟ್ಟಿ ಶಾಸಕಿಯಾಗಿದ್ದರೂ ಮತ್ತೆ ಅವರ ಗೆಲವು ನಿಶ್ಚಿತ ಅಂತ ಹೇಳಕ್ಕಾಗಲ್ಲ. ಹಿಂದುತ್ವದ ಶಕ್ತಿ ಕೇಂದ್ರವಾಗಿರೋ ಪುತ್ತೂರಿನಲ್ಲಿ ಈ ಬಾರಿ ಮೋದಿ ಅಲೆ ವ್ಯಾಪಕವಾಗಿದ್ದು, ಬಿಜೆಪಿ ಕೂಡ ಗೆಲವಿನ ನಿರೀಕ್ಷೆಯಲ್ಲಿದೆ. ಈ ಕ್ಷೇತ್ರದಲ್ಲಿ ಬಂಟ್ ಸಮುದಾಯ ಹಾಗೂ ಗೌಡ ಸಮುದಾಯದ ಮತಗಳು ನಿರ್ಣಾಯಕವಾಗಿರೋದ್ರಿಂದ ಈ ಎರಡೂ ಸಮುದಾಯದವರಿಗೆ ಒಪ್ಪಿತವಾಗುವಂತಹ ಅಭ್ಯರ್ಥಿಯನ್ನು ಅಂದ್ರೆ ಕಿಶೋರ್ ಕುಮಾರ್ ಅವ್ರನ್ನು  ಬಿಜೆಪಿ ಕಣಕ್ಕಿಳಿಸಲು ಪ್ಲಾನ್ ಮಾಡಿದೆ. ಕಿಶೋರ್ ಕುಮಾರ್ ಆರ್ ಎಸ್ಎಸ್ ಮತ್ತು ಹಿಂದೂ ಸಂಘಟನೆ ಹಾಗೂ ಬಿಜೆಪಿಯಲ್ಲಿ ಗುರುತಿಸಿಕೊಂಡಿರೋದ್ರಿಂದ ಅವ್ರನ್ನು ಜಾತಿಯ ರೀತಿಯಲ್ಲಿ ನೋಡ್ತಿಲ್ಲ. ಹಾಗಾಗಿ ಎಲ್ಲಾ ಜಾತಿಯವೂ ಇವ್ರರಿಗೆ ಸಪೋರ್ಟ್ ಮಾಡ್ತಾರೆ ಅನ್ನೋ ಲೆಕ್ಕಾಚಾರ ಬಿಜೆಪಿಯದ್ದು. ಇನ್ನು ಕಾಂಗ್ರೆಸ್​​ನ ಒಳಜಗಳ ಬಿಜೆಪಿಗೆ ಪ್ಲಸ್ ಪಾಯಿಂಟ್ ಆಗೋ ಸಾಧ್ಯತೆಗಳೂ ಇವೆ. ಇನ್ನು ಕಾಂಗ್ರೆಸ್ ನಲ್ಲಿ ಟಿಕೆಟ್ ಗೆ ಅಷ್ಟೊಂದು ಫೈಟ್ ಇಲ್ಲದೇ ಇದ್ರೂ ಕೂಡಾ ಬಿಜೆಪಿಯಲ್ಲಿ ಫೈಟ್ ಇದೆ. ಆದ್ರೆ ಎಲ್ಲರೂ ನಿರೀಕ್ಷೆ ಮಾಡಿದಷ್ಟು ಸುಲಭವಲ್ಲ ಇಲ್ಲಿ ಗೆಲ್ಲೋದು. ಹಾಗಾಗಿ ಬಿಜೆಪಿ ಸ್ವಲ್ಪ ಅಳೆದು ತೂಗಿ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಾಗತ್ತೆ,. ಇಲ್ಲಾಂದ್ರೆ ಮತ್ತೆ ಕ್ಷೇತ್ರ ಕಳೆದುಕೊಳ್ಲೋದು ಗ್ಯಾರಂಟಿ. ಹಾಗಾಗಿ ಕೊನೆ ಕ್ಷಣದಲ್ಲಿ ಮಾಡೋ ಬದಲಾವಣೆಗಳು ಈ ಕ್ಷೇತ್ರ ಯಾರ ಪಾಲಾಗುತ್ತೆ ಅನ್ನೋದನ್ನು ನಿರ್ದರಿಸುತ್ತೆ.

ಹಿಂದುತ್ವದ ಶಕ್ತಿ ಕೇಂದ್ರ ಅಂತಾ ಕರೆಯಲ್ಪಡೋ ಪುತ್ತೂರು ವಿಧಾನಸಭಾ  ಈ ಬಾರಿ ಶಕುಂತಳಾ ಶೆಟ್ಟಿ ಅವ್ರಿಗೆ  ಸ್ವಪಕ್ಷೀಯರ ವಿರೋಧವೇ ಅಡ್ಡಾಗಾಲು ಹಾಕುವಂತಿದೆ. ಬಿಜೆಪಿಗೆ ಅದು ಲಾಭ ಆಗೋದ್ರಲ್ಲಿ ಅನುಮಾನ ಇಲ್ಲ. ಹಾಗಾಗಿ ಈಗಾಗಲೇ  ಯುವಕರ ಕಣ್ಮಣಿ, ಸರಳ ಸಜ್ಜನಿಕೆಯ,ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ  ಕಿಶೋರ್ ಕುಮಾರ್ ಅವ್ರ ಹೆಸರೇ ದೊಡ್ಡದಾಗಿ ಕೇಳಿ ಬರ್ತಿದೆ.  ಹೋರಾಟದ ಮುಖಾಂತರ ರಾಜಕೀಯಕ್ಕೆ ಬಂದಿರೋ ಕಿಶೋರ್ ಕುಮಾರ್ ಅವ್ರಿಗೆ ಬಿಜೆಪಿ ಟಿಕೆಟ್ ಸಿಕ್ರೆ ಕಾಂಗ್ರೆಸ್ ನಲ್ಲಿರೋ ಹೆಚ್ಚಿನ ಯುವ ಸಮುದಾಯ ನಾವು ಕಿಶೋರ್ ಕುಮಾರ್ ಪರ ನಿಲ್ತೀವಿ ಪ್ರಚಾರ ಮಾಡ್ತಾವಿ ಅಂತಿರೋದು ನೋಡಿ ಬಿಜೆಪಿ ನಾಯಕರೂ ಕೂಡಾ ಲೆಕ್ಕಾ ಚಾರ ಹಾಕ್ತಿದ್ದಾರೆ. ಹಾಗಾಗಿ ಬಿಜೆಪಿ ಹೈ ಕಮಾಂಡ್ ಕಿಶೋರ್ ಕುಮಾರ್ ಗೆ  ಟಿಕೆಟ್ ನೀಡಿದ್ರೆ ಕಾಂಗ್ರೆಸ್ ಇಲ್ಲಿ ಸೋಲೋದು ಗ್ಯಾರಂಟಿ ಅಂತಿದ್ದಾರೆ ಇಲ್ಲಿನ ಪ್ರಜ್ನಾವಂತ ಮತದಾರರು.