ಕಾಂಗ್ರೆಸ್​ ಮತ್ತೊಬ್ಬ ಮಾಜಿ ಶಾಸಕನ ಬಂಡಾಯ- ಬಿಜೆಪಿ ಸೇರಿದ ಗೋಪಾಲಕೃಷ್ಣ!

ಕಾಂಗ್ರೆಸ್​ ಟಿಕೇಟ್​ ಘೋಷಣೆ ಹೈಕಮಾಂಡ್​ ಪಾಲಿಗೆ ತಲೆನೋವಾಗಿ ಪರಿಣಮಿಸಿತ್ತು. ಕೊನೆಗೂ ಹೈಕಮಾಂಡ್​ ಕಾಂಗ್ರೆಸ್​ ಕಲಿಗಳ ಪಟ್ಟಿ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್​ನಲ್ಲಿ ಟಿಕೇಟ್ ಆಕಾಂಕ್ಷಿಗಳ ಬಂಡಾಯ ಮುಗಿಲು ಮುಟ್ಟಿದ್ದು, ಕಾಂಗ್ರೆಸ್ ವಿರುದ್ಧ ಮತ್ತೊಬ್ಬ ಮಾಜಿ ಶಾಸಕರೊಬ್ಬರು ಟಿಕೇಟ್​ ತಪ್ಪಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಚಿತ್ರದುರ್ಗದ ಮೊಳಕಾಲ್ಮೂರಿನಿಂದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಎನ್​.ವೈ ಗೋಪಾಲಕೃಷ್ಣ ಕೈ ಟಿಕೆಟ್​ ತಪ್ಪಿದ್ದಕ್ಕೆ ಬಿಜೆಪಿ ಸೇರ್ಪೆಡೆಗೊಂಡಿದ್ದಾರೆ. ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಗೋಪಾಲಕೃಷ್ಣ, ನಾನು ಸರ್ಕಾರ ಇಲ್ಲದ ಸಮಯದಲ್ಲೂ ಕಾಂಗ್ರೆಸ್ ಪರ ನಿಂತಿದ್ದೆ. ಈ ಬಾರಿ ಬಳ್ಳಾರಿ ಅಥವಾ ಮೊಳಕಾಲ್ಮೂರು ಕ್ಷೇತ್ರದಿಂದ ಟಿಕೆಟ್​ ಬಯಸಿದ್ದೆ. ಆದ್ರೆ ಇಲ್ಲ ಸಲ್ಲದ ಕಾರಣ ನೀಡಿ ನನಗೆ ಕಾಂಗ್ರೆಸ್ ಟಿಕೆಟ್​ ನೀಡಿಲ್ಲ. ಇದರಿಂದ ನನಗೆ ತುಂಬಾ ನೋವಾಗಿದೆ.

ಬಿಎಸ್​ ಯಡಿಯೂರಪ್ಪ ನಾಯಕತ್ಚ ಒಪ್ಪಿಕೊಳ್ಳುವಂತೆ ರಾಮುಲು ಸಲಹೆ ನೀಡಿದ್ರು. ತನ್ನ ಕುಟುಂಬ, ಮುಖಂಡರ ಜತೆ ಚರ್ಚಿಸಿ ಬಿಜೆಪಿ ಸೇರಿದ್ದೇನೆ ಎಂದರು. ಇನ್ನು ಗೋಪಾಲಕೃಷ್ಣ ಅವರ ಸೇರ್ಪಡೆ ಬಳಿ ಮಾತನಾಡಿದ ಮಾಜಿ ಸಚಿವ ಶ್ರೀರಾಮುಲು ಎನ್.ವೈ ಗೋಪಾಲಕೃಷ್ಣಗೆ ಕಾಂಗ್ರೆಸ್ ಮೋಸಮಾಡಿದೆ. ನಮ್ಮ ಪಕ್ಷಕ್ಕ ಆಹ್ವಾನಿಸಿದ್ದೇವೆ. ಅವರಿಗೆ ಟಿಕೆಟ್ ನೀಡುವುದು ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತೆ ಎಂದರು.