ಇಂದು ಡಿಸ್ಚಾರ್ಜ್​ ಆದ ಲೋಕಾಯುಕ್ತರು ಏನಂದ್ರು ಗೊತ್ತಾ?

ಕಳೆದ ಬುಧವಾರ ಹಲ್ಲೆಗೊಳಗಾದ ಲೋಕಾಯುಕ್ತ ವಿಶ್ವನಾಥ್ ಶೆಟ್ಟಿ ಇಂದು ಬೆಳ್ಳಗ್ಗೆ ಮಲ್ಯ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದು, ವಿಶ್ರಾಂತಿಗಾಗಿ ಮನೆಗೆ ತೆರಳಿದ್ದಾರೆ.

ad


 

ಕಳೆದ ಏಳು ದಿನಗಳ ಹಿಂದೆ ಚಾಕು ಇರಿತಕ್ಕೆ ಒಳಗಾಗಿದ್ದ ಶೆಟ್ಟಿ ಆರೋಗ್ಯ ಚೇತರಿಕೆ ಕಂಡು ಹಿನ್ನಲೆಯಲ್ಲಿ ವೈದ್ಯರು ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದಾರೆ.
ಕಳೆದ 7 ದಿನಗಳ ಹಿಂದೆ ಲೋಕಾಯುಕ್ತ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ತುಮಕೂರು ಮೂಲದ ತೇಜ್ ರಾಜ್ ಶರ್ಮಾ ಎಂಬತನಿಂದ ಚಾಕು ಇರಿತಕ್ಕೆ ಒಳಗಾಗಿದ್ರು.ತೇಜ್ ರಾಜ್ ಶರ್ಮಾ ತುಮಕೂರಿನಲ್ಲಿ ನಡೆದ ಟೆಂಡರ್ ಅವ್ಯವಹಾರಗಳ ಬಗ್ಗೆ ಅಲ್ಲಿನ ಅಧಿಕಾರಿಗಳ ವಿರುದ್ದ ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿದ್ರು. ತನಿಖೆ ನಡೆಸಿದ ಸಂಸ್ಥೆ ತೇಜ್ ರಾಜ್ ಶರ್ಮಾ ಮಾಡಿದ ದೂರಿನಲ್ಲಿ ಯಾವುದೇ ಲೋಪಗಳು ಕಂಡು ಬಂದಿಲ್ಲ ಎಂದು ಹಿಂಬರ ನೀಡಿದ್ರು. ಇದರಿಂದ ಬೇಸತ್ತಿದ್ದ ಶರ್ಮಾ ಕಳೆದ ಬುಧುವಾರ ಸಾರ್ವಜನಿಕ ಭೇಟಿ ವೇಳೆಯಲ್ಲಿ ಲೋಕಾಯುಕ್ತ ಕಚೇರಿಗೆ ಹೋಗಿ ಆರು ಬಾರಿ ಚಾಕು ಇರಿದಿದ್ದ.
ತಕ್ಷಣ ಗಾಯಗೊಂಡ ವಿಶ್ವನಾಥ್ ಶೆಟ್ಟಿಯನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚೇತರಿಕೆ ಕಂಡಿದ್ದು. ಅನುಗ್ರಹ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಆಸ್ಪತ್ರೆಯಿಂದ ಹೊರ ಬಂದ ಬಳಿಕ ಮಾತನಾಡಿದ ವಿಶ್ವನಾಥ್ ಶೆಟ್ಟಿ ದೆವ್ರ ದಯೆಯಿಂದ ನಾನು ಚೆನ್ನಾಗಿದ್ದೀನಿ ಆಸ್ಪತ್ರೆಯಲ್ಲಿ ವೈದ್ಯರು, ನರ್ಸ್ ಗಳು ಚೆನ್ನಾಗಿ ನೋಡಿಕೊಂಡ್ರು . ಒಂದು ವಾರ ಚಿಕಿತ್ಸೆ ಪಡೆದಿದ್ದೇನೆ ಸೂಕ್ತ ಸಮಯದಲ್ಲಿ ಎಲ್ಲವನ್ನು ಮಾತಾಡುತ್ತೇನೆ ಎಂದರು.