ಓವೈಸಿ ಜೊತೆ ಒಪ್ಪಂದಕ್ಕೆ ಕಾಂಗ್ರೆಸ್​ ಮುಂದಾಗಿದೆ- ನಮ್ಮ ಬಳಿ ನಿಖರ ಮಾಹಿತಿ ಇದೆ-ಶೋಭಾ ಕರಂದ್ಲಾಜೆ ತಿರುಗೇಟು

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದು ಅಧಿಕಾರದ ಗದ್ದುಗೆ ಏರುವ ಕನಸು ಕಾಣುತ್ತಿರುವ ಬಿಜೆಪಿ ತನ್ನ ತತ್ವ ಸಿದ್ಧಾಂತಕ್ಕೆ ವಿರುದ್ಧವಾಗಿ ಅಕ್ಬರುದ್ದೀನ್ ಓವೈಸಿ ಜೊತೆ ಮೈತ್ರಿಗೆ ಮುಂದಾಗಿದ್ಯಾ ಇಂತಹದೊಂದು ಅನುಮಾನ ಸೃಷ್ಟಿಯಾಗಿತ್ತು.

ad ಇದಕ್ಕೆ ಕಟುವಾಗಿ ಉತ್ತರಿಸಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಸಿಎಂ ಸಿದ್ದರಾಮಯ್ಯ ಹಾಗೂ ಗೃಹಸಚಿವರು ಚುನಾವಣೆ ಎದುರಿನಲ್ಲಿ ರಾಜ್ಯದ ಜನರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಎಂಐಎಂ ಜೊತೆ ಒಪ್ಪಂದಕ್ಕೆ ನಾಯಕರನ್ನು ಬಿಟ್ಟಿದ್ದಾರೆ. ಆದರೇ ಜನರ ಹಾದಿ ತಪ್ಪಿಸಲು ಬಿಜೆಪಿ ಎಂಐಎಂ ಜೊತೆ ನಂಟು ಬೆಳೆಸುತ್ತದೆ ಅನ್ನೋ ಸುದ್ದಿ ಹಬ್ಬಿಸುತ್ತಿದ್ದಾರೆ.

 

ಸಿಎಂ ವಿನಾಕಾರಣ ಮಾತನಾಡಬಾರದು ಸೂಕ್ತ ಸಾಕ್ಷಿ ಕೊಡಬೇಕು ಎಂದರು. ಅಲ್ಲದೇ ಎಂಐಎಂ ಜತೆ ಮಾತುಕತೆಗೆ ಕಾಂಗ್ರೆಸ್ ಅಧ್ಯಕ್ಷ ಡಾ.ಜಿ. ಪರಮೇಶ್ವರ ಕೆಲವು ಶಾಸಕರನ್ನೇ ಕಳುಹಿಸಿದ್ದಾರೆ. ಈ ಬಗ್ಗೆ ನಮ್ಮಲ್ಲಿ ನಿಖರ ಮಾಹಿತಿ ಇದೆ. ಇದು ಗೊತ್ತಾಗಿಯೇ ಗೃಹ ಸಚಿವ ರಾಮಲಿಂಗಾರೆಡ್ಡಿ ಹಾಗೂ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ದ ಹುಸಿ ಆರೋಪ ಮಾಡುತ್ತಿದ್ದಾರೆ. ಓವೈಸಿ ಎಲ್ಲಿ ಹೋಗುತ್ತಾರೆ ಏನು ಮಾಡುತ್ತಾರೆ ಎಂಬುದು ನಮಗಿಂತ ಕಾಂಗ್ರೆಸ್ಸಿಗರಿಗೇ ಹೆಚ್ಚು ಮಾಹಿತಿ ಇದೆ ಎಂದು ಶೋಭಾ ಕರಂದ್ಲಾಜೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ರು.