ಕಾಂಗ್ರೆಸ್ ವಿರುದ್ಧವೇ ತಿರುಗಿ ಬಿದ್ದರಾ ರಮ್ಯಾ ತಾಯಿ?

ರಾಜ್ಯದ ಪ್ರತಿಷ್ಠಿತ ಚುನಾವಣಾ ಕಣಗಳಲ್ಲಿ ಮಂಡ್ಯ ವಿಧಾನಸಭಾ ಕ್ಷೇತ್ರ ಕೂಡ ಒಂದು. ಇದೀಗ ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಪಕ್ಷದೊಳಗೆ ಬಿರುಗಾಳಿಯೊಂದು ಎದುರಾದಂತಿದ್ದು, ಕಾಂಗ್ರೆಸ್​​ನ ಸೋಷಿಯಲ್​ ಮೀಡಿಯಾ ಮುಖ್ಯಸ್ಥೆ ರಮ್ಯ ತಾಯಿ ರಂಜಿತಾ ಕಾಂಗ್ರೆಸ್​ ಟಿಕೇಟ್​ ಆಕಾಂಕ್ಷಿಯಾಗಿದ್ದು, ಮಂಡ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಉಂಟಾಗುವ ನೀರಿಕ್ಷೆ ಮೂಡಿಸಿದೆ.

ಹೌದು ಈ ವಿಷ್ಯ ನಿಜವಾಗ್ಲೂ ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಲಿದೆ. ಸೋಷಿಯಲ್ ಮೀಡಿಯಾ ಮುಖ್ಯಸ್ಥೆ ಆಗಿರೋ, ಮಾಜಿ ಸಂಸದೆ ರಮ್ಯ ಅವ್ರ ತಾಯಿ ರಂಜಿತಾ ಸಿಡಿಸಿರೋ ಹೊಸ ಬಾಂಬ್​ಗೆ ಮಂಡ್ಯ ಕಾರ್ಯಕರ್ತರು, ಕಾಂಗ್ರೆಸ್ ಮುಖಂಡರು ಕಂಗಾಲಾಗಿದ್ದಾರೆ. ಹೌದು ರಂಜಿತಾ ನಾನು ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೇಟ್ ಆಕಾಂಕ್ಷಿಯಾಗಿದ್ದೇನೆ. ಟಿಕೇಟ್ ನೀಡದೇ ಇದ್ದರೆ ಪಕ್ಷೇತರ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡುತ್ತೇನೆ ಎಂದಿದ್ದಾರೆ ಎನ್ನಲಾಗಿದ್ದು, ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಮೂಡಿಸಿದೆ. ಕ್ಷೇತ್ರದಲ್ಲಿ ಹಾಲಿ ಶಾಸಕ, ಮಾಜಿ ಸಚಿವ ಅಂಬರೀಶ್ ಸ್ಪರ್ಧಿಸೋದು ಬಹುತೇಕ ಖಚಿತವಾಗಿದೆ. ಈಗಾಗ್ಲೇ ಸ್ಪರ್ಧೆ ಮಾಡೋದಾಗಿ ಖಚಿತ ಕೂಡ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ರಂಜಿತಾರ ಈ ನಿರ್ಧಾರ ಕಾಂಗ್ರೆಸ್ ಗೆ ಪೆಟ್ಟು ನೀಡಲಿದೆ. ಒಂದು ವೇಳೆ ಕಾಂಗ್ರೆಸ್ ನಲ್ಲಿ ಒಳ ಜಗಳ ಶುರುವಾದರೆ ಕಾಂಗ್ರೆಸ್ ಅಭ್ಯರ್ಥಿಗೆ ತಲೆನೋವಾಗಿ ಪರಿಣಮಿಸಲಿದೆ.

ಈಗಾಗ್ಲೇ ಜೆಡಿಎಸ್ ನಲ್ಲಿ ಹಲವರು ಅಖಾಡಕ್ಕೆ ಇಳಿಯಲು ಸಿದ್ಧತೆ ಮಾಡಿಕೊಂಡಿದ್ದಾರೆ. ಜೊತೆಗೆ ಕ್ಷೇತ್ರ ಗೆಲ್ಲಲು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೂಡ ಮೂರು ಬಾರಿ ಕ್ಷೇತ್ರದಲ್ಲಿ ಪ್ರವಾಸ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ರಂಜಿತಾರ ನಿರ್ಧಾರ ಕಾಂಗ್ರೆಸ್ ಗೆ ಅಪಾಯ ತರಲಿದೆ ಎನ್ನಲಾಗ್ತಿದೆ. ಆದ್ರೆ, ರಂಜಿತಾ ಹೇಳಿದ್ದಾರೆ ಎಂದು ಹೇಳಲಾಗ್ತಾ ಇರೋ ಸ್ಪರ್ಧೆ ವಿಚಾರವಾಗಿ ಯಾವುದೇ ವಿಚಾರ ಗೊತ್ತಿಲ್ಲ. ಕೆಪಿಸಿಸಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ಅವರ ಮಾತು. ರಂಜಿತಾರ ನಿರ್ಧಾರ ಎಂಬ ಸ್ಪರ್ಧೆ ಮಾತು ಕಾಂಗ್ರೆಸ್ ವಲಯದಲ್ಲಿ ಕುತೂಹಲ ಮೂಡಿಸಿದೆ. ಇದಕ್ಕೆ ಮಾಜಿ ಸಂಸದೆ, ಕಾಂಗ್ರೆಸ್ ಸೋಷಿಯಲ್ ಮೀಡಿಯಾದ ಮುಖ್ಯಸ್ಥೆಯಾಗಿರೋ ರಮ್ಯರವರ ಬೆಂಬಲ ಇದ್ಯಾ? ಅಥವಾ ಅವರು ಪಕ್ಷದ ಪರ ನಿಂತು ತಾಯಿಯ ಮನವೊಲಿಸ್ತಾರಾ ಕಾದು ನೋಡಬೇಕಿದೆ.