ನಾಮಪತ್ರವನ್ನೇ ಮನೆಯಲ್ಲಿ ಬಿಟ್ಟು ನಾಮಪತ್ರ ಸಲ್ಲಿಸಲು ಬಂದ ಅಭ್ಯರ್ಥಿ !! ಕಾಂಗ್ರೆಸ್ ಅಭ್ಯರ್ಥಿಯ ಪೇಚಾಟ !!

 

adಚುನಾವಣೆಯಲ್ಲಿ ಗೆಲ್ಲೋದು ಸೋಲೋದು ಬೇರೆ ವಿಚಾರ. ನಾಮಪತ್ರ ಸಲ್ಲಿಸುವುದು ರಾಜಕಾರಣಿಯೊಬ್ಬನ ಮಹದಾಸೆ. ಯಾರು ಯಾವ ಪಕ್ಷದಿಂದ ನಾಮಪತ್ರ ಸಲ್ಲಿಸುತ್ತಾರೆ ಎನ್ನುವುದು ಆತನ ರಾಜಕೀಯ ಜೀವನವನ್ನೇ ಬದಲಿಸುತ್ತೆ. ಅಂತದ್ದರಲ್ಲಿ ಇಲ್ಲೊಬ್ರು ಅಭ್ಯರ್ಥಿ ಯಡವಟ್ಟು ಮಾಡಿಕೊಂಡಿದ್ದಾರೆ.

 

ಬೆಂಗಳೂರು ನಗರ ಜಿಲ್ಲೆಯ ಬಸವನಗುಡಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬೋರೇಗೌಡ ಈ ಯಡವಟ್ಟು ಮಾಡಿಕೊಂಡಿದ್ದಾರೆ. ಇಂದು ನಾಮಪತ್ರ ಸಲ್ಲಿಸುವ ಸಲುವಾಗಿ ದಿನ, ಗಳಿಗೆ ಸಿದ್ದಪಡಿಸಿ, ಪೂಜಾದಿಗಳನ್ನು ಮುಗಿಸಿಕೊಂಡು ಅಭಿಮಾನಿಗಳು ಕಾರ್ಯಕರ್ತರ ಜೊತೆ ನಾಮಪತ್ರ ಸಲ್ಲಿಸಲು ಬಂದರು. ಕಾರ್ಯಕರ್ತರ ಜೊತೆ ಮೆರವಣಿಗೆಯಲ್ಲಿ ಬೋರೇಗೌಡರೇನೋ ನಾಮಪತ್ರ ಸಲ್ಲಿಸಲು ಬಂದರು. ಆದರೆ ಕೈಯ್ಯಲ್ಲಿ ನಾಮಪತ್ರದ ಅರ್ಜಿಯೇ ಇರಲಿಲ್ಲ. ಮುಂಜಾನೆಯಿಂದ ಜತನದಿಂದ ಭರ್ತಿ ಮಾಡಿದ ಅರ್ಜಿಯನ್ನು ಅಭ್ಯರ್ಥಿ ಬೋರೇಗೌಡರು ಮನೆಯಲ್ಲೇ ಬಿಟ್ಟು ಬಂದಿದ್ದರು. ಮತ್ತೆ ಮನೆಗೆ ತೆರಳಿ, ನಾಮಪತ್ರದ ಅರ್ಜಿಯನ್ನು ತಂದು ಚುನಾವಣಾಧಿಕಾರಿಗಳಿಗೆ ಸಲ್ಲಿಸಿದರು.