ಮಂಡ್ಯದ ರಂಗಿನ ಚುನಾವಣಾ ಕಣ.. ಏನೇನಿದೆ ನೋಡಿ!!!

ಘೋಷಣೆ ಆಗ್ತಾ ಇದ್ದಂತೆ ಮಂಡ್ಯದಲ್ಲಿ ಕಣ ರಂಗೇರಿದೆ. ನಟ ಅಂಬರೀಶ್ ಸ್ಪರ್ಧೆ ಮಾಡೋ ಕ್ಷೇತ್ರದಲ್ಲಿ ಐದುರೂಪಾಯಿ ಡಾಕ್ಟರ್ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ. ಸಮಾಜ ಸೇವೆ, ವೈದ್ಯಕೀಯ ಸೇವೆ ಜೊತೆಗೆ ರಾಜಕೀಯ ಸೇವೆ ಮಾಡಲು ಮುಂದಾಗಿದ್ದಾರೆ. ಪ್ರಚಾರ ಕಣದಲ್ಲೇ ವೈದ್ಯಕೀಯ ಸೇವೆಯನ್ನು ಮಾಡ್ತಾ ಇದ್ದಾರೆ. ಹಾಗಾದ್ರೆ ಐದು ರೂಪಾಯಿ ಡಾಕ್ಟರ್ ರ ಪ್ರಚಾರ ಕಾರ್ಯ ಹೇಗಿದೆ ಅನ್ನೋದ್ನ ನೀವೇ ನೋಡಿ.

ad

ಪ್ರಚಾರದ ನಡುವೆಯೂ ವೈದ್ಯಕೀಯ ಸೇವೆ. ಮಂಡ್ಯದ ಐದು ರೂಪಾಯಿ ಡಾಕ್ಟರ್ ಎಂದೇ ಫೇಮಸ್ ಆಗಿರೋ ಡಾ. ಶಂಕರೇಗೌಡ್ರು ಪ್ರಚಾರ ಕಾರ್ಯವನ್ನು ಶುರು ಮಾಡಿದ್ದಾರೆ. ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಬೆಂಬಲಿಗರ ಜೊತೆ ಪ್ರಚಾರ ಮಾಡ್ತಾ ಇದ್ದಾರೆ. ಪ್ರಚಾರದ ನಡುವೆಯೂ ರೋಗಿಗಳಿಗೆ ವೈದ್ಯಕೀಯ ಸೇವೆಯನ್ನು ಮಾಡಿ ಗಮನ ಸೆಳೆಯುತ್ತಿದ್ದಾರೆ.

 

ಮನೆ ಮನೆಗೆ ತೆರಳಿ ಪ್ರಚಾರ ಮಾಡ್ತಾ ಇರೋ ಶಂಕರೇಗೌಡ್ರು ತಮ್ಮ ಜಿಪಂ ಸದಸ್ಯತ್ವದ ಅವಧಿಯಲ್ಲಿನ ಸೇವೆಯನ್ನು ಪರಿಗಣಿಸಿ ಮತ ನೀಡುವಂತೆ ಮನವಿ ಮಾಡ್ತಾ ಇದ್ದಾರೆ. ಜೊತೆಗೆ ವೈದ್ಯರ ಪತ್ನಿ, ಮಗಳು ಕೂಡ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

ನಟ, ಮಾಜಿ ಸಚಿವ, ಶಾಸಕ ಅಂಬರೀಶ್ ಕ್ಷೇತ್ರದಲ್ಲಿ ಕಮಾಲ್ ಮಾಡಲು ಮುಂದಾಗಿರೋ ಐದು ರೂಪಾಯಿ ಡಾಕ್ಟರ್, ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಪಕ್ಷೇತರವಾಗಿಯೇ ಸ್ಪರ್ಧೆ ಮಾಡಲು ಇಂಗಿತ ವ್ಯಕ್ತಪಡಿಸಿದ್ದಾರೆ.

ವರದಿ: ಡಿ.ಶಶಿಕುಮಾರ್, ಬಿಟಿವಿ ನ್ಯೂಸ್, ಮಂಡ್ಯ.